ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L0 ಪ್ರಬಂಧಮಂಜರಿ-ಎರಡನೆಯ ಭಾಗ ನೋಡುವುದಕ್ಕೆ ಬಲು ಅಂದವಾಗಿರುವುದು. ಅಚ್ಚ ಹಸುರಾದ ಎಲೆಗಳು ಉದ್ದವಾಗಿಯೂ ಕಿರಿಯವಾಗಿಯೂ ಮಿಂಚುತ್ತಲೂ ಇರುವುವು ಇವಕ್ಕೆ ಕಾವೂ ಮಧ್ಯದಲ್ಲಿ ಉದ್ದಕ್ಕೆ ಕಡ್ಡಿಯೂ ಇರುತ್ತವೆ. ಚಿಗುರು ಸ್ವಲ್ಪ ಕೆಂಪಗೆ ಮೃದುವಾಗಿರುತ್ತದೆ. ಚಿಗುರಿದ ಮಗವು ನೋಟಕ್ಕೆ ಬಲು ಚೆಲುವು. ಮಾವಿನ ಹೂಗಳು ಸಣ್ಣವು; ಬೆಳ್ಳಗೆ ಗೊಂಚಲು ಗೊಂಚಲಾಗಿರುವುವು. ಹೂ ಉದುರಿದ ಮೇಲೆ ಒಂದೊಂದು ಗೊಂಚಲಿನಲ್ಲಿಯೂ ಮೂವತ್ತು ನಾಲ್ವತ್ತು ಕಾಯಿಗಳ ವರೆಗೆ ಬಿಡುತ್ತವೆ. ಕಾಯಿ ಹಸುರಾಗಿದ್ದು ಹಣ್ಣಾ. ಗುತ್ತಲೆ ಹಳದಿ ಬಣ್ಣವನ್ನು ಹೊಂದುವುದು. ಹಣ್ಣಿನ ಮೇಲಿರುವ ಸಿಪ್ಪೆ ಯನ್ನು ತೆಗೆದರೆ ಒಳಗೆ ಸಿಹಿಯಾದ ರಸದಿಂದ ತುಂಬಿ ಮೃದುವಾದ ಹಳದಿ ಬಣ್ಣದ ತಿರುಳು ಇರುತ್ತದೆ. ಇದನ್ನೇ ಜನರು ತಿನ್ನು ವರು, ತಿರುಳಿನೊಳಗೆ ಗಟ್ಟಿಯಾದ ಓಟೆಯೂ ಅದರೊಳಗೆ ಬೀಜವೂ ಇರುವುವು. ಮರದಿಂದ ಅಂಟಾಗಿರುವ ಒಂದು ಬಗೆಯ ಹಾಲು ಹೊರಡುವುದು - ಬೀಜಹಾಕಿ ಬೆಳೆದ ಮಾವಿನಲ್ಲಿ ಒಳ್ಳೆಯ ಹಣ್ಣು ಬಿಡದಿರುವುದರಿಂದ, ಈಗ ಕಸಿ ಮಾಡಿದ ಸಸಿಯನ್ನೇ ನೆಟ್ಟು ಬೆಳೆಸುವ ವಾಡಿಕೆ ವಿಶೇಷವಾಗಿದೆ. ಮೂವು ಎಂಥಾ ಭೂಮಿಯಲ್ಲಾದರೂ ಬೆಳೆವುದು, ತಿಟ್ಟು ನೆಲದಲ್ಲಿ ಬೆಳೆದ ಹಣ್ಣು ಉತ್ತಮವೆನ್ನು ವರು. ಸಸಿಗಳನ್ನು ಮಳೆಗಾಲದಲ್ಲಿ ನಡಬೇಕು. ನಡುವುದಕ್ಕೆ ಕೆಲವು ತಿಂಗಳ ಹಿಂದೆ ಇಪ್ಪತ್ತು ಮೂವತ್ತು ಅಡಿಗಳ ದೂರದಲ್ಲಿರುವಂತೆ ಗುಂಡಿಗಳನ್ನು ತೋಡಿ ಮಣ್ಣಿನೊಡನೆ ಗೊಬ್ಬರವನ್ನು ಬೆರೆಸಿ ಹಾಕಬೇಕು. ಗಿಡಗಳು ಎಳೆಯವಾಗಿರುವಾಗ ಅವುಗಳ ನಡುವೆ ಇರುವ ನೆಲವನ್ನು ಉತ್ತು ಬೇರೆ ಪಯಿರನ್ನು ಬೆಳೆಸಿ ಆಗಾಗ್ಗೆ ಅಗತೆ ಮಾಡಬೇಕು. ಗಿಡಗಳು ಸುಮಾರು ಹತ್ತಡಿ ಎತ್ತರವಾದಾಗ ಸುತ್ತಲೂ ಎಂಟು ಹತ್ತು ಅಡಿಗಳ ವರೆಗೆ ಅಗೆದು ಗೊಬ್ಬರ ಹಾಕಬೇಕು. ಇಬ್ಬನಿ ಮಾವಿನ ಗಿಡಕ್ಕೆ ಒಳ್ಳೆಯದೆನ್ನುವರು. ಗಿಡಗಳಲ್ಲಿ ಹಣ್ಣು ಬಿಡದಿದ್ದರೆ ಸುತ್ತಲೂ ಅಗೆದು ಚಿಕ್ಕಚಿಕ್ಕ ಬೇರುಗಳನ್ನು ಕತ್ತರಿಸುವರು; ಇಲ್ಲವೆ ತೊಗಟೆಯಲ್ಲಿ ಅಲ್ಲಲ್ಲಿ ಗಾಯ ಮಾಡಿ ಸಣ್ಣ ಸಣ್ಣ ಕೊಂಬೆಗಳನ್ನು ಕಡಿವರು, ಚೆನ್ನಾಗಿ ಪಕ್ವವಾಗುವುದಕ್ಕೆ ಮುಂಚೆಯೇ ಕಾಯನ್ನು ಕೊಯ್ದು ಬತ್ತದ ಹುಲ್ಲಿನಲ್ಲಿ ಮುಚ್ಚಿ