ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಂದಿಗೂ ಆಕರ ಗ್ರಂಥವಾಗಿರುವ ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ' ಯಕ್ಷಗಾನವನ್ನು ಪರಿಚಯಿಸುವ ವಿವರಣಾತ್ಮಕ (descriptive) ಪುಸ್ತಕ, ಅನಂತರ ಯಕ್ಷಗಾನದ ಸಮಗ್ರದರ್ಶನದ ಕೃತಿ ವ್ಯಕ್ತಿಯೋರ್ವನಿಂದ ಬಂದಿಲ್ಲ ಎನ್ನುವುದು ತಪ್ಪು ಅಭಿಪ್ರಾಯವಲ್ಲ. ಸಾಹಿತ್ಯ ಪ್ರಪಂಚದಲ್ಲಿ 'ಸಾಹಿತ್ಯ ಶಾಸ್ತ್ರ', “ಕಾವ್ಯ ಮೀಮಾಂಸೆ'ಯಂತಹ ಗ್ರಂಥಗಳಿರುವಂತೆ ಯಕ್ಷಗಾನ ಮೀಮಾಂಸೆ' ಹುಟ್ಟುವ ಕಾಲ ಹತ್ತಿರದಲ್ಲಿದೆ. ಯಾಕೆಂದರೆ ಕಳೆದ ಮೂರು ನಾಲ್ಕು ದಶಕಗಳಲ್ಲಿ ಅಷ್ಟು ವಿಪುಲ ಚರ್ಚೆಯ ಕೃಷಿ ನಡೆದಿದೆ. ಹೆಚ್ಚಿನ ಯಕ್ಷಗಾನ ಗೋಷ್ಠಿ ಗಳಲ್ಲಿ, ಚರ್ಚಾವೇದಿಕೆಗಳಲ್ಲಿ ಭಾಗವಹಿಸಿ ಅನುಭವ ಸಂಪತ್ತನ್ನು ಗಳಿಸಿಕೊಂಡಿರುವ, ಸ್ವತಂತ್ರಶೈಲಿಯ ಉತ್ತಮ ಬರಹಗಾರರೂ ಆಗಿರುವ ಶ್ರೀ ಪ್ರಭಾಕರ ಜೋಶಿ ಯವರು ಯಕ್ಷಗಾನ ಮೀಮಾಂಸಾ ಗ್ರಂಥವೊಂದನ್ನು ಬರೆಯುವಂತಾಗಲಿ ಎನ್ನು ವುದು ಈ ಸಂದರ್ಭದಲ್ಲಿ ನನ್ನ ಶುಭ ಹಾರೈಕೆ.


ಇಂಗ್ಲಿಷ್ ವಿಭಾಗ,
ಎಮ್. ಜಿ. ಎಮ್. ಕಾಲೇಜು,
ಉಡುಪಿ – ದ. ಕ.ಎಮ್. ಎಲ್, ಸಾಮಗ