________________
೫೭೭ VI, ಮಹಮ್ಮದನ ಅಧಿನಾಯಕತ್ವದ ಒಳಗುಟ್ಟು ಯನ್ನೂ ಸಾಧು ಸ್ವಭಾವವನ್ನೂ ಕಂಡು ಮುಗ್ಧನಾ ತಾನು ಶಿಷ್ಯವೃತ್ತಿ ಯನ್ನು ಕೈಕೊಂಡು ಗುರುವಿನ ಬಳಿಯಲ್ಲಿಯೇ ನಿಂತುಬಿಡುವುದಾt ಹೇಳಿದನು. ರಾಯಭಾರಿಯನ್ನು ಹಿಂದಕ್ಕೆ ಕಳುಹಿಸದೆ ಹಾಗೆ ನಿಲ್ಲಿಸಿ ಕೊಳ್ಳುವುದು ಧರ್ಮವಲ್ಲದುದರಿಂದ ಮಹಮ್ಮದನು ಆತನೆಡಸಿ, (( ನೀನು ನಿರ್ವಂಚನೆಯಿಂದ ಶತ್ರು ಪಕ್ಷದವರ ರಾಯಭಾರವನ್ನು ನೆರೆ ವೇರಿಸಿ, ಆ ಬಳಿಕ ನನ್ನಲ್ಲಿಗೆ ಬಂದು ಶಿಷ್ಯ ಭಾವವನ್ನವಲಂಬಿಸಬಹುದು ಎಂದು ತಿಳಿಸಿದನು. ನ್ಯಾಯಪರತೆಯು ಮಹಮ್ಮದನಲ್ಲಿದ್ದ ಅನೋ : ವಾದ ಮತ್ತೊಂದು ಗುಣ. ದ್ವೇಷಿಗಳ ವಿಷಯದಲ್ಲಿಯ ನ್ಯಾಯ ಪಥವನ್ನು ಬಿಟ್ಟು ವರ್ತಿಸಕೂಡದೆಂಬುದು ಖುರಾನಿನ ಕಟ್ಟಾಜ್ಞೆ. ಮಹ ಮ್ಮದನು ನ್ಯಾಯದ ಹಾದಿಯನ್ನು ಬಿಟ್ಟು ಒಂದು ಹೆಜ್ಜೆಯನ್ನು ಕೂಡ ಅತ್ತಿತ್ತ ಕದಲುತ್ತಿರಲಿಲ್ಲ. ಒಮ್ಮೆ, ಕಳ್ಳತನದ ಅಪರಾಧವ ಹೊತ್ತಿದ್ದ ಧನಿಕಳಾದ ಒಬ್ಬ ಗೃಹಸ್ಟಳು ಮಹಮ್ಮದನಿಗೆ ಆಪ್ತನಾದ ಒಬ್ಬ ಗೃಹ ನಿಂದ ಅವನಿಗೆ ಶಿಫಾರಸು ಹೇಳಿಸಿದಳು. ಮಹಮ್ಮದನು, " ಏನಯಾ ! ಹೀಗೆ ಹೇಳುವೆ ? ಭಗವಂತನ ಧರ್ಮ ಸೂತ್ರಗಳನ್ನು ಮೀರಿ ನಡೆಯ.. ವಂತೆ ನನಗೆ ಸಲಹೆ ಹೇಳುವೆಯಲ್ಲಾ! ಒಡವರಿಗೆ ಊರ ದಂಡನೆ ಯನ್ನು ವಿಧಿಸಿ, ಧನಿಕರಿಗೆ ಅಲ್ಪ ಶಿಕ್ಷೆಯನ್ನು ಮಾಡಿದುದರಿಂದ ಎಷ್ಟೋ ಜನಾಂಗಗಳು ಹಿಂದೆ ನಾಶವಾಗಿ ಹೋದುವು. ಪಕ್ಷಪಾತವೂ ನನ್ನಿಂದ ಸಾಧ್ಯವಿಲ್ಲ ; ನನ್ನ ಮಗಳ ಮೇಲೆ ಕಳ್ಳತನದ ಅಪರಾಧವು ಹೊತ್ತರೂ, ಅವಳ ಕಳ್ಳಗೈಯನ್ನೂ ನಾನು ಕಡಿಸಿಹಾಕತಕ್ಕವನು, ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಬಿಟ್ಟನು. ಒಮ್ಮೆ, ಶತ್ರುಗಳಿಂದ ಕೊಳ್ಳೆ ಹೊಡೆದ ಹಣವು ಹಂಚಿಕೆಯಾಗು ತಿದ್ದಿತಂತೆ ; ಹಂಚುತ್ತಿದ್ದ ಮಹಮ್ಮದನ ಸುತ್ತಲೂ ಅವನ ಜನರು ನಿಂತುಕೊಂಡಿದ್ದರಂತೆ. ಆಗ ಮಹಮ್ಮದನ ಮೇಲೆ ಭಾರವನ್ನು ಬಿಟ್ಟು ನಿಂತುಕೊಂಡಿದ್ದವನೊಬ್ಬನನ್ನು ಮಹಮ್ಮದನು ತನ್ನ ಬೆತ್ತದಿಂದ ಹಿಂದಕ್ಕೆ ತಳ್ಳಿದನಂತೆ. ಹಾಗೆ ಮಾಡುವಲ್ಲಿ, ಬೆತ್ತದ ತುದಿಯು ಅವನ ಮುಖಕ್ಕೆ ತಗುಲಿ ಚರ್ಮವು ಸುಲಿದುಹೋಯಿತಂತೆ. ಮಹಮ್ಮದನು ಮನನೊಂದು, “ ಅಯ್ಯಾ ; ನೀನೂ ಇದೇ ಬೆತ್ತವನ್ನು ತೆಗೆದು