ಪುಟ:ಪೈಗಂಬರ ಮಹಮ್ಮದನು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VIII, ವಿಜಯೋತ್ಸಾಹ ೭೫ ಯೊದಗಿ ಅವನ ಅನುಯಾಯಿಗಳೆಲ್ಲರೂ ಪ್ರಾಣ ಭೀತಿಯಿಂದ ಕಳವಳ ಪಡುತ್ತಿದ್ದರು. ಕಾರ್ಯ ಪಟುಗಳಾಗಿ ಭಗವದ್ಭಕ್ತಿಯಿಂದ ಕೆಲಸ ಮಾಡುತ್ತಿದ್ದರೂ ತಮಗೆ ಜಯವಾಗುವುದೆಂದು ಭರವಸೆಯನ್ನಿಟ್ಟು ಕೊಳ್ಳಲು ಮಾತ್ರ ಅವರಿಗೆ ಅವಕಾಶವೇ ಇರಲಿಲ್ಲ. ಆದುದರಿಂದ, ಭಗವಂತನೇ ಅನುಗ್ರಹ ಮಾಡಿ ಭಾವಿ ಸೌಭಾಗ್ಯದ ಸೂಚನೆಯನ್ನು ಮಹಮ್ಮದನಿಗೆ ಕೊಟ್ಟಿರಬಹುದಲ್ಲವೆ? ಈ ವಿಷಯವು ಹೇಗಾದರೂ ಇರಲಿ ; ಮೆದೀನಾ ನಗರವನ್ನು ಮುತ್ತುವುದರಲ್ಲಿ ಅದೇ ಶತ್ರುಗಳ ಕೊನೆಯ ಪ್ರಯತ್ನ ವೆಂಬುದನ್ನು ಮಹಮ್ಮದೀಯರು ಮನಗಂಡರು ; ಈಗ ಶತ್ರುಗಳನ್ನು ಸೋಲಿಸಿದರೆ ಅಲ್ಲಿಂದ ಮುಂದೆ ನಿರುಪಾಧಿಕವಾಗಿರ ಬಹುದೆಂದು ಅವರೆಲ್ಲರಿಗೂ ನಿರ್ಧರವಾಯಿತು. ಆದಕಾರಣ ಅವರೆಲ್ಲರೂ ಮತ್ತಷ್ಟು ಹುರಿಗೊಂಡರು. ಕಾಲ ಕ್ರಮದಲ್ಲಿ ಶತ್ರುಗಳು ಮೆದೀ ನಾ ನಗರದ ಬಳಿಗೆ ಬಂದರು ; ಅವರ ಸೈನ್ಯವು ಕಂದಕದಿಂದಾಚೆಗೆ ನಿಂತು ಯುದ್ಧ ಮಾಡತೊಡಗಿತು. ಮುತ್ತಿಗೆಯು ಒಂದು ತಿಂಗಳ ಕಾಲ ನಡೆಯು ಮುತ್ತಿಗೆ ವಷ್ಟರಲ್ಲಿ ಆಹಾರ ಸಾಮಗ್ರಿಗಳು ಕಡಿಮೆಯಾದು ದರಿಂದ ಮಹಮ್ಮದನಿಗೂ ಅವನ ಕಡೆಯವರಿಗೂ ಬಹಳ ತೊಂದರೆಯಾಯಿತು. ಇದರ ಜೊತೆಗೆ ಮೆದೀನಾ ನಗರದಲ್ಲಿ ಕೆಲವು ಮಂದಿ ಯೆಹೂದ್ಯರು ದ್ರೋಹ ಚಿಂತನೆ ಮಾಡಿ ಶತ್ರುಗಳಿಗೆ ಸಹಾಯ ಮಾಡಿದರು. ಆದರೂ, ಮಹಮ್ಮದನು ಎದೆಗುಂದದೆ ತಮ್ಮಲ್ಲಿ ಒಬ್ಬ ಮನುಷ್ಯನು ಉಳಿದಿರುವ ವರೆಗೂ ಶತ್ರುಗಳೊಡನೆ ಕಾಡದೆ ಬಿಡ ಕೂಡದೆಂದು ಸೈನಿಕರನ್ನು ಹುರಿದುಂಬಿಸಲು, ಅವರೆಲ್ಲರೂ ಏಾರಿದ ಪರಾಕ್ರಮದಿಂದ ಯುದ್ದ ಮಾಡಿದರು. ಪರಿಣಾಮದಲ್ಲಿ ಶತ್ರುಗಳ ಪ್ರಯತ್ನವು ನಿಷ್ಪಲವಾಗಿ ಮಹಮ್ಮದೀಯರೆಲ್ಲರಿಗೂ ಅತ್ಯಾನಂದ ವಾಯಿತು : ಕಂದಕವನ್ನು ದಾಟಿಬಂದು ಮಹಮ್ಮದೀಯರನ್ನು ನಾಶ ಗೊಳಿಸಬೇಕೆಂದು ಶತ್ರುಗಳು ಸರ್ವ ಪ್ರಯತ್ನವನ್ನು ನಡೆಸಿದರೂ ಅವರ ಉದ್ದೇಶವು ನೆರವೇರಲಿಲ್ಲ. ಅಷ್ಟರಲ್ಲಿ, ಅವರು ತಂದಿದ್ದ ಆಹಾರ ಸಾಮಗ್ರಿಗಳು ಮುಗಿದುಹೋಗಿ, ಮಹಮ್ಮದೀಯರ ಹೊಡೆತವು ಪ್ರಯತ್ನ ಕಂದಕವನ್ನು ಸರ್ವ ಪ್ರಯತ್ನವನು ತಂದಿದ್ದ ಆ