ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V, ಉನ್ನತಿಯ ಅಂಕುರ ೪೧ ಅವನನ್ನೇ ದೃಷ್ಟಿಸಿ ನೋಡುತ್ತ, ಅವನ ಕಡೆಗೆ ಕೈಬೆರಳನ್ನು ತೋರಿಸಿ ಬಹಳ ಗೌರವದಿಂದ ಮಾತನಾಡಿಕೊಳ್ಳುತ್ತಿದ್ದರು. ಮಹಮ್ಮದನ ಮೈತ್ರಿಯಾಯಿತೆಂದರೆ ಸ್ನೇಹದ ಸವಿ ರಸದ ನಿಧಿಯೇ ದೊರೆತ ಹಾಗೆ. ಅವನ ನಿಷ್ಕಲ್ಮಷ ಹೃದಯವನ್ನೂ ಅವನ ಸಾತ್ವಿಕ ವೃತ್ತಿಯನ್ನೂ ಕಂಡು ಮನ ದಣಿಯುವಂತೆ ಕೊಂಡಾಡದವರೇ ಇರಲಿಲ್ಲ. ಆದರೂ, ಸವಿ ನುಡಿಗಳನ್ನಾಡಿ ಸುಖವಾಗಿರುವುದರಿಂದಲೇ ಮಹಮ್ಮದನು ತೃಪ್ತಿ ನಾಗಲಿಲ್ಲ. ದೈವಾನುಗ್ರಹದಿಂದ ಅವನಿಗೆ ಜೀವನವನ್ನು ಬೆಳಗುವ ಜ್ಯೋತಿಯ ಸಾಕ್ಷಾತ್ಕಾರವಂಟಾದುದರಿಂದ, ತನ್ನ ದೇಶ ಬಾಂಧವರ' ಅಜ್ಞಾನಾಂಧಕಾರವನ್ನು ತೊಲಗಿಸುವ ದೀಕ್ಷೆಯನ್ನು ವಹಿಸಿದನು. ಬಲಿಷ್ಠರ ಸ್ವಾರ್ಥ ಸಾಧನೆಯ ಬುಡಕ್ಕೆ ಕೊಡಲಿಯನ್ನು ಹಾಕಿದರೆ ತನಗೆ ಎಂತಹ ಕಷ್ಟಗಳು ಒದಗುವುವೆಂಬುದನ್ನು ಅವನು ಅರಿತಿ ದ್ದರೂ ತನ್ನ ಅಂತರಾತ್ಮಕ್ಕೆ ವಿರೋಧವಾಗಿ ನಡೆದು ಅವರ ಹುಸಿ ನಗೆಯ ಪ್ರಸಾದವನ್ನು ಪಡೆಯಲು ಅವನ ಮನಸ್ಕೊಪ್ಪಲಿಲ್ಲ. ಭಗವಂತನ ಕೃಪೆಯಲ್ಲಿ ಭರವಸೆಯನ್ನಿಟ್ಟು, ಪಶು ಬಲಕ್ಕಿಂತಲೂ ಆತ್ಮ ಬಲವು ಹೆಚ್ಚೆಂಬ ಉದಾತ್ತ ತತ್ತ್ವವನ್ನು ಮನಗಂಡು, ಅವನು ತನ್ನ ಸರ್ವಸ್ವ ವನ್ನೂ ತ್ಯಾಗಮಾಡಲು ಸಿದ್ದನಾದನು ; ತನ್ನ ಪ್ರಾಣವನ್ನೆ ಸಣ ವಾಗಿಟ್ಟು ದೇಶೋದ್ಧಾರವೆಂಬ ದ್ಯೋತಕ್ಕೆ ಅನುವಾದನು. ಅವನು ನಿರೀಕ್ಷಿಸಿದ್ದಂತೆಯೇ ಅನೇಕ ಸಂಕಟಗಳು ಬಂದೊದಗಿದರೂ ಅವು ಗಳಿಂದ ಅವನ್ನು ದಿಂಡುಗೆಡಲಿಲ್ಲ ; ಭಗವಂತನ ಕರುಣೆಯಿಲ್ಲವೆಂದು ಭಾವಿಸಿ ಕಳೆಗುಂದಲಿಲ್ಲ. ಕಷ್ಟಗಳು ಹೆಚ್ಚಿದಷ್ಟೂ ಅವನ ಕೆಚ್ಚೆದೆಯು ಚೇಗೇರಿತು; ಅಪಾಯವು ಹೆಚ್ಚಿದಷ್ಟೂ ಅವನು ಭಗವಂತನೇ ಶರಣೆಂದು ನೆರೆ ನಂಬಿ ಕುಳಿತನು. ಅವನು ನಿರ್ವಾಹವಿಲ್ಲದೆ ಯಾತ್ರಿಬ್ ನಗರಕ್ಕೆ ಬಂದನಲ್ಲದೆ ಅಧೈರ್ಯದಿಂದ ಅಳುಕಿ ಎಂದಿಗೂ ಬಂದವನಲ್ಲ. ಸರಿ ಶುದ್ಧಾತ್ಮನೂ ಧೀರನೂ ಆದ ಮಹಮ್ಮದನಿಗೆ ಯಾಬ್ ನಗರದಲ್ಲಿ ವಿಶೇಷ ಆದರ ಗೌರವಗಳು ಲಭಿಸಿದುವು. ಅನೇಕರು ಅವನ ಬೋಧನೆ ಯನ್ನು ಕೇಳಿ ಇಸ್ಲಾಂ ಮತಕ್ಕೆ ಸೇರಿದರು. ಅನರ್ಘವಾದ ವಜವು ಕೂಡ ಕುಂದಣದ ಕಟ್ಟಡವಿಲ್ಲದೆ ಹೇಗೆ ಶೋಭಿಸದೋ ಹಾಗೆಯೇ