ಪುಟ:ಪ್ರಬಂಧಮಂಜರಿ.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೩ ಪ್ರಬಂಧಮಂಜರಿ-ಎರಡನೆಯ ಭಾಗ. ಆಲದ ಮರದಷ್ಟು ಮತ್ತಾವ ಮರವೂ ನೆರಳನ್ನು ಕೊಡುವುದಿಲ್ಲ. ಮಧ್ಯಾಹ್ನದ ಬಿಸಿಲನ್ನು ತಾಳಲಾರದೆ ದಣಿದಿರುವ ದನಗಳಿಗೂ ದಾರಿಗರಿಗೂ, ಈ ಮರದ ನೆರಳು ಒಳ್ಳೆಯ ಆಸರೆ, ತಣ್ಣಗಿರುವ ಈ ಮರದ ನೆರಳಲ್ಲಿ ದಾರಿಗನು ಅನ್ನ ಬೇಯಿಸಿಕೊಂಡು ತಿಂದು, ಮಲಗಿ, ಆಯಾಸಪರಿಹಾರ ಮಾಡಿಕೊಳ್ಳುತ್ತಾನೆ. ನೂರಾರು ಹಕ್ಕಿಗಳೂ, ಕೋತಿಗಳೂ ಈ ಮರದ ಕೊಂಬೆಗಳಲ್ಲಿದ್ದು ಕೊಂಡು, ಇದರ ಹಣ್ಣನ್ನು ತಿಂದು ಬದುಕುತ್ತವೆ.ಆಡುಗಳು ಈ ಮರದ ಎಲೆಗಳನ್ನು ತಿನ್ನುತ್ತವೆ. ಬಡವರು ಈ ಎಲೆಗಳನ್ನು ಹಚ್ಚಿ ಊಟಮಾಡುವುದಕ್ಕೆ ಉಪಯೋಗಿಸುವರು, ಈ ಮರದ ಬಿಳಿಯ ಹಾಲಿನಿಂದ ಬೇಡರು ಹಕ್ಕಿ ಹಿಡಿವ ಅಂಟು ಮಾಡುವರು. ಆಲದ ಎಳೆಯ ಕಡ್ಡಿಗಳು ಹಲ್ಲುಜ್ಜುವುದಕ್ಕೆ ಆಗುತ್ತವೆ. ಆಲದ ನಾರಿನಿಂದ ಒಂದು ಬಗೆಯ ಒರಟ ಹಗ್ಗವನ್ನು ಮಾಡುತ್ತಾರೆ. ಒಣಗಿದ ಮರವು ಕಟ್ಟಿಗೆಯಾಗುವುದು. _12, ಬೆಳ್ಳಿ, ಬೆಳ್ಳಿಯು ಹೆಚ್ಚಿನ ಬೆಲೆಯ ಲೋಹವು. ಇದರ ಬಣ್ಣ ಬಿಳಿದು, ಹೆಚ್ಚಾದ ಹೊಳಪುಳ್ಳುದು. ಕೆಲವು ಕಡೆ ಬೆಳ್ಳಿಯು ಗಟ್ಟಿಯ ರೂಪದಲ್ಲಿ ಸಿಕ್ಕುತ್ತದೆ. ಇದು ಮುಖ್ಯವಾಗಿ ಗಂಧಕ, ಸೀಸ, ತಾಮ್ರ ಮುಂತಾದ ವಸ್ತುಗಳೊಡನೆ ಬೆರೆದ ಅರುರಾಗಿ ಗಣಿಗಳಲ್ಲಿ ದೊರೆವುದು, ಬೊಲಿವಿಯ, ಪೆರು, ಮೆಕ್ಸಿಕೊ, ನಾರ್ವೆ, ಜರ್ಮನಿ, ಹಂಗೆರಿ ದೇಶಗಳಲ್ಲಿ ಬೆಳ್ಳಿ ಲೋಹರೂಪದಲ್ಲಿಯೂ ಅದುರಾಗಿಯೂ ದೊರೆವುದು, ಇಂಡಿಯಾದಲ್ಲಿ ಬೆಳ್ಳಿಯು ಮಿಶ್ರವಾಗಲ್ಲದೆ ಲೋಹರೂಪದಲ್ಲಿ ಸಿಕ್ಕುವುದು ಅಪೂರ್ವ. ಈ ಸ್ಥಿತಿಯಲ್ಲಿ ಕಡಪ, ಕರ್ನೂಲು, ಬಳ್ಳಾರಿ, ಮಧ್ಯಪ್ರಾಂತ್ಯದ ಬಾಗಲ್ಪುರ, ರಾಜಪುಟಾನ ಇವುಗಳಲ್ಲಿ ಸಿಕ್ಕುತ್ತದೆ. ಗಣಿಗಳಿಂದ ಅದನ್ನು ಅಗೆದು ತೆಗೆದು, ಯಂತ್ರದಿಂದ ಪುಡಿ ಮಾಡಿ, * ಬೆಂಕಿಯಲ್ಲಿ ಹುರಿದು ಅರೆದು ಪಾದರಸವನ್ನು ಸೇರಿಸಿದರೆ, ಪಾದರಸವು ಬೆಳ್ಳಿಯೊಂದಿಗೆ ಸೇರಿ, ಉಳಿದ ಹಗುರವಾದ ಕಲ್ಕ ಪವೆಲ್ಲಾ ಬೇರೆಯಾಗು. ವುದು. ಈ ಮಿಶ್ರವನ್ನು ಕಾಯಿಸಿದರೆ ಪಾದರಸವು ಹಬೆಯಾಗಿ ಹೋಗಿ ಬೆಳ್ಳಿ ನಿಲ್ಲುವುದು. ಇದನ್ನು ಚೆನ್ನಾಗಿ ಶುದ್ಧ ಮಾಡಿದರೆ ಚೊಕ್ಕಬೆಳ್ಳಿಯಾ