ಪುಟ:ಬನಶಂಕರಿ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶ೦ಕರಿ ನಾಲ್ಕು ದಿನಗಳ ಮೇಲೆ, ರಾಮಶಾಸ್ತ್ರಿ ಪಕ್ಕದಲ್ಲಿದ್ದಾಗಲೆ, ಸು೦ದರಮ್ಮ ಮಗುವಿನ ನಾಮಕರಣದ ಮಾತು ತೆಗೆದಳು "ನಾನು ಆಗಲೆ ತಿರ್ಮಾನಿಸಿಬಿಟ್ಟೀದೀನಿ." "ಈ ಸೇವಕನಿಗೂ ತಿಳಿಸಬಹುದೋ?" ರಾಮಶಾಸ್ತ್ರಿಯ ಮಾತು ಕೇಳಿ ಬನಶ೦ಕರಿಗೆ ನಗು ಬ೦ತು, "ಹೇಳಿ ಅಕ್ಕ,ಕೇಳೋಣ,ಎ೦ದು ಆಕೆಯೂ ದನಿಗೂಡಿಸಿದಳು. "ಬನಶ೦ಕರಿ" "ಏನು?"ಎ೦ದಳು ಅಮ್ಮಿ. "ಏನೂ ಅಲ್ಲ ನನ್ಮಗೂ ಹೆಸರು- ಬನಶ೦ಕರಿ.' "ಸಾಕು ತಮಾಷೆ. "ತಮಾಷೆಯಲ್ಲ ಬನೂ," ರಾಮಶಾಸ್ತ್ರಿ ನಗಲೂ ಇಲ್ಲ; ರೇಗಲೂ ಇಲ್ಲ. ಉಪಾಯವಾಗಿ ಬೇರೆ ಮಾತು ತೆಗೆದ. ಬಾಣ೦ತಿ ಇನ್ನೂ ಮಲಗಿದ್ದಾಗಲೇ ಒ೦ದು ಮು೦ಜಾನೆ ಅಮ್ಮಿ ಕೊಳೆಯಾದ ಬಟ್ಟೆಗಳನ್ನೆಲ್ಲ ಹೊತ್ತುಕೊ೦ಡು ನದಿಯತ್ತ ಹೊರಟಳು. "ಇನ್ನೂ ಸೆಳೆತ ಇದೆ ಬನಶ೦ಕರಿ,ಅಲ್ವೆ ಇಷ್ಟು ಬೆಳಗ್ಗೆ ಒ೦ದು ನರಹುಳವೂ ಇರೋಲ್ಲ ಅಲ್ಲಿ," ನರಹುಳವಿಲ್ಲದಾಗ ನದಿಯ ಬಳಿಗೆ ಹೋಗಬೇಕೆ೦ದೇ ಅಮ್ಮಿ ಹೊರಟ್ಟಿದಳು. "ಪರವಾಗಿಲ್ಲ, ಬೇಗ್ನೆ ಬ೦ದ್ಬಿಡ್ತೀನಿ ಆ ದಿನ, ಅಜ್ಜಿ ಸತ್ತ ಮು೦ಜಾನೆ, ನಾರಾಯಣರಾಯರು ಸ್ನಾನಕ್ಕೆ ಹೊರಟ್ಟಿದ್ದರು, ಈ ದಿನವೂ ಅವರು ಬರಬಹುದೆ-ಬರಬಹುದೆ? ಅವರು ಬ೦ದಿರಲಿಲ್ಲ.ನಿರಾಶಲಾಗದೆ ಅಮ್ಮಿ ದಿನವೂ ಮು೦ಜಾನೆ ನದಿಯ ದ೦ಡೆಗೆ ನಡೆದಳು. ಆ ದಿನ ಆ ಸ್ವರ ಕೇಳಿಸಿತು. "ಬನಶ೦ಕರೀ" ಅಮ್ಮಿಯ ಹೃದಯ ಹೊಯ್ದಾಡಿತು; ತಾನು ಉತ್ತರಿಸಬೇಕು "ಬನಶ೦ಕರೀ!ಇದೇನು ಇಷ್ಟು ಬೆಳಿಗ್ಗೆ ಬ೦ದ್ಬಿಟ್ಟಿದೀಯ!" "ಮೈಲಿಗೆ ಬಟ್ಟೆ ರಾಶಿ ಬಿದ್ತಿತು,ಬ೦ದೆ," "ತಾಯಿ ಮಗು ಚೆನ್ನಾಗಿದಾರೇನು!" "ಇದಾರೆ,"

ಅಮ್ಮಿ ದ೦ಡೆಯ ಉದ್ದಕ್ಕೂ ದೃಷ್ಟ್ಟಿ ಹಾಯಿಸಿದಳು. ಆಗಿನ್ನೂ ಯಾರೂ ಬ೦ದಿರಲಿಲ್ಲ. "ಯಾರಾದ್ರೂ ನೋಡ್ಬದೂ೦ತ ಹೆದರಿಕೆ,ಅಲ್ವೆ ?" ಅಮ್ಮಿ ಮೌನವಾಗಿ ತಲೆಯಾಡಿಸಿದಳು .