೩೪ . ಪ್ರತಾಪರುದ್ರದೇವ, ಶೂರ.-ಇದೇನು ಸ್ವಾಮಿ ! ಇನ್ನು ಮಲಗಲಿಲ್ಲವೆ ? ಪ್ರಭುಗಳು ಶಯನವನ್ನ ಲಂಕರಿಸಿರುವರು. ಅವರು ಈ ದಿವಸ ವಿಶೇಷ ಸುಖವ ನ್ನನುಭವಿಸಿ, ಆನಂದಭರಿತರಾಗಿ, ನಿಮ್ಮ ಸೇವಾಹನಗಳಿಗೆ ಉಡಿಗೆ ಉಚಿತಾರ್ಥಗಳನ್ನು ಕಳುಹಿಸಿರುವರು. ಈ ದಿವಸದ ಜ್ಞಾಪ ಕಾರ್ಥವಾಗಿ, ಈ ಮುಕ್ತಾಹಾರವನ್ನು ನಿಮ್ಮರನಿಯರಿಗೊಪ್ಪಿಸಿ, ಇಂದಿನ ಆತಿಥ್ಯದಿಂದ ಬಹಳ ಸಂತುನ್ನಿಯನ್ನು ಹೊಂದಿದೆನೆಂದು ವಿಜ್ಞಾಪಿಸುವಂತೆ ಅಪ್ಪಣೆಯಂ ವಾಲಿಸಿರುವರು. ವೀರ-ಪ್ರಯೋಜನವೇನು, ಸರಣೆಗವಕಾಶವಿಲ್ಲದೆ, ಅನೇಕ ನ್ಯೂನತೆಯಿಂದ ಲಜ್ಞೆ ಪಡಬೇಕಾಗಿರುವದು, ಕಾಲವಿದ್ದರೆ ಬಹಳ ಸಂಭ್ರಮದಿಂದ ರಾಜೋಪಚಾರ ನಡೆಯುತ್ತಿತ್ತು, ಶೂರ-ಕೊಂಚವೂ ಊನವಿರಲಿಲ್ಲ. ಬಹಳ ಶೋಭಾಯಮಾನ ವಾಗಿತ್ತು. ನಿನ್ನೆ ರಾತ್ರಿ ನಾನು ಕನಸಿನಲ್ಲಾ ಶಕ್ತಿಗಳನ್ನು ಕಂಡೆನು. ಅವರ ಮಾತು ನಿಮ್ಮಲ್ಲಿ ಕೊಂಚಮಟ್ಟಿಗೆ ನಿಜವಾಗಿ ರುವದು. ವೀರ. ಅವರು ನನ್ನ ಜ್ಞಾಪಕದಲ್ಲೆ ಇಲ್ಲ. ಆದರೂ ಬಂದು ಾಮಗಳಿಗೆ ನಮಗೆ ಸಹಾಯಮಾಡಿದರೆ, ಆವಾಗಿದನ್ನಾ ಲೋಚಿಸ ಬಹುದು. ಶೂರ-ತಮ್ಮ ವಿರಾಮವನ್ನೇ ನನ್ನ ವಿರಾಮವು ಆಿಸುತ್ತಿರು ವದು. ವೀರ.-ನನ್ನ ಆಲೋಚನೆಯಂತೆ ನೀವು ಬಂದರೆ ಅದರಿಂದ ಮುಂದೆ ಸುಖವುಂಟು. ರೂರ-ಸುಖಕ್ಕಾಗಿ ನಾನು ಯಾವದನ್ನೂ ನಿರಾಕರಿಸತಕ್ಕವನ
ಪುಟ:ಪ್ರತಾಪರುದ್ರದೇವ.djvu/೬೭
ಗೋಚರ