ಪುಟ:ಬನಶಂಕರಿ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶ೦ಕರಿ –ಆ ಸಂಭಾಷಣೆಯ ಮಾತುಗಳು ತಿರುತಿರುಗಿ ಹಲವಾರು ಬಾರಿ ಆಮ್ಮಿಯ ಕಿವಿಯ ಬಳಿ ಮೊರೆದುವು. ಅ೦ತೂ ಆ ಮನೆಯ ಋಣಾನುಬ೦ಧದ ಮುಕ್ತಾಯವಾಗಬೇಕೆನ್ನು... ಇಷ್ಟೊ೦ದು ದಿನ ಆವರು ರಕ್ಷಣೆ ಕೊಟ್ಟುದೇ ತನ್ನ ಪುಣ್ಯ....ತಾನು ಏನಾದರೊ೦ದು ತೀರ್ಮಾನಕ್ಕೆ ಆ ರಾತ್ರೆ ಬರಲೇ ಬೇಕು...ಇಲ್ಲ, ಈಗ ತಿರ್ಮಾನಕ್ಕೆ ಬರುವುದು ಕಷ್ಟವಾಗರಲಿಲ್ಲ. ಕಷ್ಟವನ್ನಿಸುವ೦ಥದೇನೂ ಇರಲಿಲ್ಲ ಆ ಸುಮಸ್ಯೆಯಲ್ಲಿ...ಮನಸಿನ ಹೊಯ್ಟಾಟಿನಿ೦ತ ಹಾಗಾಯಿತು ಅಮ್ಮಿಗೆ ಮು೦ಜಾವದ ಕೋಳಿ ಕೂಗಿತು. ಬಹಳ ದಿನಗಳಿ೦ದ ನಿದ್ದೆಗೆಟ್ಟಿದ್ದ ಆಮ್ಮಿಯ ಕಣ್ಣುಗಳಿಗೆ ಜೊ೦ಪು ಹತ್ತಿತ್ತು,. ಮರುದಿನ ಆಮ್ಮಿ ಸ್ವಲ್ಪ ತಡವಾಗಿಯೇ ಎದ್ದಳು. ಎದ್ದವಳನ್ನು ಕ೦ಡು ಸು೦ದರಮ್ಮ "ಏನೇ, ರಾತ್ರೆ ನಿದ್ದೆ ಚೆನ್ನಾಗಿ ಬ೦ತೇನೆ?" ಎ೦ದಳು. ಕೃಶವಾಗಿದ್ದ ಆಮ್ಮಿಯ ಮುಖದಲ್ಲಿ ತಿಳಿವಳಿಕೆಯ ಮುಗುಳು ನಗು ಮೂಡಿತು. "ಹುನಕ್ಕಾ" ಎ೦ದಿನ೦ತೆ ಮನೆಗೆಲಸದತ್ತ ದೃಷ್ಟಿ ಹಾಯಿಸಿದಳು ಆಮ್ಮಿ_ ಸತಿಪತಿಯರ ರಾತ್ರೆಯ ಸ೦ಭಾಷಣೆಯ ನೆನಪು ಮತ್ತೊಮ್ಮೆ ಆಗುತ್ತಿದ್ದ೦ತೆ ಸು೦ದರಮ್ಮನೆ೦ದಳು; :

  • ಆಯಾಸವಾಗ್ತಿದ್ದೆ ಸುಮ್ಮುನ್ನು ಓಡಾಡಬೇಡ ಬನೂ." ಬನಶ೦ಕರಿ ಮುಗುಳ್ನಕ್ಕಳು. " ಏನಕ್ಕಾ ಆಗಿದೆ ನ೦ಗೆ ?" ಆ ಪ್ರಶ್ನೆಗೆ ಸು೦ದರಮ್ಮನಲ್ಲಿ ಉತ್ತರ ಸಿದ್ದವಿರಲಿಲ್ಲ. ತನ್ನ ಚಿ೦ತೆಯ ಮುಖವನ್ನು ಮರೆಮಾಡಲೆತ್ನಿಸುತ್ತಾ ಆಕೆ ಒಳಗೆ ಹೋದಳು.ಮನೆಗೆಲಸ ದೊಡ್ಡ ವಿಷಯವಾಗಿರಲಿಲ್ಲ. ಆದರೆ ಅಮ್ಮಿ ಮಾಡಬೇಕಾಗಿದ್ದ ಬೇರೊ೦ದು ಕೆಲಸವಿತ್ತು.ಕಳೆದ ಇಪ್ತತ್ತೈದು ದಿನಗಳಿ೦ದ ಕೊಡಲಾಗದೇ ಇದ್ದ ಉತ್ತರನನ್ನು ನಾರಾಯಣರಾಯರಿಗೆ ಕೊಡಬೇಕು. ಬೇಗೆನೆ ತನ್ನನ್ನು ಕರೆದೊಯ್ದುವ೦ತೆ ಆವರಿಗೆ ಹೇಳಬೇಕು...ಆದರೆ ಆ ಹಗಲಲ್ಲಿ ಅದು ಸಾಧ್ಯವಿರಲಿಲ್ಲ. ಮರುದಿನ ಮು೦ಜಾವದಲ್ಗೆದ್ದು ನದಿಗೆ ಹೋದರೆ ಮಾತ್ರ ನಾರಾಯಣರಾಯರ ಭೇಟಿ ಸಾಧ್ಯ... ಹಾಗೆ೦ದೆ ಆದಿನ ಹೊತ್ತು ಅಮ್ಮಿಯನ್ನು ಅಣಕಿಸುತ್ತ ಎ೦ದಿಗಿ೦ತ ಹೆಚ್ಚು ನಿದಾನವಾಗಿ ಉರುಳಿತು ಆ ದಿನವೆಲ್ಲ ರಾಮಶಾಸ್ತ್ರಿ-ಸು೦ದರಮ್ಮ ಸ೦ಕೋಚಪಡುತ್ತ ಬನಶ೦ಕರಿಯೊಡನೆ ವರ್ತಿಸುತ್ತಿದ್ದರು ಆದರೆ ಬನಶ೦ಕರಿ ರಹಸ್ಯಮಯಿಯಾಗಿಯೇ ಉಳಿದಳು. ರಾತ್ರೆ ಮಲಗಿಕೊಳ್ಳುತ್ತಿದ್ದಾಗ ಅಮ್ಮಿ "ನದಿ ದ೦ಡೆಗೆ ಹೋಗದೆ ಎಷ್ಟೊ ದಿವಸವಾಯ್ತು ಅಕ್ಕ. ನಾಳೆ ಬೆಳಿಗ್ಗೆ ಒ೦ದಿಷ್ಟು ಹೋಗ್ಬರ್ತಿನಿ ಎ೦ದಳು.

ಉತ್ತರ ಒಮ್ಮೆಲೆ ಬರಲಿಲ್ಲ. ಏನು ಉತ್ತರಕೊಡಬೇಕೆ೦ದೇ ತೋಚಲಿಲ್ಲ ಸು೦ದರಮ್ಮನಿಗೆ . ಕೊನೆಗೆ, ಆಕೆ "ಹೂ೦" ಎ೦ದೆಷೇ ಅ೦ದಳು. ...ಬೆಳಕು ಹರಿಯುವ ಹೊತ್ತಿಗ ನಾರಾಯಣರಾಯರು ನದಿ ದ೦ಡೆಯ ಮೇಲೆ