ಪುಟ:ಪೈಗಂಬರ ಮಹಮ್ಮದನು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨ ಪೈಗಂಬರ ಮಹಮ್ಮದನ ನೆಲಕ್ಕುರುಳಿಸಬಹುದಾಗಿದ್ದಿತು. ಆದರೆ ಸುರುಷನಾದ ಮಹಮ್ಮದ ನಿಗೆ ಸ್ವಪ್ನದಲ್ಲಿಯ ಅಂತಹ ಯೋಚನೆಯು ಸಾಧ್ಯವಿಲ್ಲ. ಅವನು ಶತ್ತು ಯೋಧನನ್ನು ಕುರಿತು, " ಹಾಗಾದರೆ ಇಂದಿನಿಂದ ಬುದ್ದಿ ಕಲಿತು ಕರುಣಾಶಾಲಿಯಾಗಿ ಬಾಳು ” ಎಂದು ಹೇಳಿ ಕತ್ತಿಯನ್ನು ಅವನ ಕೈಗೆ ಕೊಟ್ಟನು. ಪ್ರಾಣ ಭಯದಿಂದ ತಲ್ಲಣಿಸುತ್ತಿದ್ದ ಆ ವೀರನಿಗೆ ಇದರಿಂ ದುಂಟಾದ ಪರಿಣಾಮವನ್ನು ವರ್ಣಿಸಲಳವಲ್ಲ. ಅವನು ಆಜೀವವೂ ಮಹಮ್ಮದನ ಸೇವೆಯಲ್ಲನುವಾಗಿ ಶಿಷ್ಯ ಭಾವವನ್ನವಲಂಬಿಸಿ ಕೃತಾರ್ಥ ನಾದನು.