ಪುಟ:ಪೈಗಂಬರ ಮಹಮ್ಮದನು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮ ದನು ಯಿಂದ, , “ಇಲ್ಲ, ನಾವು ಮೂವರು ಇದ್ದೇವೆ : ಸರ್ವವ್ಯಾಪಿಯಾದ ಭಗವಂತನೂ ನಮ್ಮೊಡನಿದ್ದಾನೆ' ಎಂದು ಉತ್ತರ ಕೊಟ್ಟನು. ಭಗವಂ ತನ ದಯೆಯಿಂದಲೇ ಅವರು ಶತ್ರುಗಳ ಕೈಗೆ ಸಿಕ್ಕದೆ ತಲೆ ತಪ್ಪಿಸಿಕೊಂಡು ಓಡಿಹೋಗಿ ಒಂದು ಗುಹೆಯಲ್ಲಿ ಮೂರು ದಿನ ಅಡಗಿಕೊಂಡಿದ್ದರು. ಅಬ್ದುಲ್ಲಾನ ಮಗಳು ಅವರಿಬ್ಬರಿಗೂ ಆ ಮೂರು ದಿನಗಳ ರಾತ್ರಿಯ ವೇಳೆ ಆಹಾರವನ್ನು ತಂದುಕೊಡುತ್ತಿದ್ದಳು. ಮೂರನೆಯ ದಿನ ರಾತ್ರಿ ಅವರಿಬ್ಬರೂ ಬಹಳ ಕಷ್ಟಪಟ್ಟು ಎರಡು ಒಂಟೆಗಳನ್ನು ಸಂಪಾದಿಸಿ ಯಾತ್ರಿಬ್ ನಗರದ ಕಡೆಗೆ ಹೊರಟರು. ಇದರ ಸುಳಿವನ್ನರಿತ ಕೆಲವರು, ಮಹಮ್ಮದನನ್ನು ಹಿಡಿದರೆ ತಮಗೆ ಬಹುಮಾನವು ದೊರೆಯುವುದೆಂಬ ಆಸೆಯಿಂದ, ಅವರನ್ನು ಅಟ್ಟಿಕೊಂಡು ಓಡಿದರು. ಅವರಲ್ಲಿ ಕುದುರೆಯ ಸವಾರನೊಬ್ಬನು ಮಹಮ್ಮದನನ್ನು ಮುಟ್ಟಬಂದರೂ ದೈವ ವಶದಿಂದ ಅವನಿಗೆ ತೊಂದರೆ ಕೊಡದೆಹೋದುದು ಮಾತ್ರವಲ್ಲದೆ ಅವನ ದೈವಭಕ್ತಿ ಯ ಸಾತ್ವಿಕತೆಯನ್ನು ಸೂಚಿಸುವ ಮುಖ ಭಾವವನ್ನು ಕಂಡು, ಅವನ ಕಲ್ಲೆದೆಯ ಕರಗಿ ಪಶ್ಚಾತ್ತಾಪ ಹುಟ್ಟಿ, ಕ್ಷಮಾಪಣೆಯನ್ನು ಬೇಡಿ ಹೊರಟುಹೋದನು. ಅಬ್ದುಲ್ಲಾನಿಗೆ ಅಬೂಬಕರ್ ಎಂಬ ರೂಢಿಯಾದ ಮತ್ತೊಂದು ಹೆಸರಿದ್ದಿತು. ಮಹಮ್ಮದನ ಅಬೂಬಕರನೂ ಅಲ್ಲಿಂದ ಮುಂದೆ ಪ್ರಯಾಣ ಮಾಡಿ ಮೂರು ದಿನಗಳನಂತರ ಯಾತ್ರಿಬ್ ನಗರದ ಸರಹದ್ದಿಗೆ ಸೇರಿದ ಕೊಬಾ ಎಂಬ ಹಳ್ಳಿಗೆ ತಲಪಿದರು. ಮಾರ್ಗಾಯಾಸದಿಂದ ಬಳಲಿಹೋಗಿದ್ದುದರಿಂದ ಮುಂದೆ ಹೋಗಲಾರದೆ ಅವರು ಆ ಹಳ್ಳಿ ಯಲ್ಲಿಯೇ ಇಳಿದು ಅಲ್ಲಿಯ ಪ್ರಾಕೃತಿಕ ಸೌಂದರ್ಯಕ್ಕೆ ಬೆರಗಾಗಿ ಅಲ್ಲಿಯೇ ಕೆಲವು ದಿನಗಳನ್ನು ಕಳೆದರು. ಆ ವೇಳೆಗೆ ಅಲೀಯ ಅಲ್ಲಿಗೆ ಬಂದು ಸೇರಿದನು. ಮಹಮ್ಮದನು ತಲೆ ತಪ್ಪಿಸಿಕೊಂಡು ಹೋದ ರೋಷವನ್ನು ಶತ್ರುಗಳು ಹಿಂದುಳಿದಿದ್ದ ಅಲೀಯ ಮೇಲೆ ತೀರಿಸಿ ಕೊಂಡರೂ, ಅಲೀಯು ಕೆಚ್ಚೆದೆಯ ಶೂರನಾಗಿದ್ದುದರಿಂದ, ಶತ್ರುಗಳ ಕೈಯಿಂದ ತಪ್ಪಿಸಿಕೊಂಡು ಮಕ್ಕಾದಿಂದ ಹೊರಟು ಹಗಲು ಹೊತ್ತು ಗಿರಿ ಗಹ್ವರಗಳಲ್ಲಡಗಿಕೊಂಡಿದ್ದು ರಾತ್ರಿಯ ವೇಳೆಯೇ ಪಯಣ