ಪುಟ:ಪೈಗಂಬರ ಮಹಮ್ಮದನು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಐದನೆಯ ಅಧ್ಯಾಯ ಉನ್ನತಿಯ ಅಂಕುರ ಮಹಮ್ಮದನು ಯಾತ್ರಿಬ್ ನಗರವನ್ನು ಸೇರಿದ ಬಳಿಕ ಅವನೆ ಉನ್ನತಿಯ ಕಾಲವು ಸವಿಾಪಿಸಿತೆಂದು ಹೇಳಬಹುದು. ಅಲ್ಲಿಯ ಜನ ರೆಲ್ಲರೂ ಅವನನ್ನು ಗೌರವಿಸತೊಡಗಿದರು. ಎಲ್ಲ ಸೌಭಾಗ, ಸೂಚನೆ ರಿಗೂ ಅವನಲ್ಲಿ ಆದರ ವಿಶ್ವಾಸಗಳು ಹುಟ್ಟಿದುವು. ಅವನ ಮುಖ ಕಾಂತಿಯನ್ನೂ ಅವನ ಚಿತ್ತಾಕರ್ಷಕ ಸ್ವಭಾವವನ್ನೂ ನೋಡಿದೊಡನೆಯೇ ಅವನು ಮಹಾ ಪುರುಷನೆಂದು ಭಾಸವಾಗುತ್ತಿದ್ದಿತು. ಹಿಂದೆ ಅಶ್ವಾರೋಹಿಯಾಗಿ ಬೆನ್ನ ಂಟಿ ಬಂದು ಕೊಲೆಗಾರನಿಗೆ ಕೂಡ ಅವನನ್ನು ಕೊಲ್ಲಲು ಕೈ ಬಾರದೆ ಪಶ್ಚಾತ್ತಾಪವು ಹುಟ್ಟಿದುದಕ್ಕೆ ಇದೇ ಕಾರಣ. ಅವನಿಗೆ ಈಗ ಶತ್ರುಗಳಾಗಿ ನಿಂತಿದ್ದ ಕೊರೆಷ ಮನೆತನದವರು ಸಹ ಅವನ ಬೋಧನೆಯ ದೆಸೆಯಿಂದ ತಮ್ಮ ಸ್ವಾರ್ಥ ಸಾಧನೆಗೆ ಅವಕಾಶವೂ ತಪ್ಪಿ ಹೋಗುವುದೆಂಬ ಭಯದಿಂದ. ಅವನನ್ನು ದ್ವೇಷಿಸುತ್ತಿದ್ದರೇ ವಿನಾ ಇದಕ್ಕೆ ಮೊದಲು ಅವನನ್ನು ಆಲ್ ಅಮೂಾನ್' ಎಂಬ ಬಿರುದಿನಿಂದ ಗೌರವಿಸಿ ಪ್ರೀತಿಸುತ್ತಿದ್ದರು. ಕಷ್ಟಗಳ ಮೇಲೆ ಕಷ್ಟಗಳೊದಗಿ ಮಹಮ್ಮದನು ಪುಟಕ್ಕಿಟ್ಟಿ ಚಿನ್ನದಂತಾಗಿದ್ದನು. ಅವನಲ್ಲಿ ವ್ಯಕ್ತಿ ವೈಶಿಷ್ಟ್ಯವನ್ನೂ ವ್ಯಕ್ತಿ ಗೌರವವನ್ನೂ ಕೊಡುವ ಎಲ್ಲ ಸದ್ಗುಣಗಳೂ ಜಗದೀಶ್ವರನ ಅನುಗ್ರಹದಿಂದ ಜನ್ಮತಃ ಅಂಕುರ ರೂಪ ದಲ್ಲಿ ನೆಲೆಗೊಂಡಿದ್ದು ಮುಂದೆ ಹುರುಪುಗೊಂಡು ಪರಿಸ್ಪುಟವಾದುವು. ಅವನು ದೀನರ ಮೊರೆಯನ್ನು ಲಾಲಿಸದೆ, ಆರ್ತರಿಗೂ ಅನಾಥರಿಗೂ ತನ್ನ ಕೈಯಲ್ಲಾದ ಸಹಾಯವನ್ನು ಮಾಡದೆ, ಸಿರಿವಂತನೆಂಬ ಹೆಮ್ಮೆಯಿಂದ ಬೀಗಿದುದನ್ನು ಎಂದಿಗೂ ಯಾರೂ ಕಾಣರು ; ಖದೀಜಳ ಕೈಹಿಡಿದುದ ರಿಂದ ಅವನು ಧನದ ರಾಶಿಯ ಮೇಲೆ ಕುಳಿತಿದ್ದರೂ ಆಗಲೂ ತಾಗಿ ಬಾಗಿ ವಿನೀತ ಭಾವದಿಂದಲೇ ಇರುತ್ತಿದ್ದನು. ಅವನು ಬೀದಿಯಲ್ಲಿ ಹೊರಟನೆಂದರೆ, ಫಲ ಭರದಿಂದ ಬಾಗಿರುವ ವೃಕ್ಷದಂತಿದ್ದ ಅವನ ರೀತಿಯನ್ನೂ, ಅವನ ವಿನಯವನ್ನೂ ನೋಡಿ ವಿಸ್ಮಿತರಾದ ಜನರು