ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨/ಪ್ರಸ್ತುತ

ವಡಿಸಬಹುದು? ಮುಂತಾದ ವಿಚಾರಗಳು ಈ ಸಂದರ್ಭದಲ್ಲಿ ಪರಿಶೀಲಿಸಬೇಕಾದವುಗಳು.
ಮೊದಲಾಗಿ ರೂಪ (Form) ಮತ್ತು ವಸ್ತು ಆಶಯ (content) ಗಳ ಸಂಬಂಧವನ್ನು ತೆಗೆದುಕೊಂಡರೆ, ಕಲಾರೂಪಕ್ಕೂ, ಅದರ ವಸ್ತು, ಪ್ರತಿಪಾದನ ಗಳಿಗೂ ಸಂಬಂಧವಿದೆ ಎಂಬುದು ಗಮನಾರ್ಹ, ಯಾವುದೇ ವಸ್ತುವಿಗೆ, ಯಾವುದೇ ರೂಪವೂ ಸಾಧ್ಯವೆಂಬ ಸ್ಥಿತಿ ಇಲ್ಲ. ವಿಶೇಷತಃ ಯಕ್ಷಗಾನದಂತಹ ಶೈಲಿ ನಿಬದ್ಧ ಕಲೆಯಲ್ಲಿ ಕಥಾವಸ್ತು ಮತ್ತದರ ನಿರ್ವಾಹದ ಮೇಲೆ, ಅದರ ರೂಪ ಶೈಲಿಯು ಕೆಲವು ಮಿತಿಗಳನ್ನು ಹೇರುತ್ತದೆ ಎಂಬುದೂ ದಿಟ. ತನ್ನ ಇತಿಹಾಸವನ್ನು, ಪರಂಪರೆ ಯನ್ನು ಬಿಟ್ಟು ಕಲೆ ನಿಜವಾದ ಮುನ್ನಡೆ ಸಾಧಿಸಲಾರದು.
ಆದರೆ, ಪ್ರಸ್ತುತತೆಗೆ, ಕಲಾಪರಂಪರೆಯಾಗಲಿ, ರೂಪವಾಗಲಿ ಪ್ರತಿ ಬಂಧಕವಲ್ಲ. ಇಲ್ಲಿ ಕಲೆಯ ಪರಂಪರೆಯೆಂದರೇನೆಂಬುದನ್ನೂ ಯೋಚಿಸಬೇಕಾಗುತ್ತದೆ. ಸಾಂಪ್ರದಾಯಿಕ ರಂಗಕಲೆಗೆ, ರೂಪ, ವಸ್ತು, ಅಭಿವ್ಯಕ್ತಿ ವಿಧಾನ ಮತ್ತು ಪ್ರೇಕ್ಷಕರೆಂಬ ನಾಲ್ಕು ಅಂಗಗಳೂ, ಔಚಿತ್ಯ ಮತ್ತು ಆ ಕಲೆ ರೂಪುಗೊಂಡು ಪ್ರವೃತ್ತವಾಗಿರುವ ಸಂಸ್ಕೃತಿ ಎಂಬ ಎರಡು ವಲಯಗಳೂ ಇವೆ.

ಇವುಗಳೊಳಗಿನ ಸಂಬಂಧವು ಸಂಕೀರ್ಣವಾದುದು. ಆದರೆ ಈ ಘಟಕಗಳು ಸ್ವತಃ ಚಲನಶೀಲವಾಗಿದ್ದು ಬಾಹ್ಯಪ್ರಭಾವಗಳಿಂದಲೂ, ಒಳಗಿನ ಒತ್ತಡಗಳಿಂದಲೂ ಬದ