ಪುಟ:ಪ್ರೇಮ ಮಂದಿರ.djvu/೪೯

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವಾಗ್ಯೂಷಣ.

  • * * * *

ಆತನ ಬೆನ್ನನ್ನು ಚಪ್ಪರಿಸುತ್ತ ಕುಮಾರನು ಮಾತನಾಡಿದನು. (( ಶಾಬಾಸ ಶಾಬಾಸ - ಸಮರಾ! ನಡೆ ಇನ್ನು, ಸಂಕಟವನ್ನು ಭುಜದ್ವಯದಿಂದ ಆಲಿಂಗಿಸಲು ನಾವು ಸಿದ್ದರೇ ಇದ್ದೇವೆ. ಇನ್ನು ಮೇಲೆ ಸ್ವಲ್ಪಾದರೂ ಹಿಂದೆಸರಿಯುವ ಹಾಗಿಲ್ಲ. ” « ಇಂದೇ ತಾವು ಆ ಕೆಲಸವನ್ನು ಕೈಕೊಳ್ಳುವಿರಾ? ” ( ಹೌದು ಇಂದೇ; ಈ ರಾತ್ರಿಯಲ್ಲಿಯೇ; ಈ ಕ್ಷಣದಲ್ಲಿಯೇ ? ?ಉತ್ತೇಜಿತ ಸ್ವರದಿಂದ ಕುಮಾರನು ಮಾತನಾಡಿದನು. ( ಹಾಗಾದರೆ ದೊರೆಗಳೇ, ನನ್ನದೊಂದು ವಿನಂತಿಯನ್ನು ಕೇಳಿರಿ. ತಮ್ಮ ಕುದು ರೆಯನ್ನು ಇಲ್ಲಿಯೇ ಕಟ್ಟಿ ನೀವು ಮುಂದಕ್ಕೆ ಹೋಗಿರಿ. ನಾವೀಗ ದುರ್ಗಕ್ಕೆ ತೀರ ಸಮೀಪದಲ್ಲಿಯೇ ಇದ್ದೇವೆ. ” ( ಹೌದು-ಸಮರಾ! ನೀನನ್ನುವುದು ನಿಜ. ಆದರೆ ಅಜಯನನ್ನು ಎಲ್ಲಿ ಕಟ್ಟಿ ಬೇಕು? ೨೨

  • ಸಮೀಪದಲ್ಲಿರುವ ಆ ಗಿಡಕ್ಕೆ ನಾನು ಅದನ್ನು ಕಟ್ಟುತ್ತೇನೆ. ಹಿಂದಿರುಗಿ ಬರು ವಾಗ ನಾನು ಅದನ್ನು ತೆಗೆದುಕೊಂಡು ಹೋಗುವೆನು. ”

« ಒಳ್ಳೇದು. ನಿನ್ನ ಮನಸ್ಸಿಗೆ ಬಂದಂತೆಯೇ ಮಾಡು. ಆದರೆ ಈ ಭಾಲೆಯನ್ನೂ ಖಡ್ಗವನ್ನೂ ಯುದ್ಧವೇಷವನ್ನೂ ತೆಗೆದುಕೊಂಡು ಏನು ಮಾಡಬೇಕು ? ” ಆ ಸೂಚಿಭೇದ್ಯ ಅಂಧಕಾರದಲ್ಲಿಯೂ ಕೂಡ ಪದಾರ್ಥವನ್ನಾಗಲಿ ವ್ಯಕ್ತಿಯನ್ನಾ ಗಲಿ ಸ್ಪಷ್ಟವಾಗಿ ಕಂಡುಕೊಳ್ಳುವ ಅದ್ಭುತ ಸಾಮರ್ಥ್ಯವು ಯಾರಿಗಿರುವದೋ ಅಂತ ಹರಿಗೆ ಈ ಸಮಯದಲ್ಲಿ ಸಮರಸಿಂಹನ* ಮುಖಮುದ್ರೆಯ ಮೇಲೆ ಹಾಸ್ಯರೇಷೆಯು ಅಂಕಿತವಾಗಿದ್ದುದು ಸ್ಪಟವಾಗಿ ಕಂಡುಬರುತ್ತಿತ್ತು. ಸಮರಸಿಂಹನು ಸಗನಗುತ್ತ ತನ್ನ ಲ್ಲಿಯೇ ಮಾತಾಡಿಕೊಂಡನು. ( ಇದೇನು ನಮ್ಮ ಒಡೆಯರ ಸ್ವಭಾವವೋ ಏನೋ ! ತಾವು ಪ್ರಣಯಿನಿಯ ಸಂದರ್ಶನಕ್ಕೆ ಹೊರಟಿರುವುದರಿಂದ ಭಾಲೆಖಡ್ಡಗಳ ಅವಶ್ಯಕತೆ ಯಿಲ್ಲವೆಂದು ಅವರು ತಿಳಿಯುತ್ತಾರೆ! ” 'ಆಮೇಲೆ ಸಮರಸಿಂಹನು ಕುಮಾರನನ್ನುದ್ದೇಶಿಸಿ ಮಾತನಾಡಿದನು. ( ಭಾಲೆಯು ಅಷ್ಟೊಂದು ಆವಶ್ಯಕವಿಲ್ಲವೆಂದು ತಿಳಿಯುತ್ತಿದ್ದರೆ ಅದನ್ನು ಇಲ್ಲಿಯೇ ಇಟ್ಟು ಹೋಗಿ, ಆದರೆ ಯಾವ ವೇಷದಿಂದ ನೀವು ಇಲ್ಲಿಯವರೆಗೆ ಬಂದಿರುವಿರೋ ಅದೇ ವೇಷದಿಂದಲೇ ಮುಂದೆ ನಡೆಯಿರಿ ಮತ್ತು ಖಡ್ಗವನ್ನು ಅವಶ್ಯವಾಗಿಯೂ ಸಂಗಡ ತಗೆದುಕೊಳ್ಳಿರಿ. ಒಡೆಯರೇ, ತಾವು ಪ್ರಿಯೆಯ ಸಂದರ್ಶನಕ್ಕೆ ಹೋಗುವುದೇನೋ ನಿಜ; ಆದರೆ ಶತ್ರು ಗಳ ದುರ್ಗವನ್ನು ಪ್ರವೇಶಿಸುತ್ತೀರೆಂಬುದನ್ನು ಮಾತ್ರ ಮರೆಯಬೇಡಿರಿ,