ಪುಟ:ಬನಶಂಕರಿ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೩

ಕೊನೇಲಿ ನಿಂತ್ಕೊಂಡು ಬಾರಿಸಿ"
       ಹೂನಪ್ಪಯ್ಯ ಹಾಗೇ ಮಾಡ್ತೀನಿ"
    ರಂಗ ಮೂಲೆಯಿಂದ ಬಿಚ್ಚಿಕೊಂಡು ಪಟಾಕಿಯನ್ನು ಮೊದಲು ಹಾರಿಸಿದ,ಅದು ಆರಂಭ,
ಆ ಬಳಿಕ ಹುಡುಗರ ಹುಚ್ಚು ಕಿರಿಚಾಟದೊಡನೆ ಹಿರಿಯರ ನಗೆ ಸಂತೋಷದೊಡನೆ ಅಮ್ಮಿಯ 
ಅನಂದೋತ್ಸಾಹ ಪಟಾಕಿಗಳು ಚಟ್ ಚಟಿಲೆಂದವು, ಸುರುಸುರು ಬಾಣಗಳು ಆಕಾಶಕ್ಕೆ

ನೆಟ್ಟವು ನಕ್ಷತ್ರಕಡ್ಡಿಗಳು ಮೌನವಾಗಿ ಬಣ್ಣಬಣ್ಣವಾಗಿ ಉರಿದು ಸಾವಿರ ನಕ್ಷತ್ರಗಳನ್ನು ಉಗುಳಿದವು.

   ಆ ಬೆಳಕು ತಾರೆಗಳನೆಲ್ಲಾ ಅಂಗೈಯಲ್ಲಿ, ಸೆರಗಿನಲ್ಲಿ, ಹಿಡಿಯಬೇಕೆಂಬ ಬಯಕೆ ಅಮ್ಮಿಗೆ
ಆದರೆ ಗೃಹಿಣಿಯಾದ ಆಕೆ ಹಾಗೆ ಮಾಡಲು ಸ್ವತಂತ್ರಳಲ್ಲ
   ಇಷ್ಟಿದ್ದರೂ ಒಂದು ವಿಷಯದಲ್ಲಿ ಮಾತ್ರ ಯಾರಿಗೂ ಇಲ್ಲದ ಹೆಮ್ಮೆ ಅವಳ ಆಸ್ತಿಯಾಗಿತ್ತು
ಪೇಟೆಯಿಂದ ತನ್ನ ಪತಿದೇವರು ಕಳುಸಿದ್ದಲ್ಲವೇ,ಈದಿನ ಪಟಾಕಿಯಾಟ ಸಾದ್ಯವಾದ್ದದ್ದು?
     ಆ ಮಧ್ಯಾಹ್ನ ಬಲು ಜಂಬದಿಂದ ನಾಣಿ ಹೇಳಿದ್ದ;
    "ಐ ಅಮ್ಮ.. ಇವತ್ತು ಸಾಯಂಕಾಲ ಎಂಥೆಂಥ ಪಟಾಕಿ ಹಾರಿಸ್ತೀವಿ ಗೊತ್ತಾ"
    ರಂಗ ರಾಗವೆಳೆದಿದ್ದ; 
   "ಆನೆ ಪಟಾಕಿ....ಕುದುರೆ ಪಟಾಕಿ.."
    ಅಮ್ಮಿಗೆ ತನಗೆ ಆ ಬಾಗ್ಯವಿಲ್ಲವೆಂಬ ದು:ಖ ಒಂದೆಡೆ: ಕಳುಹಿಸಿಕೊಟ್ಟದ್ದು ತನ್ನ ಗಂಡ
ನೆಂದು ಆ ಮೈದುನರು ಹೇಳಲಿಲ್ಲವೆಂಬ ಸಿಟ್ಟು ಒಂದೆಡೆ, ಆ ಭಾವನೆಗಳಿಂದ ನೊಂದು ಅವಳ
ಸುಂದರ ಮುಖ ಸಿಂಡರಿಸಿತು .
    ನೋವಿನ ದ್ವನಿಯಲ್ಲಿ ಒಂದು ಪ್ರಶ್ನೆ; ಹಾಗೆ
   "ಆ ಪಟಾಕಿ ಎಲಿಂದ್ಬಂತೋ?"
   "ಚಿಕ್ಕಮಗಳೂರಿಂದ."
   "ಹುಂ ಯಾರು ಕಳಿಸ್ಕೊಟ್ಟೋರು?"
   "ನಮ್ಮಣ್ಣ ಕಣೇ-ನಮ್ಮಣ್ಣ|"
  ಮತ್ತೆ ಸೋಲು ಅಮ್ಮಿಗೆ ರಾತ್ರೆ ಅಂಚೆಯವನ ಜತೆಗೂಡಿ ಅವರು ಬರುವರು;ಆಗ ಸಮಯ    
ಸಾದಿಸಿ ಗುಟ್ಟಾಗಿ ಅವರಿಗೆ,ತನಗಾದ ಅವಮಾನದ ವರದಿಯೊಪ್ಪಿಸಬೇಕು-ಎಂದು ಅಮ್ಮಿ
ಯೋಚಿಸಿದಳು.
  ಹಾಗೆ ಎಷ್ಟೋಂದು ಸಾರಿ ಯೋಚಿಸಿಲ್ಲ! ಆದರೆ ಗಂಡ ಬಂದಾಗ ಎಂದೂ ಅಂತಹ ಮಾತನ್ನು
ಅಮ್ಮಿ ಹಾಡಿದವಳಲ್ಲ. ಅಷ್ಟೆಕೆ? ಕ್ಶಣಕಾಲ ಎಂದಾದರೊಮ್ಮೆ ಗೋಪ್ಯದಲ್ಲಿ ಸಂದಿಸಿದಾಗ-
ಹೂಂ ಹೊರತಾಗಿ ಹೆಚ್ಚು ಮಾತನ್ನೆ ಅವಳು ಆಡಿದವಳಲ್ಲ.
    "..ಅವರ ಆಗಮನ...ಸಾಲುದೀಪಗಳ ಬೆಳಕಿನ ಆವರಣದೊಳಗೆ ಆ ಹುಡುಗರಿಬ್ಬರೂ 
ಹುಚ್ಚೆದ್ದು ಕುಣಿಯುತ್ತಿದ್ದಾರೆ, ಕತ್ತಲು-ಬೆಳಕುಗಳ ನಡುವೆ ಕಣ್ಣುಮುಚ್ಚಾಲೆಯಾಟ ನಡೆದಿದೆ
ಅದನ್ನುಅಮ್ಮಿ ಬಾಗಿಲ ಬಳಿ ನಿಂತು ನೋಡುತ್ತಿದ್ದಾಳೆ.ಹಾಗೆ ನೋಡುತ್ತಿದ್ದರೂ ಅವಳ ದೃಷ್ಟಿ
ಮುಂದಕ್ಕೆ ಹರಿದಿದೆ-ಮುಂದಕ್ಕೆ ದೂರ...ಗುಡ್ಡ ಬೆಟ್ಟಗಳನ್ನು ದಾಟಿ.