ವಿಷಯಕ್ಕೆ ಹೋಗು

ಪುಟ:ಪ್ರಭುಲಿಂಗಲೀಲೆ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಭುಲಿಂಗಲೀಲೆ ಬಾಲೆ ಹಂಬಲಿಸಿದೊಡೆ ಫಲವೇ | ನೇಳು ತಡೆದಿರದಲ್ಲಮನನೀ | ರೇಳು ಲೋಕದಲರಸಿ ನೋಡುವೆವೆನುತಲಾ ವಿಮಳೆ || ಹೇಳಿದೊಡೆಯಹುದೆನುತ ಚಿತ್ತವ | ತಾಳಿ ತರಹರಗೊಂಡು ಬಳಿಕಲಿ | ಕಾಲುನಡೆಯಲಿ ಮಾಯೆ ನಡೆದಳು ಕೆಳದಿಯರು ಸಹಿತ ನೆರೆದು ನೆರೆಬೆರಗಾಗಿ ನೋಡಿರೆ | ಧರಣಿಪತಿಯ ಕುಮಾರಿ ಕಾಮಾ | ತುರದಲಲ್ಲಮನೆಂಬ ಮದ್ದಳಿಗಂಗೆ ಮನಸೋತು | ಮರುಳುಗೊಂಡಕಟವನ ಬೆನ್ನಲಿ | ಹರಿದು ಹೋಗುತಲಿಹಳೆಯೆನುತಲಿ | ಪುರದೊಳಗೆ ನೋಟಕರು ಸಂದಣಿಸಿದರು ಬೀದಿಯಲ್ಲಿ ಹೋಗುತಿರ್ದಳು ಹೊಲಬ ಕೇಳುತ | ಬೇಗ ಬೇಗದಲಲ್ಲಮನನಾ । ವಾಗ ಕಾಬೆವೊ ಎಂಬ ಮನದಾತುರದ ತವಕದಲಿ || ಆಗಲಡವಿಯ ಬಿದ್ದು ನೆರೆ ಭೂ । ಭಾಗದಲಿ ವನಚರಿಯರೆಂಬವೊ | ಲಾಗಿ ಮಾಯಾದೇವಿ ವಿಮಳೆ ಸಮಸ್ತ ಸಖಿನಿವಹ ಕಲ್ಲು ಕೊರಡುಗಳುರಿವ ಹುಡಿ ಜಡಿ | ಮುಳ್ಳುಗಿಡು ಮಡು ತೆವರು ಮೆಳೆಗಳು | ಹಳ್ಳ ಹಾವಸಿ ಹಾವು ಹುಲಿ ಕಾಡಾನೆ ಕೋಣಗಳು ಕೊಳ್ಳ ಕುತ್ತುರು ಹೆಮ್ಮರಂಗಳು | ಪಲ್ಲವಿಸಿ ಜೀರೆಂಬ ಕಾನನ ದಲ್ಲಿಯರಸುತ ಬರುತಲಿರ್ದಳು ಮಾಯೆಯಲ್ಲಮನ ။။ ||ga||