ಪುಟ:ಪ್ರಬಂಧಮಂಜರಿ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್೮ ಪುಸ್ತಕಭಂಡಾರಗಳು, ನಿಶ್ಯಬ್ದವಾಗಿರುವುದು. ಸಾವಿರಾರು ಪುಸ್ತಕಗಳುಳಭಂಡಾರವನ್ನೂ ,ಅದರಲ್ಲಿ ಸದ್ದು ಮಾಡದೆ ಓದುತ್ತಿರುವ ಅನೇಕರನ್ನೂ ನೋಡಿದಮಾತ್ರದಿಂದಲೇ ಅಲ್ಲಿಗೆ ಹೋದವನಿಗೆ ತಾನೂ ಹಾಗೆಯೇ ಪುಸ್ತಕಗಳನ್ನೋದಿ, ಓದಿದ್ದನ್ನು ಚೆನ್ನಾಗಿ ಪರ್ಯಾಲೋಚಿಸಿ ತಿಳಿದುಕೊಳ್ಳುವ ಅಭಿಲಾಷೆಯುಂಟಾಗುವುದು. - ಲಂಡನ್ ಪಟ್ಟಣದಲ್ಲಿರುವ ಬ್ರಿಟಿಷ್ ಮ್ಯೂಸಿಯಂ ಎಂಬ ದೊಡ್ಡ ಪುಸ್ತಕಭಂಡಾರವು ಲೋಕದಲ್ಲೆಲ್ಲ ಅತ್ಯುತ್ಕೃಷ್ಟವಾಗಿರುವುದು. ಅದರಲ್ಲಿ ಮುನ್ನೂರು ಜನಗಳು ಒಟ್ಟಿಗೆ ಕುಳಿತುಕೊಂಡು ಓದುವುದಕ್ಕನುಕೂಲಿಸುವಷ್ಟು ಸ್ಥಳವಿರುವುದಂತೆ, ಸಾಧಾರಣವಾಗಿ ಎಲ್ಲರೂ ಅಡಿಗಡಿಗೆ ನೋಡಲು ಪೇಕ್ಷಿಸುವ ಪುಸ್ತಕಗಳೆಲ್ಲಗುಂಡಾಗಿರುವ ಆ ಕಟ್ಟಡದ ಸುತ್ತಲೂ ಇಡಲ್ಪಟಿವೆ. ಇವುಗಳನ್ನು ಭಂಡಾರಾಧ್ಯಕ್ಷನ ಅಪ್ಪಣೆಯಿಲ್ಲದೆ ಯೇ ಬಳಸಿಕೊಳ್ಳಬಹುದು. ಬೇರೆ ಪುಸ್ತಕಗಳು ಬೇಕಾದರೆ, ಒಂದು ಚೀಟಿಯ ಮೇಲೆ ಬರೆದು ಅಧ್ಯಕ್ಷನಿಗೆ ಕಳುಹಿಸಿ, ಆತನು ಅದನ್ನು ತಂದುಕೊಡುವ ವರೆಗೂ ತನ್ನ ಸ್ಥಳದಲ್ಲಿಯೇ ನಿಶ್ಯಬ್ದವಾಗಿ ಕುಳಿತಿರಬೇಕು. ಈ ಪದ್ದತಿಯನ್ನು ಎಲ್ಲಾ ಪುಸ್ತಕಭಂಡಾರಗಳಲ್ಲಿಯೂ ಅನುಸರಿಸುವುದುತ್ತಮ. ಏಕೆಂದರೆ, ಒಬ್ಬ ವಿದ್ಯಾರ್ಥಿ ತನಗೆ ತಿಳಿಯದಿರುವ ಒಂದು ಕಷ್ಟವಾದ ಭಾಗವನ್ನು ದೊಡ್ಡ ದೊಡ್ಡ ಪುಸ್ತಕಗಳಿಂದ ತಿಳಿದುಕೊಳ್ಳಬೇಕೆಂದುಒಂದು ಪುಸ್ತಕಭಂಡಾರಕ್ಕೆ ಹೋಗುತಾ - ನಂದಿಟ್ಟುಕೊಳ್ಳೋಣ. ಅವನಿಗೆ ತಿಳಿಯದ ಆ ಅಂಶವು ಯಾವ ಪುಸ್ತಕದಲ್ಲಿ ಸ್ಪಷ್ಟವಾಗಿ ಹೇಳಿದೆಯೋ ಅದನ್ನ ರಿಯದೆ, ಅವನು ಬಾರಿಬಾರಿಗೂ ಅಧ್ಯಕೃನಿಗೆ ಬರೆದುಕಳುಹಿಸಬೇಕಾಗುವುದು ಇದರಿಂದ ಭಾಂಡಾರಿಕನಿಗೂ ಅನಾವಶ್ಯಕವಾದ ತೊಂದರೆಯುಂಟಾಗುವುದು. ಆದುದರಿಂದ ಮಾನ್ಯವಾಗಿ ಎಲ್ಲರಿಗೂ ಅಡಿಗಡಿಗೆ ಬೇಕಾಗುವ ದೊಡ್ಡ ಪುಸ್ತಕಗಳನ್ನು ಓದುವವರ ಹತ್ತಿರದಲ್ಲಿಯೇ ಮೇಜಿನ ಮೇಲಿರಿಸಿ, ಇತರ ಪುಸ್ತಕಗಳನ್ನು ತನ್ನಲ್ಲಿ ಇಟ್ಟುಕೊಂಡು, ಓದುವವರು ಚೀಟಿಬರೆದು ಕಳುಹಿಸಿದಾಗ ಅವರಿಗೆ ಕೊಡಬೇಕು. ಮೇಜಿನ ಮೇಲಿಟ್ಟಿರುವ ಅಂಥದೊಡ್ಡ ದೊಡ್ಡ ಪುಸ್ತಕಗಳನ್ನು ಯಾರಾದರೂ ಪತ್ತೆಯಿಲ್ಲದೆ ಸಾಗಿಸುವುದು ಅಸಾಧ್ಯ. ಆದುದರಿಂದಲೇ ಬ್ರಿಟಿಷ್ ಮೂಸಿಯಮ್ಮಿ ನಲ್ಲಿ ಈ ಕ್ರಮವನ್ನನುಸರಿಸಿರುವರು. ಇಂಥ ಪುಸ್ತಕಭಂಡಾರಗಳನ್ನು ಪ್ರತಿಯೊಂದುದೇಶದದೊಡ್ಡ ಪಟ್ಟಣಗಳಲ್ಲಿಯಸ್ಥಾಪಿಸುವುದು ಆವಶ್ಯಕವು.