ಪುಟ:ಪ್ರೇಮ ಮಂದಿರ.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Y / + * * * * * * * + +++ ++ +++ ++ */+ P4 mmm. ಪ್ರೇಮಮಂದಿರ .. ' ,, , , , « ಲಲಿತೇ, ನಾನು ಬಂದಿದ್ದೇನೆ. ” PA PAK ಕ್ಷಣಾರ್ಧದಲ್ಲಿಯೇ ಲಲಿತೆಯು ಸ್ವರವನ್ನು ಗುರ್ತಿಸಿದಳು. ಕರುಣಸಿಂಹನು ತನ್ನನ್ನು ಕಾಣುವುದಕ್ಕೋಸ್ಕರ ಸಾಹಸದಿಂದ ಬಂದಿದ್ದಾನೆಂಬುದು ಆಕೆಗೆ ತಿಳಿಯಿತು. ರಾಜಕು ಮಾರನು ಎದುರಿನಲ್ಲಿರುವುದನ್ನು ನೋಡಿ ನಾಚಿಕೆಯಿಂದ ಕೆಳಗೆ ನೋಡಹತ್ತಿದಳು. ಕರುಣಸಿಂಹನು ರಾಜಕನೆಯ ಮುಂದೆ ಬಂದು ನಿಂತನು. ಕಿಂಚಿತ್ಕಾಲದವರೆಗೆ ಇಬ್ಬರೂ ಸ್ತಬ್ದರಾಗಿದ್ದರು. ಸ್ವಲ್ಪ ಹೊತ್ತಿನ ಮೇಲೆ ಬಂದು ನಿಶ್ವಾಸವನ್ನು ಬಿಟ್ಟು ಆತನು ಖಿನ್ನ ಸ್ವರದಿಂದ ಮಾತನಾಡಿದನು. « ಲಲಿತೇ, ಹೀಗೆಯೇ ಇನ್ನೂ ಎಷ್ಟು ದಿನ ಸಗಳ ವರೆಗೆ ಕಳ್ಳನಂತೆ ನಿನ್ನ ದರ್ಶನಕ್ಕಾಗಿ ನಾನು ಈ ದುರ್ಗಕ್ಕೆ ಬರಬೇಕು?” ನನ್ನ ಮನಸ್ಸಿನಲ್ಲಿದ್ದುದನ್ನು ನಿಮ್ಮ ತಂದೆಗೆ ಸ್ವಷ್ಟವಾಗಿ ತಿಳಿಸಿ ಬಿಟ್ಟು ನಿನ್ನನ್ನು ನನಗೆ ಮದು ವೆಮಾಡಿ ಕೊಡುವಂತೆ ಕೇಳಬೇಕೆಂದು ಬಹು ದಿವಸಗಳಿಂದಲೂ ಯೋಚಿಸಿದ್ದೇನೆ. ಆದರೆ ಭೀಮಸಿಂಹನ ಉದ್ದ ತವಾದ ಕೂರಸ್ವಭಾವವು ನೆನಪಿಗೆ ಬಂದೊಡನೆಯೇ ಆ ವಿಚಾರವನ್ನು ಬಿಟ್ಟು ಬಿಡಬೇಕಾಗುವುದು. ಭೀಮಸಿಂಹನು ನನ್ನ ಪ್ರಾಣಪ್ರಿಯ ಲಲಿ ತೆಯ ಜನ್ಮದಾತೃವೆಂದು ತಿಳಿದು ಅವನೊಡನೆ ಇದ್ಧ ಶತ್ರುತ್ವವನ್ನು ಮರೆತು ಬಿಟ್ಟಿದ್ದೇನೆ. ಅವನು ನನ್ನ ಆಪ್ತನೆಂದಾಗಲಿ ಮಿತ್ರನೆಂದಾಗಲಿ ತಿಳಿಯುತ್ತೇನೆ. ಚಂದ್ರಚೂಡರವರು ಬೇಡವೆಂದು ಹೇಳಿದ್ದರೂ ಅನೇಕ ಭಯಂಕರವಾದ ವಿಘ್ನಗಳನ್ನು ಸಹ ಲೆಕ್ಕಿಸದೆ ಈ ಶತ್ರುದುರ್ಗದಲ್ಲಿ ಬಂದು ನಿನ್ನ ದರ್ಶನವನ್ನು ತೆಗೆದುಕೊಳ್ಳುತ್ತಿರುವೆನು. ಲಲಿತೇ, ಪ್ರಿಯೇ ಈ ಸ್ಥಾನವನ್ನು ಬಿಟ್ಟು ನನ್ನ ಸಗಂಡ ಬಾ. ಅವಶ್ಯವಾಗಿಯೂ ನನ್ನೊಡನೆ ಬಾ, ನಿನ ಗೋಸ್ಕರವಾಗಿ ಮೊಗಲರ ದಂಡಾಳುತನವನ್ನು ಕೂಡ ಬಟ್ಟು ಬಿಡಲು ನಾನು ಸಿದ್ಧ ನಿದ್ದೇನೆ. ಒಂದು ಮುರಕ ಗುಡಿಸಲಿನಲ್ಲಿದ್ದರೂ ಕೂಡ ನಿನ್ನ ಸ್ವರ್ಗಿಯ ಸಹವಾಸದ ಮೂಲಕ ನನಗೆ ಅಪೂರ್ವವಾದ ಸೌಖ್ಯವೇ ಆಗುವುದು. ನಿನ್ನ ಪ್ರೇಮಲ ಸಂಗತಿ ಯಿಂದ ವಿಜನವನವೂ ನನಗೆ ನಂದನವನಸಮಾನವಾಗುವುದು. ” ಲಲಿತೆಯು ಮೊದಲು ಏನೂ ಮಾತಾಡಲಿಲ್ಲ. ಸುಮ್ಮನೆ ಇದ್ದಳು. ಕೆಲವು ವೇಳೆಯ ಅನಂತರ ಅಸ್ಟುಟಸ್ವರದಿಂದ ಕರುಣಸಿಂಹನನ್ನು ಕುರಿತು ಹೇಳಿದಳುಃ ( ಪ್ರಿಯರೇ, ಈ ಜನ್ಮದಲ್ಲಂತೂ ನಮಗೆ ಸೌಖ್ಯವು ದೊರೆಯುವದು ಅಶಕ್ಯವಾಗಿಯೇ ತೋರುತ್ತದೆ. ನಮ್ಮಿಬ್ಬರ ವಿವಾಹಕ್ಕೆ ಒದಗಬಹುದಾದ `ವಿಘ್ನಗಳನ್ನು ನೆನಿಸಿಕೊಂಡು ನಾನಂತೂ ಪೂರ್ಣವಾಗಿ ನಿರಾಶಳಾಗಿದ್ದೇನೆ. ಇದೆಲ್ಲದರ ಪರಿಣಾಮವೇನಾಗಬಹುದೆಂದು ದರ ಕಲ್ಪನೆಯನ್ನು ಮಾಡುವದು ಕೂಡ ನನಗೆ ಅಶಕ್ಯವಾಗಿದೆ. ತಾವು ನನ್ನನ್ನು ಎಲ್ಲಿ ಕರೆದುಕೊಂಡು ಹೋಗುವಿರೋ ಆ ಸ್ಥಾನವು ಎಷ್ಟೇ ದರಿದ್ರವಾಗಿದ್ದರೂ ಅಲ್ಲಿ ನನಗೆ ಪರಮಸೌಖ್ಯವೇ ಆಗುವುದು. ಆದರೆ ದುರ್ದೈವಿಯಾದ ನನ್ನ ಹಣೆಯಲ್ಲಿ ಆ ಸುಖವಿಲ್ಲ. ನಮ್ಮ ದಾರಿಯಲ್ಲೊಂದು ಹೊಸದಾದ ವಿಘ್ನವು ಉಪಸಿ ತವಾಗಿದೆ. ನನ್ನ