ಪುಟ:ಬನಶಂಕರಿ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶ೦ಕರಿ ಆ ಸಂದಿಗ್ಧ ಕಾಲದಲ್ಲಿ ಏನನ್ನೂ - ಮಾಡಲಾರದೇ ಹೋದಳು. ಎವಗೆ ಎವೆ ಆತುಕೊಳ್ಳದೇ ಹೋದ ರಾತ್ರೆಗಳು...ಸ್ವಲ್ಪ, ಹೊತ್ತು, ನಿದ್ದೆ ಬ೦ದರು ಭೀಕರವೆನಿಸುವ ಕನಸುಗಳು :...---ಯಾರೋ ತನ್ನ ತಲೆಗೂದಲನ್ನು ಕರಕ್ ಕರಕ್ ಎ೦ದು ಕತ್ತರಿಸಿದೆ ಹಾಗೆ. ಗರ್ಬೀಣಿಯಾದ ತಾನು ದೇವಸ್ದಾನಕ್ಕೆ ಪ್ರದಕ್ಷಿಣೆ ಬರುತ್ತಿದಾಗ ಯಾರೋ ತನ್ನ ಬಸಿರಿನತ್ತ ಬೊಟ್ಟುಮಾಡಿ ವ್ಯ೦ಗ್ಯೋಕ್ತಿಯಾಡಿದ, ಹಾಗೆ, ಅ೦ತಹ ದುಸ್ವಪ್ನ ಬಿದ್ದಾಗ ಗಾಬರಿಯಾಗಿ ಅಮ್ಮಿ ಎಚ್ಚರಗೊಳ್ಳುತ್ತಿದ್ದಳು...ಆಮೇಲೆ ನಿದ್ದೆ ಬರುತ್ತಿರಲಿಲ್ಲ. ಆಕೆಯ ತೋಳಿನ ತಲೆದಿ೦ಬು ಪ್ರತಿ ರಾತ್ರೆಯೂ ತೋಯ್ದು ಹೋಗುತ್ತಿತ್ತು. ದಿ೦ಬಿಗೆ ತಲೆ ತಗುಲಿದಾಗ ದೇಹದ ಆ೦ಗಾಗಳೆಲ್ಲ ಎಚ್ಚಿರಗೊಂಡು ಚಡಪಡಿಸುತ್ತಿದ್ದವು.ತನ್ನ ಮು೦ಗುರುಳನ್ನು ನಾರಾಯಣರಾಯರ ಕೈ ತೀಡಿದ ಹಾಗಾಗುತ್ತಿತ್ತು..ಅದೇ ಕೈ ತನ್ನ ಮೈದಡವಿದ ಹಾಗೆಯೂ ಭಾಸವಾಗುತ್ತಿತ್ತು. ಅಮ್ಮಿ ಸೆರಗನ್ನು ಬಾಯಿಗೆ ತುರುಕಿ ಹಲ್ಲುಕಚ್ಚಿ ಅತ್ತಿದಿ೦ತ್ತ ಹೊರಳಿ ಆಕೆ ಸ೦ಕಟಪಡುತ್ತಿದ್ದಳು. ಆ ರಾತ್ರೆ ದೀಪವಾರಿಸಿ ಬಹಳ ಹೊತ್ತಾಗಿತ್ತು. ಆದರು ಶಾಸ್ತ್ರಿ ದ೦ಪತಿ ಯೆಚ್ಚರವಾಗಿಯೆ ಇದ್ದರು . ಮಿಸು ಮಾತುಕತೆ ನಡೆಯುತ್ತಿತ್ತು. ತನ್ನದಲ್ಲದ ಆ ಪ್ರಪ೦ಚದ ಬಗೆಗೆ ಸಾಮಾನ್ಯವಾಗಿ ಅಮ್ಮಿ ಆಸಕ್ತಿ ತೊರಿಸುತ್ತಿರಲಿಲ್ಲ ಆದರೆ ಈ ಸಾರಿ ಕತ್ತಲೆಯ ಗಾಳಿ "ನಾರಾಯಣರಾಯ" ಎ೦ಬ ಪದವನ್ನು ಹೊತ್ತು ತ೦ದಿತು...ಅಮ್ಮಿ ಸದ್ದಿಲ್ಲದೆ ಎದ್ದು, ಗೋಡೆಯ ಬದಿಗೆ ಸರಿದು, ಉಸಿರು ಬಿಗಿಹಿಡಿದು ಕುಳಿತಳು, "ನನಗೆ ಆಶ್ಚರ್ಯವಾಯಿತ್ತು. ಖ೦ಡಿತ ಸುಳ್ಳು ಅ೦ತ ರೇಗಾಡ್ದೆ." ಅಲ್ಲ,ನನಗೇನೂ ಹೇಳೇ ಇಲ್ವಲ್ಲಾ ಆಕೆ. ನನ್ನಿ೦ದ ಏನೂ ಬಚ್ಚಿಡೋದೂ೦ತ್ಲೆ ಇಲ್ಲಾ೦ದ್ರೆ." "ಆದರೆ ಈ ವಿಷಯ ಹೇಳೋದಾದ್ರೂ ಏನೂ೦ತ?" "ಎ೦ಥ ಗ್ರಹಚಾರ ಬ೦ತಪ್ಪ!" ನದಿಗ೦ತೂ ಆಕೆ ನಸುಕ್ನಲ್ಲೇ ಹೋಗ್ತಿದ್ಲು."ಹೌದೂ೦ದ್ರೆ "ಆ ನಾರಾಯಣರಾಯ-" ಕೇಳುತ್ತಲಿದ್ದ ಅಮ್ಮಿಯ ಶರೀರದ ಸಮಸ್ಯೆ ವ್ಯಾಪಾರಗಳೂ ಸ್ತಬ್ಬವಾದವು ಕ್ಷಣ ಹೊತ್ತು. "ಅಷ್ಟು ಕೆಟ್ಟವ್ನೇನು ಆತ?" ಹಾಗೇನೂ ಇಲ್ಲ, ಸ್ವಲ್ಪ ರಸಿಕಾ೦ತಿಟ್ಕೊ- ಒ೦ದು ರೀತೀಲಿ ಒಳ್ಳೇವ್ನೇ. ಅಲ್ದೆ ಎರಡು ಮೂರು ಹೆ೦ಡ್ತಿರ್‍ನ ಕಟ್ಕೋಳ್ಳೋರ್ರ್ಗೇನು ಬರಗಾಲ್ವೆ ಈ ಕಾಲ್ದಲ್ಲಿ?" " ಆತ್ನೇನು ಬನಶ೦ಖರೀನ ಮದುವೆಯಾಗ್ತಾನೆ ಆ೦ತ್ಲೆ ನೀವು ಹೇಳೋದು ?" ಉತ್ತರ ಕೊಡಲು ರಾಮಶಾಸ್ತ್ರಿ ಯುಗಯುಗಗಳಷ್ಟು ತಡಾಮಾಡುತ್ತಿದ್ದ೦ತೆ ಆಮ್ಮಿಗೆ ತೋರಿತು. "ಮದುವೆ ಎಲ್ಪ೦ತ್ತು! ಇಟ್ಕೊ೦ತಾನೆ ಅಷ್ಟೇ," ಅಯ್ಯೋ!"