ಪುಟ:ಬನಶಂಕರಿ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ

  "..... ..."
  "ಅಮ್ಮಿಳಿ__ಅಂತ!"
  "ಹೋಗತ್ಯ.."
  "ಯಾವ ಮೂಲೇಲಿ ಮನೆಮಾಡಿದಾರೋ ವಾರಾಯಣರಾಯರು?"
  "ಗೊತ್ತಿಲ್ಲ ಅಕ್ಕ."
  "ಲಂತೂ  ಹುಷಾರಾಗಿರ್‍ಬೇಕಮ್ಮ."
  "ಹೇಗೆ ಹುಷಾರಾಗಿ ಇಟ್ಟೇಕೂಂತ ಇಷ್ಟು ವರ್ಷ ನೀನೇ ಅಲ್ವ ಅಕ್ಕ ತರಬೇತಿ ಕೊಟ್ಟಿರೋದು?"
  "...ಇದೇ ಊರಲ್ಲೇ ಇರ್‍ತೀಯಲ್ಲ. ಆದೇ ಸಮಾಧಾನ."
  ಕತ್ತಲಾಯಿತು. ದೇವಸ್ಥಾನಕ್ಕೆ ಸೇರಿದ್ದ ಗಾಡಿಯೋದು  ಬಂದು ರಾಮಶಾಸ್ತ್ರಿಯ ಮನೆಯ ಮುಂದೆ ಬೀಡ್ರಬಿಟ್ಟಿತು. ಎತ್ತರದ ಶಮಾನಿತ್ತು ಗಾಡಿಗೆ. ಅದೇ ವರ್ಷ ದಾಸನದ ಜಿನತ್ತಿಯಿಂದ ಹೊಸತಾಗಿ ಕೊಂಡು ತಂದಿದ್ದ ಸೊಗಸಾದ

ಹೋರಿಗಳು. ಅಲ್ಲಿ ಬಾಲ ಬೀಸಿಕೊಂಡು ಒಣಹುಲ್ಲು ಮೇಯುತ್ತಾ ಅವು ನಿಂತಿದ್ದರೆ, ಅವುಗಳ ಕೊಂಳ ಹಾರ ವಾಗಿದ್ದೆ ಸಾಲುವಂಟಿಗಳ ಟಿಪ್ ಟಪ್ ನಾದ ಸಂಗೀತದ ಅಲೆಗಳ ಹಾಗೆ ಕಿವಿಯ ದಂತೆ ಯನ್ನುತ್ತಿತ್ತು.

      ನಾರಾಯಣರಾಯರು ಬಂದರು. ಆವಸರ ದುಗುಡ ತವಗಳನ್ನೆಲ್ಲ ಬದಿಗಿರಿಸಿ ಶಾಂತವಾದ ಸ್ವರದಲ್ಲಿ, ರಾಮಶಾಸ್ತಿಯ ಪಹ್ನಿಮನ್ನುದೇಶಿಸಿ.,  "ಚೆನ್ನಾಗಿದ್ರೀರಾ?" ಎಂದರು!"ರಾಮಶಾಸ್ತ್ರಿ ಎಲ್ಲಿ?" ಎಂದು ಕೇಳಿದರು.
  "ಯಾರೋ ಸ್ನೇಹಿಕರೆನ್ನ ನೋಡ್ಬೇಕೂಂತ ಮದ್ಯಾಹವೇ ಹೋದ್ರು...ನಾನು ಚೆನ್ನಾಗಿದೀನಿ."
  ಸುಖವೊ ದುಖವೊ ಎನ್ನಲಾರದೊಂದು ಧಾವನೆಯ ಗುಂಗಿನಲ್ಲಿ ಬಾಗಿಲ ಮರೆಯಲ್ಲಿ ಅಮ್ಮಿ ನಿಂತಿದ್ದಳು, ರಾಯರ ದೃಷ್ಟಿಗೆ ಆಕೆ ಬೇಳಿದಿರಲಿಲ್ಲ.
  ನಿರ್ದಿಷ್ಟವಾಗಿ ಯಾರನ್ನೂ ಉದ್ದೇಶಿಸದೆ ಆವರೆಂದರು:
  "ಇನ್ನೊಂದು ಘಂಟೆಯೊಳಗಾಗಿ ಗಾಡಿ ಕಟ್ರಾನೆ. ನಾನು ಮೊದ್ರೇ ಹೋಗಿರ್‍ತೀನಿ ಬರ್‍ಲಾ ನಾನು?"
  ಉತ್ತರಕ್ಕೆ ಅವಕಾಶವಿಲ್ಲ ಹಾಗೆ ಬೀದಿಗಿಳಿದು ಅವರು ನಡದೇಬಿಟ್ಟರು.
  ಅಮ್ಮಿ ತನ್ನ ಸಣ್ಣ ಪುಟ್ಟ ಸಾಮಾನುಗಳ ಗಂಟು ಕಟ್ಟಿದಳು...ಜೀವನಹಳ್ಳಿಯಿಂದ ಹೊರಟು ಬಂದ ಆ ದಿನ...ಕಾವೇರಿ...ಧರ್ಮಾವರ ಸೀರೆ--
 ಇನ್ನೂ ಉಳಿದಿತ್ತು ಆ ಸೀರೆ. ಚಳಿಗಾಲದಲ್ಲಿ ಕಂಬಳಿಯ ಜತೆಯಲ್ಲಿ ಹೊದ್ದುಕೊಳ್ಳಲು ಅಮ್ಮಿಅದನ್ನೇ ಉಪಯೋಗಿಸುತಿದ್ದಳು...
    ಕೊನೆಯ ಅಳು ಬೀಳ್ಕೊಡುಗೆ,
    ಇಲ್ಲಿ ಮಂಗಳವಾದ್ಯವಿರಲಿಲ್ಲ. ಸಿಂಗರಿಸಿರಲಿಲ್ಲ. ಗಾಡಿ-ಎತ್ತುಗಳನ್ನು. ಕೈ ಹಿಡಿದವನ ಕಡೆಗೆ ಕಳ್ಳನೋಟ ಬೀರುವ ಪತಿರಾಯನಿರಲಿಲ್ಲ. ಮದುವಣಗಿತ್ತಿಯಾಗಿ ಹೋಗುತ್ತಿರಲಿಲ್ಲ ಬನಶಂಕರಿ.