ಪುಟ:ಪ್ರತಾಪ ರುದ್ರದೇವ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿ ಶ್ರೀ ಕೆ. ಯಿಂದ ಬರಿ ಕನ್ನಡದಿಂದಲೆ ಕನ್ನಡ ಕಾವ್ಯವನ್ನು ಬರೆಯುವದಕ್ಕಾಗುವದಿಲ್ಲ; ಪ್ರಯತ್ನ ಪಟ್ಟು ಬರದರೂ ರಸವತ್ತಾಗುವದಿಲ್ಲ. ಅದರ ಜೊತೆಗೆ ಸಂಸ್ಕೃತ ಶಬ್ದಗಳನ್ನು ಸೇರಿಸಿ ರಸವತ್ತಾಗಿ ಮಾಡಬೇಕೆನ್ನುವವರು ; ಅನ್ನ ಸಾರು ತುಪ್ಪಗಳಲ್ಲಿಲ್ಲದ ರುಚಿಗಳನ್ನು ಚಟ್ಟಣಿ ಹಲ್ಯ ಮುಂತಾದವುಗಳಿಂದ ಹರಿಗೆ ಹಿಸಿ ಭೋಜನವನ್ನು ಇನ್ನೂ ರವಾಗಿ ಮಾಡಲು ಯಾತಕ್ಕೆ ಆಕ್ಷೇಪಿಸು ಮರು ? ಕನ್ನಡ ಸಂಸ್ಕೃತಗಳೆರಡರಲ್ಲೂ ಇಲ್ಲದ ವಿಷಯಗಳೂ ಶಬ್ದಗಳೂ, ಶಬ್ದ ಪ್ರಯೋಗಚಾತುಧ್ಯವೂ, ವಾಕ್ಯಬಂಧನ ಕಾವ್ಯಬಂಧನಗಳ ರೀತಿ ಯೂ, ಲಕ್ಷಣ ಅಲಂಕಾರಗಳೂ, ಕವಿತಾಚಮತ್ಕಾರಗಳೂ, ಹಿಂದುಸ್ತಾನಿ ಇಂಗ್ಲೀಷ್ ಮುಂತಾದ ಇತರ ಭಾಷೆಗಳಿಂದ ತೆಗೆದುಕೊಂಡು ಕನ್ನಡವನ್ನು ರಸವತ್ತಾಗಿ ಮಾಡಿದರೇತಕ್ಕೆ ಆಕ್ಷೇಪಣೆ ಅನ್ನ ದಂತಿರುವ ಕನ್ನಡದಲ್ಲೇ ರುಚಿ ಸಾಲದು. ಅದನ್ನು ರಸವತ್ತಾಗಿ ಮಾಡುವದಕ್ಕಾಗಿ ಸಾರು ತುಪ್ಪ ದಂತೆ ಸಂಸ್ಕೃತವನ್ನು ಬೆರಸಲುದ್ಯೋಗಿಸಿ, ಹೊ೦ದು ಹೊಂದದೆ ಇರಲಿ, ಆವಶ್ಯಕವಿರು ಇಲ್ಲದೆ ಇರಿ, ಸಂಸ್ಕೃತಶಗಳನ್ನು ಕನ್ನಡಕ್ಕೆ ಬೆರಸುತ್ತ ಕಡೆಗೆ ಅನ್ನವನ್ನು ಬಿಟ್ಟೇಬಿಟ್ಟು, ಬರಿ ಸಾರ.ತುಪ್ಪವನ್ನೇ ಕುಡಿಕುಡಿದು ಭೋಜನವಾಯಿತೆಂದು ಬಾಯಿ ಸವರುತ್ತಿರುವದು ಭೋಜನವೊ ? ಬಾತಾ ಕಾನಿತನವೋ? 2. ಆ ಇಟಾಲಿಯ ಸಾಮತಿಯನ್ನು ಸಂಸ್ಕೃತ ಗ್ರಂಥಗಳನ್ನು ಕನ್ನಡಿಸುವ ಸಂದರ್ಭಕ್ಕಾಗಿ ಹೇಳಿದಂತೆ ಕಾಣುವದಿಲ್ಲ. ತಮ್ಮ ನೆರೆಹೊರೆ ಭಾಷೆಗಳಲ್ಲಿ ಭಾಷಾಂತರಗಳು ನಡೆಯುತ್ತಿರವ ಸಂದರ್ಭಗಳನ್ನು ಮಾತ್ರ ಕುರಿತು ಕೇಳಿರಬಹುದು. ಆಯಿತು. ಆ ಸಂದರ್ಭದಲ್ಲೂ ಅದು ಎಚ್ಚರ ಮಟ್ಟಿಗೆ ಅನ್ವಯಿಸುವದು ? ಆ ಭಾಷೆಗಳಂತೆ ನಮ್ಮ ದೇಶದಲ್ಲಿ ಕನ್ನಡ ತೆಲುಗು ಮುಂ ತಾದ ಭಾಷೆಗಳಿರುವವು ಒಂದಾನೊಂದು ಕಾಲದಲ್ಲಿ ಒಂದೇ ತಟಾಕವಾ ಗಿದ್ದು ಕಾಲಕ್ರಮದಿಂದ ಮಧ್ಯದಲ್ಲಿ ಒಂದು ಏರಿ ನಿಶ್ಚಿತವಾಗಿ ತಟಾಕ ದ್ವಯವಾಗಲು, ಒಂದರ ನೀರು ಮತ್ತೊಂದಕ್ಕೆ ಹೋಗಲು ಅವಕಾಶವಿಲ್ಲದೆ ಅವುಗಳ ನೀರಿನಲ್ಲಿ ಸರಿಮಾಣವೂ, ನೀರುಮಟ್ಟವೂ, ಸಾರವೂ, ವ್ಯತ್ಯಾ