ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧ ೨೧ ಮಕ್ಕಳಿಗೆ ಆಟದಮೇಲೆ ಬಹಳ ಆಸೆ. ಇಲ್ಲಿ 'ಆಟ' ಎಂಬುದು 'ಆಡು' ಎಂಬ ಧಾತು, ವಿನಿಂದ ಆಗಿದೆ, ಆ ಗುಣಹೀನನ ಸಿರಿಯಿಂದಂ ಗುಣಿಗಳ ಬಡತನವೇ ಲೇಸು "ಪಂಪರಾಮಾಯಣ, “ಎಲೈ ಮಕ್ಕಳಿರ, ನಿಮ್ಮ ತಾಯ್ತಂದೆಗಳೂ ಗುರುಗಳೂ ಹೇಳಿದಂತೆ ನೀವು ನಡೆದುಕೊಳ್ಳ. ಬೇಕು” ಎಂದು ಒಬ್ಬ ಉಪಾಧ್ಯಾಯರು ಬೋಧಿಸುತ್ತಿದ್ದರು. (9) ! ಭಾವ ಚಿಹ್ನೆ (The Point of Exclamation). ಇದು ಆಶ್ಚರ್ಯ, ದುಃಖ, ಜುಗುಪ್ಪೆ, ನಿಂದೆ ಮೊದಲಾದ ಮನೋಭಾವಗಳನ್ನು ತೋರಿಸುವ ಶಬ್ದ ಗಳಿಗೂ ವಾಕ್ಯಗಳಿಗೂ ಪರದಲ್ಲಿ ಬರುವ ವುದು. ಉದಾ-- ಭಲಾ ! ಈ ಕವಿ ಪಟ್ಟಣವನ್ನು ಎಷ್ಟು ಚೆನ್ನಾಗಿ ವರ್ಣಿಸಿಡ್ಡಾನೆ ! ಅಹಹ ! ಸಜ್ಜನರಿಗೂ ಇಂಥ ಕಷ್ಟ ಬಂದಿತಲ್ಲಾ ! ಅಬ್ಬ ! ಅವನು ಕೊಡುವ ತೊಂದರೆಗಳನ್ನೂ ಆಡುವ ಕಠಿನೋಕ್ತಿಗಳನ್ನು ಸಹಿಸಲಾಗದು ! ಛೇ ! ಪಾಪಿ ! ನಿನ್ನ ಕೆಟ್ಟತನಕ್ಕೆ ತಕ್ಕುದಾಗುವುದು ! ಸೂಚನೆ:-ಮೇಲಣ ಕುರುಹುಗಳನ್ನು ಹಾಕಿದಮಾತ್ರದಿಂದ ಬೇಕಾದ ಅರ್ಥವು ತೋರುವುದೆಂದು ತಿಳಿಯಕೂಡದು, ವಾಕ್ಯಗಳನ್ನೂ ಸರಿಯಾಗಿ ರಚಿಸಬೇಕು. ಉದಾ. “ಅವರು ನಾಳೆ ಬರುವರೋ ?” ಎಂಬುದರ ಅರ್ಥವು 4 ಅವರು ನಾಳೆ ಬರುವರು ?”ಎಂದು ಬರೆದರೆ ಆಗಲಾರದು,

=

ಪುಬಂಧ. ಯಾವುದಾದರೂ ಒಂದು ವಿಷಯವನ್ನು ಕುರಿತು ತೋರುವ ಅಭಿಪ್ರಾಯಗಳನ್ನು ವಾಕ್ಯ ಬೃಂದಗಳ ರೂಪದಲ್ಲಿ ವಿವರಿಸಿ ಬರೆವುದಕ್ಕೆ ಪ್ರ ಬಂಧ ಎಂದು ಹೆಸರು. ಪ್ರಬಂಧವು ಸರಿಯಾಗಿರಬೇಕಾದರೆ, ಹಿಂದೆ ವಿವರಿಸಿದ ವಿಧಿಗಳನ್ನೆಲ್ಲಾ ಅನುಸರಿಸಬೇಕು.