ಪುಟ:ಪ್ರತಾಪರುದ್ರದೇವ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಪೀಠಿಕ, ಕವಿಹೃದಯವನ್ನೂ, ಕವಿತಾಚಮತ್ಕಾರವನ್ನೂ ನಟನಾಕೌಶಲ್ಯದಿಂದ ತೋರಿಸಿದರೆ ನೋಟಕರಿಗೆ ಸಾಕಾದಷ್ಟು ಅನಂದವನ್ನುಂಟುಮಾಡುವನು ಆದರೆ ಕವಿಹೃದಯವನ್ನು ತಾನು ತಿಳಿದುಕೊಂಡು ಅನಂತರ ಸರುಗೆ ತೋರ್ಸ ಡಿಸಲಾರದ ನವಕನು, ಸಂಗೀತಸಹಾಯದಿಂದ ಹಾಗು ಹೀಗು ಕಾಲಕರಣ ಮೂಡಬೇಕೆಂದು ಕಕ್ಕಲಾತಿಪಡುವನು, ನಾಟಕಗಳಿಗೆ ಸಂಗೀತ ಸೇರಿಸಿದರೆ ಕೆಲವು ಸಂದರ್ಭಗಳಲ್ಲಿ ಶೃಂಗಾರಾದಿ ಕೆಲವು ರಸಗಳೊಡನೆ ಅದು ಬೆರಸಿ ಕೊಂಡು ವಿಶೇಷ ಕುಂದಕ ಮಾಡದಿದ್ದರೂ, ಭಯಾನಕಮುಂತಾದ ಮತ್ತೆ ಕೆಲವು ರಸಗಳೊಡನೆ ಅದನ್ನು ಹೇಳಿದರೆ ಸಕ್ಕರೆಗುಪ್ಪನ್ನು ಬೆರಸಿದಂತೆ ರಸ ಭಂಗವಾಗಿ ಕವಿತಾ ಚಮತ್ಕಾರವನ್ನೆಲ್ಲಾ ಕೆಡಿಸಿ ನಾಟಕವನ್ನು ಅಸಾರನಾಗಿ ಮಾಡುವದು. ರೌದ ಭಯನಾಕ ರಸಪ್ರಧಾನವಾದ ಈ ಪ್ರತಾಪರು ದ್ರದೇವನಾಟಕದ ಶಬರಸ್ವಭಾವವನ್ನು ಸಾಧ್ಯವಾದಮಟ್ಟಿಗೂ ಕಮ್ಮಿ ಮಾ ಡದೆ ಇರಬೇಕು. ಇದಕ್ಕೆ ಸಂಗೀತ ಕುಚೋದ್ಯಗಳನ್ನು, ಬೆರಸಿದರೆ ರಸಭ ಗವಾಗುವದಲ್ಲದೆ ಮುಖ್ಯರಸಗಳು ಕಮ್ಮಿಯಾಗುವವು. ಅದುಕಾರಣ ಪಂಡಿತ ಪಾಮರರಚನೆಯಾಗುವಂತೆ ಸಂಗೀತವನ್ನು ಬಿಟ್ಟು ಸಾಧ್ಯವಾದಮಟ್ಟಿಗೆ ವಚನದೊಂದಿಗೆ ನಾನಾ ಬಗೆಯಾದ, ಸಮಸಮ ಸಾದ ವೃತ್ತಗಳಿಂದಲೂ, ರಗಳೆಗಳಿಂದಲೂ, ಕಾವ್ಯಭಾಗವನ್ನು ಹೇಳಿರುವದು. ಪತ್ರಗಳ ಕೆಳಗಡೆ ಅಧಮ ಪಕ್ಷಕ್ಕಾಗಿ ಕೊಟ್ಟಿರುವ ಸಣ್ಣ ಅಕ್ಷರದ ರಾಗ ಮಟ್ಟುಗಳನ್ನು ಬಿಟ್ಟು ಕಾವ್ಯಭಾಗದ ಸಾರವನ್ನೇ ಹಿಡಿದು ನಟಿಸಿದರೆ ರಚನೆ ಕೊಡುವದರಲ್ಲಿ ಸಂದೇಹವಿಲ್ಲ. ಆದರೆ ಆರೀತಿ ನಟಿಸಬೇಕಂದರೆ ಕೊಂಚಶ್ರಮ ತೆಗೆದುಕೊಳ ಬೇಕು. ಇದನ್ನು ಕಂಡು ನಟಿಸತಕ್ಕವರು ಈ ನಾಟಕದ ಗೋಜಿಗೆ ಹೋಗಿ ಆ ಶ್ರಮವನ್ನು ನಾವ್ಯಾತಕ್ಕೆ ತೆಗೆದುಕೊಳ್ಳಬೇಕು. ಇತರ ನಾಟಕಗಳಿ೦ದ ನಮಗೆ ಸಾಟ ಹಾಕಿರುವಂತೆ “ ಅಂತು ಇಂತು ಆಟವಾಯಿತು ಭಾಗ ವತರಿಗೆ ಕೊಟ್ಟಿದ್ದಂತೂ ಸಂತು ಎನ್ನೋಣವೆಂದರೆ, ಇದನ್ನು ನಟಿಸತಕ್ಕೆ ವರೇ ಇಲ್ಲದೆ ಕಾನನದ ಬೆಳದಿಂಗಳಂತೆ ಬರೆದದ್ದೂ ವ್ಯರ್ಥವಾಗುತ್ತೆಂದು, ತನಗೆ ಅಸಂಗತವಾಗಿ ತೋರುವದನ್ನು ಉದರಪೋಷಣೆಗಾಗಿ ಸಂಗತ ವಾದದ್ದೆಂದು ಹೇಳಿಕೊಂಡು ಪರಾಶ್ರಯವನ್ನು ಮಾಡುವವನಂತೆ ಉತ್ತ ಮಪಕ್ಷವಲ್ಲದಿದ್ದರೆ ಅಧಮರಕ್ಷವಾಗಿಯಾದರೂ ಇರಲೆಂದು ಈ ನಟನಾ ಜನ