ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೋಮಾರಿತನ ೧೪೭ ಇಲ್ಲ. ಆದರೆ ಹೀಗೆ ತೀರ ಕೆಲಸಮಾಡದಿರುವುದು ಅಸೌಖ್ಯಕ್ಕೆ ಕಾರಣವು. ಒಂದು ಕೆಲಸಮಾಡಿ ಜುಗುಪ್ಪೆಯಾದರೆ ಮತ್ತೊಂದನ್ನು ತೊಡಗುವುದು ಸಾಮಾನ್ಯವಾಗಿ ಎಲ್ಲರ ವಾಡಿಕೆ. ಯಾರು ಯಾವ ಕೆಲಸವನ್ನೂ ಮಾಡದೆ ಬದುಕುವುದಕ್ಕೆ ಹೋಗುವರೋ ಅವರು ಸೋಮಾರಿಯೆಂದು ಹೀಯಾಳಿಸಿಲ್ಪಟ್ಟು ಮರ್ಯಾದೆಯನ್ನು ಕಳೆದುಕೊಳ್ಳುವರು; ಉಂಡನ್ನ ವು ಅರಗದೆ ಬೊಜ್ಜು ಬೆಳೆದು, ತಮ್ಮ ಮೈಯನ್ನು ತಾವೇ ಎತ್ತುವುದಕ್ಕೆ ಆಗದಷ್ಟು ಸ್ಕೂಲರಾಗಿ ಹಲವುಬಗೆಯ ಬೇನೆಗಳಿಗೆ ಗುರಿಯಾಗುವರು. ಮಾಡುವುದಕ್ಕೆ ಯಾವ ಕೆಲಸವೂ ಇಲ್ಲದೆ ಸುಮ್ಮನೆ ಕುಳಿತಿರುವುದರಿಂದ ಮನಸ್ಸಿಗೆ ಬೇಸರಿಕೆಯಾಗುವುದು ಎಲ್ಲರಿಗೂ ತಿಳಿದೇ ಇದೆ. ಇದಲ್ಲದೆ ಯಾವ ಕೆಲಸವನ್ನೂ ಮಾಡದೆ ಕುಳಿತಿರುವ ಅನೇಕರ ಮನಸ್ಸು ದುವ್ಯಾಪಾರಗಳಲ್ಲಿ ಓಡುವುದು. ಇದರಿಂದ ಅವರಿಗೆ ಕಷ್ಟವು ಸಿದ್ದವು. ಜನರು ಅನುಭವಿಸುವ ಕಷ್ಟಗಳ ಹತ್ತರಲ್ಲಿ ಒಂಬತ್ತು ಪಾಲು ಸೋಮಾರಿತನದಿಂದ ಉಂಟಾಗುವುವು' ಎಂದು ಒಬ್ಬ ಆಂಗ್ಲೆಯ ಪಂಡಿತನು ಹೇಳಿರುವನು. ಸೋಮಾರಿತನವು ಮನುಷ್ಯರ ಮೈ ಯಲ್ಲಿಯೇ ಇರುವ ದೊಡ್ಡ ಶತ್ರುವು; ಕೆಲಸಮಾಡುವುದಕ್ಕೆ ಸಮಾನವಾದ ನಂಟನು ಅವರಿಗೆ ಯಾರೂ ಇಲ್ಲ; ಕೆಲಸಮಾಡಿ ಕೆಟ್ಟವನಿಲ್ಲ; ಕೆಲಸಗಾರನನ್ನು ಸಿರಿಯೊಲಿವುದು. ಸೌಖ್ಯವನ್ನು ಬಯಸುವವರು ಕೆಲಸಮಾಡುವುದಾವಶ್ಯಕ. “ ಕೈ ಕೆಸರಾದರೆ ಬಾಯಿ ಮೊಸರಾಗುವುದು,” « ಕೂತುಂಬವನಿಗೆ ಕುಡಿಕೆಹಣ ಸಾಲದು ಎಂದು ವಾಡಿಕೆ ಯಾಗಿ ಹೇಳುತ್ತಾರಲ್ಲವೆ ? ಊಟದಿಂದ ನಮಗೆ ತೃಪ್ತಿಯಾಗಬೇಕಾದರೆಊಟಕ್ಕೆ ಮುಂಚೆ ಸ್ವಲ್ಪ ಹೊತ್ತಿನವರೆಗೂ ಹೇಗೆ ತಿಂಡಿಯಿಲ್ಲದಿರುವುದಾವಶ್ಯಕವೋ ಹಾಗೆಯೇ ವಿಶ್ರಾಂತಿ ವಿನೋದಗಳಿಂದ ನಮಗೆ ಸಂತೋಷವುಂಟಾಗಬೇಕಾದರೆ, ಮೊದಲು ಕಷ್ಟ ಪಟ್ಟು ಕೆಲಸಮಾಡಿ ದಣಿದಿರಬೇಕು. ಯಾವ ಸೋಮಾರಿಯು ಯಾವಾಗಲೂ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದರೆ ಬಲು ಸುಖವುಂಟಾದೀತೆಂದು ಯೋಚಿಸುವನೋ ಅವನು, ಬೆಳಗಿನಿಂದ ಸಂಜೆಯ ವರೆಗೂ ಎಡಬಿಡದೆ ಮಿಠಾಯಿಯನ್ನು ತಿನ್ನುವುದು ಒಳ್ಳೆಯದೆಂದು ಯೋ ಸುವ ಹುಡುಗನಂತೆ ಬುದ್ದಿ ಹೀನನೆಂಬುದರಲ್ಲಿ ಸಂದೇಹವಿಲ್ಲ.