ವಿಷಯಕ್ಕೆ ಹೋಗು

ಪುಟ:ಪ್ರತಾಪ ರುದ್ರದೇವ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ನೇ ಅಂಕ. ೧ನೇ ಸಾನ. ವೀರಸೇನನ ಅರಮನೆಯಲ್ಲೊಂದು ಹಜಾರ, ಪ್ರವೇಶ.-ದೀವಟಿಗೆಯನ್ನು ಹಿಡಿಸಿಕೊಂಡು, ಶೂರಸೇನ, ಅಧಿ. ಶೂರ-ತರುಣನೆ ! ರಾತ್ರಿ ಎಷ್ಟು ಕಳೆದುಹೋಗಿರುವದು ? ಅಧಿ.-ಚಂದ್ರನಸಾಚಲವನ್ನ ಲಂಕರಿಸಿರುವನು. ಗಂಟೆ ಎಪ್ಪಾಗಿ ರುವದೊ ಗೊತ್ತಿಲ್ಲ. ಅದನ್ನು ಹೊಡೆದದ್ದು ನನಗೆ ಕೇಳಿಸಲಿಲ್ಲ. ಶೂರ-ಈ ದಿವಸ ಚಂದ್ರಾಸವು ಹನ್ನೆರಡು ಗಂಟೆಗಾಗತಕ್ಕದ್ದು. ಅದ್ರಿ -ಹಾಗಾದರಿನ್ನೂ ಹೊತ್ತಾಗಿರುವದು. ಶೂರ.-ಇಗೋ ! ನನ್ನ ಖಡ್ಗವನ್ನು ತೆಗೆದುಕೊ, ಗಗನದಲ್ಲಿ ನಕ್ಷತ್ರಗಳೂ ಅಡಗುತ್ತಿರುವವು. ನನ್ನ ರೆಪ್ಪೆಗಳಮೇಲೆ ಸೀಸದ ಗುಂಡುಗಳನ್ನಿಟ್ಟಂತಿರುವದು, ನಿದ್ರೆ ಮಾತ್ರ ಬಾರದು :- ಕಂದ | ನಿದ್ದೆಯನಾಡದಿಯುತಿಹ || ಬುದ್ದಿಯೊಳುದಯಿಸುವಘೋರಚಿಂತೆಗಳಿಂದೀ || ಗುದ್ದರಿಸಮಾಧವನೆಕೊಡು | ನಿದ್ದೆಯನೇಮನವೆಲದಿರುನೀನಿದಕೆ || ೧ || ಪ್ರವೇಶ -ದೀವಟಿಗೆಯನ್ನು ಹಿಡಿಸಿಕೊಂಡು, ವೀರಸೇನ. ನನ್ನ ಕತ್ತಿಯಂ ಕೊಡು, ಅದ್ಯಾರು ? ವೀರ -ಸ್ನೇಹಿತನೇ ! CR