ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪ / ಪ್ರಸ್ತುತ

ಆಗಲೇ ಸೂಚಿಸಿದ ಅದರ ರೂಪ, ಅದಕ್ಕೊಪ್ಪುವ 'ವಸ್ತು', ಇತ್ಯಾದಿಗಳು. ಇನ್ನೊಂದು ರೀತಿಯಿಂದ ಹೇಳುವುದಾದರೆ, ಹಾಡು, ಚಲನೆ, ಕತೆ, ವೇಷ ವಿಧಾನ, ಹಿಮ್ಮೇಳ, ತಂತ್ರ ಮತ್ತು ಪ್ರೇಕ್ಷಕ ವರ್ಗ. ಈ ಚೌಕಟ್ಟಿನಲ್ಲಿ, ವ್ಯಾಪಕವಾದ ಹರ ಹುಳ್ಳ ಲೌಕಿಕ ಆಶಯದ ಕಥಾವಸ್ತು ಹೊಂದಿಕೊಳ್ಳುತ್ತದೆ ಮಾತ್ರವಲ್ಲ, ಅದೇ ಹೆಚ್ಚು ಯಶಸ್ವಿಯೂ ಸಾರ್ಥಕವೂ ಆಗುತ್ತದೆ.

ಈ ವಿಷಯಕ್ಕೆ ಕಲೆಯ ಇತಿಹಾಸವೇ ಸಾಕ್ಷಿ ಹೇಳುತ್ತದೆ. ಯಕ್ಷಗಾನದ ತುಂಬ ಪ್ರಸಿದ್ಧ ಕಥಾನಕಗಳೆನಿಸಿದ ನಳಚರಿತ್ರೆ, ಕೌಶಿಕ ಚರಿತ್ರೆ, ಸತ್ಯ ಹರಿಶ್ಚಂದ್ರ, ಹಿಡಿಂಬಾ ವಿವಾಹ, ಪಂಚವಟಿ, ಪಟ್ಟಾಭಿಷೇಕ, (ರಾಮರಾಜ್ಯ ವಿಯೋಗ), ಕನ ಕಾಂಗಿ ಕಲ್ಯಾಣ, ವಿದ್ಯುನ್ಮತಿ ಕಲ್ಯಾಣ, ಕಾರ್ತವೀರ್ಯ , ಕೀಚಕ ವಧೆ, ಮುಂತಾದವು ಗಳ ವಸ್ತುವಾಗಲಿ, ಆಶಯವಾಗಲಿ ಮತೀಯವಲ್ಲ. ಅದು ಲೌಕಿಕವಾದದ್ದು. ಮತೀ ಯತೆ ಕೆಲವೆಡೆ ಇದ್ದರೂ ಆನುಷಂಗಿಕ. ಅದರಲ್ಲೂ ನಳ, ಹರಿಶ್ಚಂದ್ರ, ಪಟ್ಟಾ ಭಿಷೇಕದಂತಹ ಪ್ರಸಂಗಗಳಲ್ಲಿ, 'ಬಯಲಾಟಗಳ ಆಕರ್ಷಣೆ'ಗಳೆನ್ನಲಾಗುವ ಚೆಂಡೆ ಸದ್ದಿನ ಅಬ್ಬರ, ಯುದ್ಧ, ಬಣ್ಣದ ವೇಷಗಳು, ಹಾಸ್ಯ-ಇವುಗಳಿಗೆ ಮಹತ್ವವಿಲ್ಲ. ಆದರೂ ಅವು ಯಶಸ್ವಿಯಾಗಿ ಶತಮಾನಗಳ ಕಾಲ ಜನರಂಜನೆ ಮಾಡಿರುವುದು ಉದ್ಯೋಧಕ, ಪ್ರೇರಕವಾಗಿದೆ. ಅಯೋಧ್ಯಾಕಾಂಡದ ಶುದ್ಧ ಸಾಂಸಾರಿಕ ಚಿತ್ರ ವನ್ನು ತಿಳಿಯುವುದಕ್ಕೆ, ನಳನ ಜೀವನದ ಏಳುಬೀಳುಗಳನ್ನು ಅರಿಯುವುದಕ್ಕೆ, ಕಾರ್ತವೀರ್ಯನ ಜೀವನಾನುಭವಗಳನ್ನು ಸವಿಯುವುದಕ್ಕೆ ಮತೀಯ ಜ್ಞಾನ ಬೇಕಾ ಗಿಲ್ಲ. ಇವು ಎಲ್ಲರನ್ನೂ ಲೌಕಿಕವಾಗಿ ಸ್ಪಂದಿಸಬಲ್ಲ ಕತೆಗಳಾದುದರಿಂದಲೇ ಅವು ಕ್ಷಣಕ್ಷಣಕ್ಕೂ, ಕಾಲಕಾಲಕ್ಕೂ ಪ್ರಸ್ತುತವಾಗಿಯೇ ನಡೆದು ಬಂದಿವೆ. ಇಂತಹ ಕಥಾ ನಕಗಳಿಗೆ ನೋಟಕನ ಮನಸ್ಸು ಸ್ಪಂದಿಸುವುದು, ಭಕ್ತಿಯಿಂದ ನಿರ್ಮಾಣವಾಗುವ ಭಾವುಕ ಸಂಸ್ಕಾರದಲ್ಲಿ ಅಥವಾ ಭಕ್ತನಿಗೇ ಗೆಲುವು, ಭಗವದ್ವಿರೋಧಿಗಳಲ್ಲಿ ದುಷ್ಟರು, ಅಥವಾ ದುಷ್ಟರೇ ಭಗವದ್ವಿರೋಧಿಗಳಾಗುವವರು ಎಂಬ ಅಸಹಜವಾದ ಮನಃಸ್ಥಿತಿಯಿಂದಾಗಿಯೂ ಅಲ್ಲ. ಭಕ್ತ, ರುಕ್ಮಾಂಗದ, ಪತಿವ್ರತಾ ಮಹಾತ್ಮಗಳಿಗೆ ಪ್ರೇಕ್ಷಕನ ಸ್ಪಂದನ ಸಾರ್ವತ್ರಿಕ ಮಾನವೀಯತೆಯದಲ್ಲ. ಮತೀಯ ಭಾವುಕತೆ ಯದು. ಮಾತ್ರವಲ್ಲ ಇಲ್ಲಿ ಕಲಾವಿದನಿಗಿರುವ ಚಿತ್ರಣದ ಸಾಧ್ಯತೆಗಳು ಸೀಮಿತ. ಅಷ್ಟೇಅಲ್ಲ, ಮೂಲತಃ ಲೌಕಿಕ ಸತ್ವವನ್ನು ಆಶ್ರಯಿಸಿ ನಿಂತಿರುವ ಕಥಾನಕಗಳು ಕೂಡ, ಭಕ್ತಿಯುಗದಲ್ಲಿ ಪುನಾರಚನೆಗೊಂಡುದರ ಫಲವಾಗಿ ತೇಜೋಹೀನವಾಗಿರು ವುದನ್ನು ಕಾಣುತ್ತೇವೆ. ಮಹಾಭಾರತದ ಕೇಂದ್ರವಾಗಿದ್ದು, ಆ ಕಾವ್ಯದ ಒಡಲಿನೊ ಳಗಿರುವ ಐತಿಹಾಸಿಕ ಸಂಘರ್ಷವನ್ನು ಗರ್ಭೀಕರಿಸಿಕೊಂಡಿರುವ ಉದ್ಯೋಗ ಪರ್ವ' (ಕೃಷ್ಣ ಸಂಧಾನ)ದಂತಹ ಪ್ರಸಂಗ, ಕೃಷ್ಣ ಮಹಿಮೆಯಾಗಿ ಸೊರಗಿರುವುದನ್ನು