ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಾಂಪ್ರದಾಯಿಕ ಕಲೆ: ಪ್ರಸ್ತುತತೆಯ ಪ್ರಶ್ನೆ / ೧೯

ಮುಖ್ಯ, ಹೊರತು ಅಲ್ಲಿ ಬರುವ ಹರಕೆಗಳು, ಭೂತಬಾಧೆಗಳು ಮುಂತಾದವುಗಳಲ್ಲ. ಹೀಗೆ ಪರಿಭಾವಿಸಿ ಚಿತ್ರಿಸುವುದಕ್ಕೆ ಮುಖ್ಯವಾಗಿ ಪ್ರಸ್ತುತತೆಯ ದೃಷ್ಟಿಯ ಬುದ್ಧಿ ಪೂರ್ವಕ ತಯಾರಿ, ಮತ್ತು ಪ್ರಮಾಣ ಜ್ಞಾನಪೂರ್ವಕವಾದ ಕಲಾದೃಷ್ಟಿ ಇವು ಮುಖ್ಯ.

ಇನ್ನು ಕೇವಲ ರಂಜನಾತ್ಮಕ ದೃಷ್ಟಿಯ ಕಥಾನಕಗಳಿಗೂ ರಂಗದಲ್ಲಿ ಮಹತ್ವವಿದೆ. ಇಲ್ಲಿ ಗಂಭೀರವಾದ ಆಶಯ ದೃಷ್ಟಿ ಮುಖ್ಯವಲ್ಲ. ಸ್ವಚ್ಛವಾದ ಮನೋರಂಜನಾ ದೃಷ್ಟಿಯೇ ಲಕ್ಷ್ಯವಾಗುತ್ತದೆ. ಸಾಹಸಕಥೆಗಳು, ಕಾಲ್ಪನಿಕ ವಿಚಿತ್ರ ಕತೆಗಳು, ಮುಂತಾದುವು ಈ ವರ್ಗದವು. ಬೃಹತ್ಕಥೆ, ವಿದ್ಯುನ್ಮತಿ ಕಲ್ಯಾಣ ಮೊದಲಾದುವನ್ನು ಹೀಗೆ ಬಳಸಬಹುದು. ಅಂಗದಸಂಧಾನ, ಸುಭದ್ರಾ ಕಲ್ಯಾಣ, ಮೊದಲಾದ ಯಕ್ಷಗಾನ ಪ್ರಸಂಗಗಳನ್ನು ಹೀಗೆ ಸೀಮಿತ ದೃಷ್ಟಿಯಿಂದಲೇ ಅಭಿವ್ಯಕ್ತಿಸಬಹುದು.

೧೦

ಸೃಷ್ಟಿಶೀಲನಾದ ಕಲಾವಿದ ಪ್ರಸ್ತುತತೆಯ ದೃಷ್ಟಿಯಿಂದ ಯೋಚಿಸಿಯೇ ಯೋಚಿಸುತ್ತಾನೆ, ಕೆಲವು ಸಲ ಅಪ್ರಜ್ಞಾಪೂರ್ವಕವಾಗಿ ಕೂಡ. ಯಕ್ಷಗಾನ ರಂಗದ ಅಭಿವ್ಯಕ್ತಿಯ ಒಟ್ಟು ಸ್ವರೂಪ, ಮಧ್ಯಯುಗೀನ ಆದರ್ಶಗಳತ್ತ ಒಲವು ತೋರುತ್ತಿದ್ದರೂ, ಕಲಾವಿದರು, ಕಲಾಸಂಸ್ಥೆಗಳು ವೈಯಕ್ತಿಕ ಮಟ್ಟದಲ್ಲಿ ಪ್ರಸ್ತುತತೆಯ ದಿಕ್ಕಿನಲ್ಲಿ ಮಾಡಿರುವ ಸಾಧನೆಗಳು ಅತ್ಯಂತ ಗಮನಾರ್ಹ ಮತ್ತು ಆಶಾದಾಯಕವಾಗಿವೆ. ಅವುಗಳಿಗೆ ವ್ಯವಸ್ಥಿತ ಸ್ವರೂಪ ನೀಡಿ ಕ್ರೋಡೀಕರಿಸಲು ನಿರ್ದೇಶನ ವ್ಯವಸ್ಥೆಯನ್ನು ಅಳವಡಿಸಬೇಕು. ಆಧುನಿಕ ನಿರ್ದೇಶನದ ಕಲ್ಪನೆ ಯಕ್ಷಗಾನಕ್ಕೆ ಹೊಸತು. ವೈಯಕ್ತಿಕ ಮನೋಧರ್ಮ, ಆಶುರಚನಾ ಪ್ರತಿಭೆಗೆ ಅಪಾರ ಅವಕಾಶವಿರುವ ಯಕ್ಷಗಾನದಲ್ಲಿ ವಿವರವಾದ ನಿರ್ದೇಶನ ಮಾರಕವಾಗಬಹುದು. ಇಲ್ಲಿ ಸ್ಥೂಲವಾದ ಒಂದು ದಿಗ್ದರ್ಶನ ತಂತ್ರದ (ಪದಶಃ ದಿಕ್ ದರ್ಶನ ಮಾತ್ರದ) ವ್ಯವಸ್ಥೆ ವಸೆ ಹೆಚ್ಚು ಫಲಕಾರಿ ಆಗಬಹುದು. ಪ್ರಸಂಗವೊಂದರ ಭಾಗದ ಆಯ್ಕೆ, ಸಂಪಾ ದಿತ ಅಳವಡಿಕೆಯೇ (edited adaptation) ಈ ಕಾವ್ಯದ ಪ್ರಾಥಮಿಕವಾದರೂ, ಒಂದು ಒಳ್ಳೆಯ ಹಂತ ಆಗಬಹುದು.

೧೧

ಯಕ್ಷಗಾನದಂತಹ ಪರಂಪರಾಗತ, ಶೈಲಿಬದ್ದವಾದ ಮತ್ತು ಸುದೀರ್ಘ ಕಾಲ ತನ್ನ ಸ್ವಭಾವದಲ್ಲಿ ಸಾತತ್ಯವನ್ನು ಉಳಿಸಿಕೊಂಡಿರುವ ಕಲೆಯೊಂದರಲ್ಲಿ ಪ್ರಸ್ತುತತೆಯ ದೃಷ್ಟಿಯಿಂದ ಮಾಡುವ ರೂಪೀಕರಣದ ಕೆಲಸ ಸುಲಭವೇನಲ್ಲ.ಅದಕ್ಕೆ ಹಲವು ತೊಡಕುಗಳೂ, ಪ್ರತಿಬಂಧಕಗಳೂ ಇವೆ. ಒಟ್ಟು ಸಂಸ್ಥಿತತೆಯ