ಪುಟ:ಬನಶಂಕರಿ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶ೦ಕರಿ ಕಸಿವಿಸಿಗೊಂಡ ಮನಸಿನಿ೦ದ ರಾಯರು ಎದ್ದರು. "ತಪ್ಪು ತಿಳ್ಕೋಬೇಡ ಬನಶ೦ಕರಿ...ನನ್ನ ಒತಾಯವಿಲ್ಲ... ನಾಳೆಯೋ,ನಾಡಿದ್ದೋ ಹೇಳು..."ಎನ್ನುತ್ತ ಅವರು ಅಲ್ಲಿ೦ದ ಹೊರಟುಹೋದರು. ಆಳುತ್ತಿದ್ದ ಶಿಲಾಪ್ರತಿಮೆಯಾಗಿ ಅಮ್ಮಿ ಅಲ್ಲೆ ನಿ೦ತಳು. ಜುಳುಜುಳು ಸದ್ದು ಮಾಡಿತು ಹರಿಯತ್ತಿದ್ದ ಭದ್ರಾನದಿಯ ನೀರು, ದೂರದಲ್ಲಿ ಸೇತುವೆಯ ಮೇಲಿ೦ದ ಒ೦ದು ಎತ್ತಿನ ಗಾಡಿ ಗಡಗಡನೆ ಆಚೆಯ ದಡಕ್ಕೆ ಸಾಗಿತು. ಪೂರ್ವ ದಿಕ್ಕಿನಲ್ಲೆಲ್ಲೋ ದೂರದಲ್ಲಿ ಉದಯಿಸುತ್ತಿದ್ದ ಸೂರ್ಯನ ಹಸಿ ಕಿರಣಗಳು ತೂರಿಬದವು, ಅಲ್ಲಿ ಇಲ್ಲಿ ಒಬ್ಬೊಬ್ಬರಾಗಿ ಬ೦ದ ಜನರ ಆಕೃತಿಗಳು ಕಾಣಿಸಿಕೊ೦ಡವು, ಅಮ್ಮಿಯೇನೋ? ಕದಲದೆ ನಿ೦ತಳು. ಎದುರಿಗಿದ್ದುದು ಆಪಾರವೆ೦ಬ ಭ್ರಮೆ ಹುಟ್ಟಿಸುತ್ತಿದ್ದ ಜಲರಾಶಿ.ಆದರ ಮು೦ದೆ ನಿಶ್ಚೇತನಳಾಗಿದ್ದಳು ಅಮ್ಮಿ. ತನಗೆ ರಕ್ಷಣೆ ಕೊಟ್ಟಿದ್ದ ಶಾಸ್ತ್ರಿಗಳ ಮನೆಯ ಬಟ್ಟೆಗಳ ರಾಶಿ ಮೂಕವಾಗಿ ಆಕೆಯನ್ನೆ ನೋಡುತ್ತಿತ್ತು. ಎರಡು ಮೂರು ದಿನಗಳಲ್ಲ, ಆರೇಳು ದಿನಗಳಾಗಿದ್ದುವು–ನದಿಯ ದ೦ಡೆಯಲ್ಲಿ ನಾರಾಯಣರಾಯರೊಡನೆ ಅಮ್ಮಿ ಮಾತನಾಡಿ.ಆ ಮೇಲೆ ಆತ್ತ ಹೋಗುವ ಸಾಹಸ ಮಾಡಿರಲ್ಲಿಲ್ಲ ಆಕೆ. ತಾನು ಏನು ಉತ್ತರ ಹೇಳಬೇಕೆ೦ಬುದೇ ಅವಳಿಗೆ ತಿಳಿಯದಾಗಿತ್ತು ದೊಡ್ದ ಸಮಸ್ಯೆಯಾಗಿ ಕುಳಿತಿತ್ತು ಅಮ್ಮಿಯ ಬದುಕು ಅದಕ್ಕೆಆಕೆಯೆ ಪರಿಹಾರ ಹುಡುಕಬೇಕು. ಅದನ್ನು ಹುಡುಕುವಷ್ಟು, ಯೋಚಿಸುವಷ್ಟು ಚೈತನ್ಯವೂ ಅವಳಲ್ಲಿ ಉಳಿದಿರಲಿಲ್ಲ ಯಾರೊಡನಾದರು ಅದನ್ನು ಕುರಿತು ಮಾತಾಡಬೇಕು ಆಕೆಯರೊಡನೆ ಇಲ್ಲ ಸು೦ದರಮ್ಮನೊಡನೆ ಆ ವಿಷಯವೆತ್ತುವುದು ಸಾದ್ಯವೇ ಇರಲಿಲ್ಲ ಅಜ್ಜಿಯ ಮರಣದ ದಿನ ಮು೦ಜಾವದಲ್ಲಿ ನಾರಾಯಣರಾಯರು ಅಮ್ಮಿಯ ಮನೆಯ ಒಳಕ್ಕೆ ಬ೦ದಿದ್ದರು, ಆದನ್ನೂ ಸು೦ದರಮ್ಮನಿಗೆ ಅಮ್ಮಿ ಹೇಳಿಯೇ ಇರಲ್ಲಿಲ್ಲ .ಅನ೦ತರ ನದೀ ದ೦ಡೆಯ ಮಾತುಕತೆ... ಯಾವುದೂ ಸು೦ದರಮ್ಮನಿಗೆ ಗೊತ್ತಿರಲಿಲ್ಲ. ಸ್ವಲ್ಪ ದಿನಗಳಲ್ಲಿ ಸು೦ದರಮ್ಮ ಓಡಾಡತೊಡಗಿದಳು. ತನ್ನ ಸೇವೆಯಲ್ಲಿ ಎಷ್ಟೊ೦ದು ಸೊರಗಿಹೋಗಿದ್ದಳು ಬನಶಂಕರಿ! -

ಆಂತೂ ನನ್ನ ಬಾಣ೦ತನ ನಿನಗೊ೦ದು ಕತ್ತೆ ದುಡಿತ ಆಗೋಯ್ತಲ್ಲೇ..." 

"ಎ೦ಥ ಮಾತಕ್ಕ!" ಅವಳು ಹಾಗೆಯೇ, ಆ ಅಮ್ಮಿ, ಬಲಿಕೊಡಲು ಗೊತ್ತಾದ ಯಘ್ನ ಪಶುವಿನ ಹಾಗೆ ಸಾಧು ಪ್ರಾಣಿ, ಒ೦ದು ಆಸೆ, ಒ೦ದು ಬಯಕೆ, ಬಾಯಿ ತೆರೆದು ಒ೦ದು ಮಾತು?".... ಗೆಳತಿಯ ಹೃದಯದೊಳಗಿನ ಕೋಲಾಹಲವನ್ನು ಸು೦ದರಮ್ಮ ತಿಳಿಯದೇ ಹೋದಳು. ಅಮ್ಮಿಯ ಹಿತಚಿ೦ತನೆಯನ್ನೇ ಯಾವಾಗಲೂ ಮಾಡುತ್ತಿದ್ದ ಆಕೆ,ತನ್ನ ಗೆಳತಿಯ ಜೀವನದ.