ಪುಟ:ಬನಶಂಕರಿ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೯

ಮೇಲಿಟ್ಟು, ಒಡೆದ ಕಲ್ಲೊಂದರ ಮೇಲೆ ಎರಡೂ ಕೈಗಳಲ್ಲಿ ತಲೆಯಿರಿಸಿ ಉಸಿರಿಗಾಗಿ ಏದುತ್ತಾ ಏದುತ್ತಾ ಮುನಿಯಪ್ಪ ಕುಳಿತಿದ್ದ.
     "ಏನಾಯ್ತು ಮುನಿಯ ಏನಾಯ್ತು?"
     "ಅತ್ತೆಯೂ ಇಳಿದು ಬಂದು ಸ್ವಲ್ಪ ದೂರದಲ್ಲಿ ನಿಂತರು.
     "ಏನಾಯ್ತೂಂದ್ರೆ..?"
    ಅಮ್ಮಿ ಮೆಲ್ಲನೆ ನಡೆದು ಬಂದು ಬಾಗಿಲನ್ನು ಆದರಿಸಿ ನಿಂತಳು ಅವಳ ಮನಸ್ಸು ಕೇಳುತಿತ್ತು ಮೂಕನಾಗಿ.
    'ಏನಾಯ್ತು ಅವರಿಗೇನಾಯ್ತು ನನ್ನ ದೇವರಿಗೇನಾಯ್ತು?'
    ಸ್ವರ ಹೊರಡಿಸಲೆತ್ನಿಸಿದ ಮುನಿಯ. ಮಾತಿನ ಬದಲು ರೋದನದ ದ್ವನಿ ತೆಗೆದ,
   "ಅಯ್ಯೋ  ಎಂದರು ಅತ್ತೆ. ಏನಾಯ್ತು?ಅಯ್ಯೋ! ಏನಾಯ್ತು?"
  ಮಾವ ಗದರಿ ನುಡಿದರು;
  "ಸುಮ್ನಿರು  ಲಕ್ಷ್ಮಿ, ನೀನು ಸುಮ್ನಿರು"
   ಮತ್ತು ನಾಲ್ಕಾರು ನಿಮಷ ಮುನಿಯ ಮಾತನಾಡಲೇಯಿಲ್ಲ ಮಡಿ ಮೈಲಿಗೆಯನ್ನು ಗಣಿಸದ ಮಾವ ಅವನ ಬುಜಹಿಡಿದು.
  "ಹೇಳು ಮುನಿಯ! ಹೇಳು! ಏನಾಯ್ತು ಹೇಳು!ಎಲ್ಲಿ ರಾಮಚಂದ್ರ? ಬರ್ಲಿಲ್ವೇನು?"
 ಮುನಿಯ ಮಾವನ ಪಾದಗಳನ್ನು ಹಿಡಿದುಕೊಂಡ 
 'ನಾನು ಕಡು ಪಾಪಿ! ದ್ಯಾವ್ರು... ನಾನು ಕಡು,ಪಾಪಿ"!
 "ಏನಾಯ್ತು ಹೇಳ್ಭಾದ್ರೇನೋ...?"
  ಆ ಬಳಿಕ ಪಿಸು ಮಾತಿನಲ್ಲಿ ಆ ವಿಶಯ..
 "ಚಿಕ್ಕ ಅಯ್ನೋರು ಇವತ್ತು ಚಂಜೆಗೇ ತೀರ್ಹೋದ್ರು.....ಅಯ್ಯೋ..!
 ಅಮ್ಮಿಗೆ ಕೇಳಿಸಿದುದು ಆ ಮಾತಲ್ಲ.ಅವಳ ಕಿವಿಯನ್ನಿರಿದುದು ಅತ್ತೆಯ ಕಠೋರ ರೋದನೆ ತಲೆ ತಿರುಗಿ
ಅತ್ತೆ ನೆಲದ ಮೇಲೆ ಕುಸಿದು ಬಿದ್ದುದನ್ನು ಅವಳು ಕಂಡಳು ಮಾವ ಸ್ತಂಬಿತರಾಗಿ ಕಲ್ಲು ಬೊಂಬೆಯ ಹಾಗೆ 
ಕತ್ತಲೆಯನ್ನು ಭೇದಿಸಿ ಕೊಂಡು ಆಕಾಶಕ್ಕೆ ಅಡರಿದ ಆ ರೋದನವೂ!ಅಮ್ಮಿ ಅದೀರಳಾದಾಗ ಯಾವಾಗಲೂ
"ಅಮ್ಮ"ಎನ್ನುತ್ತಿದ್ದಳು ಗತಿಸಿದ ಅಮ್ಮನ ನೆನಪು ಈಗಲೂ ಅತ್ತೆಯ ಬಳಿಗೆ ಓಡುತ್ತಾ ಓಡುತ್ತಾ ಅವಳು
ಕೂಗಾಡಿದಳು;"ಅಮ್ಮ!ಅಮ್ಮಾ!"
  ಅಯ್ಯೋ!ನನ್ನ ರಾಮಚಂದ್ರನ್ನ ಮುದ್ದು ಕಂದನ್ನ ಕೊಂದ್ರಪ್ಪೊ ಕೊಂದರು..ಅಯ್ಯೋ-ಅಯ್ಯೋ!"
  "ರಾಮ-ಚಂದ್ರ-"
  ಅಮ್ಮಿ ಮಾವನ ಮುಖ ನೋಡಿದಳು,ಮುನಿಯನ ಮುಖ ನೋಡಿದಳು ಹಾ! ಹಾಗೂ ಆಯಿತೆ?
  "ಅಮ್ಮಾ!ಅಮ್ಮಾ!.."
 ಆ ಕೂಗಿನ ಜತೆಯಲ್ಲೇ,ಹೃದಯ ತಲ್ಲಣಿಸುವಹಾಗೆ ಬಿಕ್ಕಿ ಬಿಕ್ಕಿ ಬಂದ ಅಳು,