೧೧೪ ಹೇಮಚಂದ್ರರಾಜ ವಿಲಾಸ. [೫ನೇಅಂಕ. ಕುವಂತ) ನನಗೆ ಉಸಿರು ಹತ್ತಿ ಬರುತ್ತಿದೆ. ನನ್ನ ದುಸ್ವಭಾವವು ಆಸ್ಪದ ಕೊಡದಿದ್ದಾಗ್ಯೂ, ಸ್ವಲ್ಪ ಒಳ್ಳೇದನ್ನ ಮಾಡಬೇಕೆಂದಿದ್ದೇನೆ. ಜಾಗ್ರತೆಯಾಗಿ ಕಳುಹಿಸಿ, ಸಂಕ್ಷೇಪವಾಗಿ ಬರೆಯಿರಿ, ಕಾರಾಗೃಹಕ್ಕೆ ದೊರೆಯು ಪ್ರಾಣವನ್ನೂ ಇಂದುಕಲೆಯ ಪ್ರಾಣವನ್ನೂ ತೆಗೆಯಬೇಕೆಂದು ಬರೆದಿದ್ದೇನೆ. ಸಕಾಲದಲ್ಲಿ ಹೋಗಲಿ. ಭವ-ಓಡು, ಓಡು, ಅಯ್ಯೋ ಓಡಿಹೋಗಯ್ಯ, ಶಕ-ನ್ಯಾಮಿಯಾರಬಳಿಗೆ ಹೋಗಲಿ ? ಯಾರು ಈ ಕೆಲಸಕ್ಕೆ ನೇಮಕವಾಗಿದ್ದಾರೆ? ಎಲಾ, ನಿನ್ನ ಗುರುತನ್ನು ಏನಾದರೂ ಕಳುಹಿಸು. ಕುಮ೦ತ, ಸರಿಯಾದ ಯೋಚನೆ. ನನ್ನ ಕತ್ತಿಯನ್ನು ತೆಗೆದುಕೊ, ಅದನ್ನು ಕೊಂಡುಹೋಗಿ ಸೇನಾನಾಯಕನಿಗೆ ಕೊಡು. ಭದ ಅಯ್ಯ ಜಾಗ್ರತೆಯಾಗಿ ಹೋಗು, ನಿನ್ನ ಪ್ರಾಣವನ್ನು ರಕ್ಷಿಸಿಕೊಳ್ಳುವು ದಕ್ಕೆ ಹೋಗುವಹಾಗೆ ಹೋಗೈ. (ಶುಕ್ಲಚಂದ್ರ ನಿಷ್ಠಾ ಲತ.) ಕುವಂತ )- ಇಂದುಕಲೆಯನ್ನು ಸೆರೆಮನೆಯಲ್ಲಿ ನೇಣುಹಾಕುವುದಕ್ಕಾಗಿ ನಿನ್ನ ಹೆಂಡತಿಯಿಂದಲೂ ನನಿಂದಲೂ ಆಜ್ಞ ಸ್ಥನಾಗಿದ್ದಾನೆ. ಮೇಲೂ ತನಗೆ ಉಂಟಾದ ನಿರಾಶೆಯೇ ಈ ದೋಷಕ್ಕೆ ಕಾರಣವೆಂದು ತೋರಿಸುವುದಕ್ಕಾಗಿ, ತಾನೇ ಆತ್ಮ ಹತ್ಯವನ್ನು ಮಾಡಿಕೊಂಡಳು ಎಂದು ಕಾಣುವಂತೆ ಹೀಗೆ ಆಜ್ಞಾಪಿಸಿದೇವೆ. ಭದ್ರ ದೇವರು ಆಕೆಯನ್ನು ಕಾಪಾಡಿ ಪ್ರಾಣವನ್ನು ಉಳಿಸಿದರಾದೀತಲ್ಲಾ ! ಸ್ವಲ್ಪ ಹೊತ್ತು ಇವನನ್ನು ಆಚೆಗೆ ಹೊತ್ತುಕೊಂಡು ಹೋಗಿ, (ಕುಮಂತ್ರನನ್ನು ಹೊತ್ತುಕೊಂಡುಹೋಗುವರು.) ಸವೇಶ ದೊರೆ ಕನ್ನ ತೋಳಿನಮೇಲೆ ಇಂದು #ಲೆಯ ಹೆಣವನ್ನು ಎತ್ತಿಕೊಂಡು, ಹಿಂದೆ, ಕುಚಂದ್ರ, ಸೇನಾನಾಯಕ ಇತರ ಪರಿವಾರ. ದೊರೆ-ಬೊಗಳಿ, ಬೊಗಳಿ, ಬೊಗಳಿರೋ, ಬೊಗಳಿ ! ಎಲಾ, ಕಲ್ಲುಮನುಷ್ಯರಾ ! ನಿಮಗಿರುವಹಾಗೆ ನಾಲಗೆಯೂ ಕಣ್ಯ ನನಗಿದ್ದರೆ, ಈ ಬ್ರಹ್ಮಾಂಡ ಕಟಾ ಹವೇ ಒಡೆದುಹೋಗುವಂತೆ ಅರಿಚಿಕೊಳ್ಳುತಿದ್ದೆನಲ್ಲಾ! ಹೋಗಿಬಿಟ್ಟಳು, ಸತ್ತು ಹೋಗಿಬಿಟ್ಟಳು ! ಪ್ರಾಣ ಇರುವ ಗುರುತನ್ನೂ ಸತ್ತ ಗುರುತನ್ನೂ ನಾನು ಬಲ್ಲೆ. ಸತ್ತು ಈ ನೆಲದಹಾಗೆ ಆಗಿಹೋದಳಲ್ಲಾ! ಬಂದು ಕನ್ನಡಿಯನ್ನು
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೩೧
ಗೋಚರ