ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪ / ಪ್ರಸ್ತುತ

ಸಾಧ್ಯತೆಯೇ ಮುಖ್ಯ. “ಪೌರಾಣಿಕ”ದಲ್ಲಿ ಆದರೂ ಇಂತಹ ಅಳವಡಿಕೆಗೆ ಒಗ್ಗದ ಕಥೆಗಳಿರಬಹುದು.

ಇನ್ನು ಪೌರಾಣಿಕವೆಂದರೇನು? ಸಂಸ್ಕೃತ ಮೂಲದ ಪುರಾಣಗಳಷ್ಟೆ ಪುರಾಣಗಳಲ್ಲ. ಪುರಾಣಗಳು ಎಲ್ಲ ಪ್ರದೇಶಗಳಲ್ಲಿ, ಜನಾಂಗಗಳಲ್ಲಿ ಪ್ರಚಲಿತ ವಾಗಿರುವಂತಹ ಪ್ರಾಚೀನ ಕಥೆಗಳು. ಇವು ಲಿಖಿತ, ಮೌಖಿಕ ಎರಡೂ ಸಂಪ್ರದಾಯ ಗಳಲ್ಲಿವೆ. ಅವು ಸ್ಥಳೀಯ ಪುರಾಣಗಳು, ಕೋಟಿ-ಚೆನ್ನಯ, ತುಳುನಾಡ ಸಿರಿ ಇವು ಗಳೂ ಪುರಾಣಗಳೇ ಆಗಿವೆ. ಪೌರಾಣಿಕ ಕಥೆಗಳನ್ನು ಹೋಲುವ ಕಾಲ್ಪನಿಕ ರಮ್ಯ ಕಥೆಗಳೂ ರಚಿತವಾಗಿವೆ. ಪುರಾಣಗಳಲ್ಲೂ ಕಾಲ್ಪನಿಕ ಅಂಶಗಳು ಬೇಕಾದಷ್ಟಿವೆ ಯಷ್ಟೇ?

ಯಕ್ಷಗಾನದಂತಹ ಮಾಧ್ಯಮಗಳು ಸದಾಕಾಲ ರಾಮಾಯಣ, ಭಾಗವತಾ ದಿಗಳನ್ನೇ ಆಡಿ ತೋರಿಸುತ್ತಿದ್ದವು ಎನ್ನುವಂತಿಲ್ಲ. ಭಿನ್ನ ಕಾಲಗಳಲ್ಲಿ ಭಿನ್ನ ಭಿನ್ನ ವಸ್ತುಗಳು ಅದರಲ್ಲಿ ಬರುವುದು ಸಹಜ. ಅವತಾರ ಕಥೆಗಳನ್ನೇ ತೋರಿಸಿದುದರಿಂದ ಒಂದು ಕಾಲಕ್ಕೆ ಆಟವು, ದಶವತಾರದಾಟವಾಗಿರಬಹುದು. ಆ ಹೆಸರಿದ್ದರೂ ವಸ್ತು ವನ್ನು ದಶಾವತಾರದಿಂದಾಚೆಯಿಂದ ಪಡೆಯುತ್ತ ಹೋಯಿತು. ಇದು ಒಂದೊಂದು ಘಟ್ಟ ಅಷ್ಟೆ.

ಹೀಗೆ ವಿಭಿನ್ನ ಘಟ್ಟಗಳನ್ನು ಕಲೆಯು ಹಾದು ಬರುವಾಗ, ಅದು ಅಸಾ ಧಾರಣವಾದ ಒಂದು ರೂಪವನ್ನು, ಶೈಲಿಯನ್ನು ಪಡೆಯಿತು. ಅದನ್ನು ಉಳಿಸ ಬೇಕು ಎಂಬುದೇ ಪರಂಪರಾವಾದಿ ಕಲಾಸಕ್ತರ ಆಶಯ, ಹೊರತು ಅದೇ ಅದೇ ಪ್ರಸಂಗಗಳನ್ನು ತೋರಿಸಬೇಕು, ಬೇರೆ ವಸ್ತುಗಳನ್ನು ತರಬಾರದು ಎಂದು ಅಭಿ ಪ್ರಾಯವಲ್ಲ; ಹಾಗೆ ಹೇಳುವುದು ಕಲೆಯ ವ್ಯಾಪಕತೆಗೆ ಸರಿಯೂ ಅಲ್ಲ. ಕಲಾ ಪರಂಪರಾವಾದಿಯು ಪುರಾಣವಾದಿಯಲ್ಲ; ಹಾಗೆ ಇರಬೇಕಾಗಿಯೂ ಇಲ್ಲ.

ಹೊಸ ಕಥೆಗಳ ಪ್ರವೇಶದಿಂದ ಕಲೆ ಶ್ರೀಮಂತವಾಗಬಹುದು. ಆದರೆ ಅಷ್ಟರಿಂದಲೇ ಶ್ರೀಮಂತವಾಗುತ್ತದೆ ಎಂದು ಹೇಳುವಂತಿಲ್ಲ. ಆ ಕಥೆಗೆ, ವಸ್ತುವಿಗೆ ಯಕ್ಷಗಾನದ ಶೈಲಿಯನ್ನು, ಕಲಾಭಾಷೆಯನ್ನು ಬಳಸುವ ಸಾಧ್ಯತೆ ಇದೆಯೆ? ಹಾಗಯೇ, ಯಕ್ಷಗಾನದ ವೇಷ, ನೃತ್ಯ, ಗಾನ, ತಂತ್ರ, 'ರಂಗಭಾಷೆ'ಗಳಿಗೆ ಅದನ್ನು “ತಾಳಿಕೊಳ್ಳುವ' ಶಕ್ತಿ ಇದೆಯೆ? ಇವೆರಡೂ ಪ್ರಶ್ನೆಗಳು ಮುಖ್ಯ. ಎರಡರಲ್ಲಿ ಒಂದು ತಪ್ಪಿದರೂ ವಿಸಂಗತಿ ಸಂಭವಿಸುತ್ತದೆ. ಶೈಲಿಯ ಆವರಣವುಳ್ಳ ಕಲೆಯಲ್ಲಿ ವಸ್ತು ವಿನ ಪ್ರಶ್ನೆಯೇ ಬಹಳ ತೊಡಕಿನದ್ದಾಗಿದೆ.

ಯಕ್ಷಗಾನದ ಸಂದರ್ಭದಲ್ಲಿ ಕಥೆ, ಪ್ರಸಂಗ, ವಸ್ತುಗಳ ಬಗೆಗೆ ಯೋಚಿಸುವಾಗ, “ಪೌರಾಣಿಕ” ಎಂಬುದರ ಬದಲಾಗಿ “ಯಕ್ಷಗಾನ ಯೋಗ್ಯ” ಅರ್ಥಾತ್