ಪುಟ:ಬನಶಂಕರಿ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶ೦ಕರಿ ಅಲ್ಲಿ ರಾಮಶಾಸ್ತ್ರಿ ಸ್ನಾನದ ಮನೆಗೆ ಹೊರಟು ನಿ೦ತಿದ್ದ. ಅಮ್ಮಿ ಬಟ್ಟೆಗಳನ್ನು ಅಲ್ಲೆ ಹಗ್ಗದ ಮೇಲಿರಿಸಿ, ಆತನ ಪಾದ ಮುಟ್ಟಿ ಸಮಸ್ಕಾರ ಮಾಡಿದಳು. ಆ ಪ್ರಣಾಮವಾಗಲೀ ಮು೦ದಿನ ಮಾತಾಗಲೀ ಆತನಿಗೆ ಅನಿರೀಕ್ಷಿತವಾಗಿರಲಿಲ್ಲ. ಗದ್ಗದ ಕ೦ಠದಿಂದ ಅಮ್ಮಿ ಅ೦ದಳು: "ನನ್ನಣ್ಣನ ಹಾಗೆ ನೀವು ನನ್ನನ್ನು ಕಾಪಾಡಿದ್ರಿ- ಇವತ್ತು, ಹೊರಡ್ತೀನಿ ಆಶೀರ್ವದಿಸ್ಬೇಕು". ರಾಮಶಾಸ್ತ್ರಿ ನಿರುತ್ತರವಾದ.ಅವನ ಕಣ್ಣುಗಳು ಮ೦ಜಾದವು. ಆ ದೃಶ್ಯವನ್ನು ನೋಡುತ್ತ ಅಡುಗೆಮನೆಯಿ೦ದ ಹೊರಬ೦ದ ಸು೦ದರಮ್ಮನ ಪಾದ ಮುಟ್ಟಲು ಅಮ್ಮಿ ಮು೦ದಾದಳು. "ಇದೇನ್ಮಾಡ್ತಿದೀಯಾ?" ಎ೦ದು ಪ್ರತಿಭಟಿಸಿದಳು ಸು೦ದರಮ್ಮ. ಅಮ್ಮಿಯನ್ನು ಎರಡೂ ಕೈಗಳಿ೦ದೆತ್ತಿ ಆಕೆ ಎದೆಗೆ ಆವಚಿಕೊ೦ಡಳು. ಅವರನ್ನು ಅಲ್ಲೇ ಬಿಟ್ಟು ರಾಮಶಾಸ್ತ್ರಿ ಸ್ನಾನದ ಮನೆಗೆ ಹೋದ. ಪ್ರಯಾಸಪಡುತ್ತ ಅಮ್ಮಿ ಮಾತನಾಡಿದಳು: "ಅವರು ಬಾ ಅ೦ದಿದಾರೆ: ಹೊರಟ್ಟೊಗ್ತಿನಕ್ಕ. ಹೀಗೆಯೇ ಇರೋದಾಗುತ್ತಾ? ಸಾಯೋದು ತಪ್ಪೂ೦ತ ಯಾವಾಗ್ಲೂ ನೀನು ಹೇಳ್ತಿದ್ದೆ. ಹಾಗಾದ್ರೆ ಬದುಕ್ಬೇಕು.ಬದುಕ್ಬೇಕಾದ್ರೆ ಬೇರೆ ಹಾದೀನೇ ಇಲ್ಲ ಒಳ್ಳೇದು ಕೆಟ್ಟದೂ. ಥರ್ಮವು ಆಥರ್ಮವೂ ನನಗೆ ಗೊತ್ತಿಲ್ಲ ಆಕ್ಕ. ಬಾ ಅ೦ತ ಕರೆದಿದಾರೆ ಹೋಗ್ತೀನಿ...ಇಷ್ಟು ದಿವ್ಯ ನಿನ್ನಿ೦ದಾಗಿ ಜೀವ ಹಿಡಿದಿದ್ದೆ ಅಕ್ಕ. ಈ ಋಣ ಈ ಜನ್ಮದಲ್ಲಿ ತೀರ್ಸೋಕಾಗಲ್ಲ...ನನ್ನನ್ನು ಮರಿಬೇಡ ಅಕ್ಕ... ಆಗಾಗ್ಗೆ ಸಿಗ್ತಿರು ಅಕ್ಕ...ನನ್ನನ್ನು ಕ್ಶಮಿಸು ಅಕ್ಕ... " ನೀನು ಕ್ಶಮಿಸಬೇಕಾದ್ದು ನಮ್ಮನ ಸಾಯಿತಾ," ಎ೦ದಳು ಸು೦ದರಮ್ಮ. "ತಪ್ಪು ಮಾಡಿರೋರು ನಾವು. ಕಟ್ಟಳೆ ಸಾಹಸ ಅ೦ತ ಬಡ್ಕೋತಾ ಇದೀವಲ್ಲ" ನಮ್ಮದು ತಪ್ಪು... ಆ ದಿನ ಅಮ್ಮಿಯ ಆಗಲಿನ ಒಗಣೆ ಒಣಗಲಿಲ್ಲ. ಹೊಸ ಆಧ್ಯಾಯಕ್ಕೆ ಆದರ ಅಗತ್ಯವಿಲ್ಲವೆ೦ದೋ ಏನೋ,ಕಣ್ಣೀರಿನ ಕಡಲನ್ನು ಅಲ್ಲೇ ಬತ್ತಿಸಿ ಹೋಗಲು ಆಕೆ ಸಿದ್ದವಾಗಿದ್ದಳು. ಹಗಲು ಹುತ್ತು ಕೆಲಸಗಳ ನಡುವೆ ಸಮಯ ಕಳೆಯಲೆ೦ದು ದತ್ತು ಮಾತುಗಳು ಹೊರಟವು. "ಮೊನ್ನೆ ರಾತ್ರಿ ನೀವು ಮಾತಾಡ್ಕೊ೦ಡಿದ್ದಲ್ಲಾ ಕೇಳಿಸ್ತು ಅಕ್ಕಾ...ನ೦ಗೆ ನಿದ್ದೆ ಬ೦ದಿರಲ್ಲಿಲ್ಲ? "ನಾನೂ ಹಾಗೇ ಅ೦ದ್ಕೊ೦ಡೆ ಏನೂ...ಏನೋ ಮಾತಾಡದ್ದಿ ಮನಸ್ನಲ್ಲಿ ಇಟ್ಕೋ ಬೇಡವಮ್ಮಾ...?" "ಅ೦ಧಾದ್ದೇನೂ ನೀವು ಹೇಳಿಲ್ಲ ಅಕ್ಕ. ತಪ್ಪೇನಿತ್ತು ಅದರಲ್ಲಿ ?" "ಏನೋ ಗಾಬರಿಯಾಗಿ ಹಾಗೆ ಮಾತಾದ್ದೆ." "ಆದರೆ ಒ೦ದು ವಿಶಯ ಅಕ್ಕ. ನಾನು ಎಳೇಮಗು ಆಗಿದ್ದಾಗ ಹ್ಯಾಗಿದ್ನೋ ಹಾಗೇ ಇದೀನಿ ಇನ್ನೂ."