________________
X, ಒಪ್ಪಂದವಾದ ಎರಡನೆಯ ವರುಷ ೮೯ ಅನುಯಾಯಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ ಎಂದು ಕೈಜರನಿಗೆ ತಿಳಿಸಿದನು. ಈ ಮಾತುಗಳು ಮಹಮ್ಮದನ ಶತ್ರುವಿನ ಬಾಯಿಂದ ಬಂದುದರಿಂದ ಅವಕ್ಕೆ ಮತ್ತಷ್ಟು ಬೆಲೆ ಹೆಚ್ಚಿ ಕೈಜರನ ಸಂತೋಷಭರಿತನಾದನು. ಅವನು ತನ್ನ ಪ್ರಜೆಗಳಲ್ಲಿ ಮುಖ್ಯಸ್ಥರಾದವ ರನ್ನು ಸಭೆ ಸೇರಿಸಿ, ತಾವುಗಳೆಲ್ಲರೂ ಇಸ್ಲಾಂ ಮತವನ್ನವಲಂಬಿಸು ವುದು ಉತ್ತಮವಲ್ಲವೇ ಎಂದು ಕೇಳಲು, ಅವರು ಯಾರೂ ಅದಕ್ಕೆ ಒಪ್ಪಿಗೆಯನ್ನು ಕೊಡಲಿಲ್ಲ. ಪ್ರಜಾ ಪ್ರಮುಖರ ವಿರೋಧವನ್ನು ಕಟ್ಟಿ, ಕೊಂಡು ಹೊಸ ಮತವನ್ನು ಹರಡುವುದು ಆ ದೊರೆಗೆ ಸೂಕ್ತ ತೋರಲಿಲ್ಲ. ಆದಕಾರಣ, ಇಸ್ಲಾಂ ಮತದಲ್ಲಿ ತನಗೆ ಸಂಪೂರ್ಣ ಸಹಾನುಭೂತಿಯಿದ್ದರೂ ಕೈಜರನು ಸುಮ್ಮನಿರಬೇಕಾಯಿತು. ಹುಜಾಫನ ಮಗನಾದ ಅಬ್ದುಲ್ಲಾ ಎಂಬಾತನು ಪರ್ಷಿಯಾ ದೇಶದ ಖುಸ್ರ ಚಕ್ರವರ್ತಿಯ ಬಳಿಗೆ ಮಹಮ್ಮದನ ರೂಪವನ್ನು ತೆಗೆದುಕೊಂಡು ಹೋಗಿದ್ದವನು. ನಿರೂಪದಲ್ಲಿ ಮುಸಚಕ್ರವರ್ತಿಯು ಹೆಸರನ್ನು ಬರೆಯುವುದಕ್ಕೆ ಮೊದಲೇ ಮಹಮ್ಮದನ ಹೆಸರು ಬರೆದಿದ್ದು ದನ್ನು ಕಂಡು ಚಕ್ರವರ್ತಿಯು ಕೋಪದಿಂದ ಕಿಡಿಕಿಡಿಯಾಗಿ ಮಹಮ್ಮದ ನನ್ನು ಮಿತಿ ಮೀರಿ ಶಪಿಸಿ, ಆ ನಿರೂಪವನ್ನು ಚರು ಚೂರಾಗಿ ಹರಿದುಹಾಕಿದನು, ಚಕ್ರೇಶ್ವರನಾದ ತನ್ನ ಹೆಸರನ್ನು ಮೊಟ್ಟಮೊದಲು ಬರೆಯಿಸದೆ ತಪ್ಪಿದ ಉದ್ದಟತನಕ್ಕಾಗಿ ಮಹಮ್ಮದನನ್ನು ಶಿಕ್ಷಿಸುವೆ ನೆಂದು ಗರ್ಜಿಸಿ, ಅವನನ್ನು ಹಿಡಿತರಿಸುವಂತೆ ಯಮನ್ ರಾಷ್ಟ್ರದಲ್ಲಿದ್ದ ತನ್ನ ಪ್ರತಿನಿಧಿಯಾದ ಬಜನ್ ಎಂಬಾತನಿಗೆ ಅಪ್ಪಣೆಮಾಡಲು, ಆತನು ತನ್ನ ಸೈನಿಕರಿಬ್ಬರನ್ನು ಇದಕ್ಕಾಗಿ ಮೆದೀನಾ ನಗರಕ್ಕೆ ಕಳುಹಿಸಿದನು. ಅರಬ್ಬಿಯವರೆಂದರೆ ಕೇವಲ ಸಾಮಾನ್ಯರೆಂದೂ, ಮಹಮ್ಮದನು ಸುಲಭ ವಾಗಿ ಹಿಡಿತರಲು ಸಾಧ್ಯನಾದ ಅಲ್ಬ ಮನುಷ್ಯನೆಂದೂ ಪರ್ಷಿಯಾ ಚಕ್ರವರ್ತಿಗೆ ಭಾವನೆಯಿದ್ದಂತೆ ತೋರುತ್ತದೆ. ಯಮನ್ ರಾಷ್ಟ್ರ) ದಿಂದ ಮದೀನಾಕ್ಕೆ ಹೋದ ಸೈನಿಕರು ಅಲ್ಲಿಯ ಪ್ರಜೆಗಳಿಗೆ ಮಹ ಮೃದನಲ್ಲಿದ್ದ ಪ್ರೀತಿ ಗೌರವಗಳನ್ನೂ ಗುರು ಭಕ್ತಿಯನ್ನೂ ಕಂಡು ಬೆರಗಾದರು. ಅವರು ಮಹಮ್ಮದನ ಬಳಿಗೆ ಹೋಗಿ ತಾವು ಬಂದ