ಪುಟ:ಬನಶಂಕರಿ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಿತುಕೊಳ್ಳುತ್ತ.

 ಅಮ್ಮಿ ಏನೂ ಉತ್ತರ ಕೊಡಲಿಲ್ಲ,
 ರಾಯರು ನಶ್ಯದ ಹಬ್ಬ ಹೊರ ತೆಗೆದು ರೀವಿಯಿಂದ ಮೂಗಿಗೆ ಒಂದು ಚಿಟಿಕೆ ನಶ್ಯ ಸೇರಿಸಿದರು. ಅನುಭವಿಯಾದ ಅವರು 'ಅಕ್ಷಿ' ಎನ್ನಲಿಲ್ಲ.
 ನಷ್ಯದ್ಷೊಂದು ಚಟಿ ನನಗೆ" ಎಂದರು ರಾಯರು ನಗುತ್ತ, ತನ್ನ ಸ್ವಭಾವ ಪರಿಚಯ ಮಾಡಿಕೊಡುತ್ತ.
 ಗಾಡಿ ದೇವಸ್ಥಾನದತ್ತ ಹೊರಟುಹೋಯಿತು.
 "ತಿಮ್ಮಪ್ಪಾ" ಎಂದು ರಾಯರು ಆಳುಮಗನನ್ನು ಕರೆದು ಒಂದು ರೂಪಾಯಿ ನಾಣ್ಯ ಆತನ ಕೈಗಿತ್ತು. "ಒಂದ್ಸೇರು ಅವಲಕ್ಕೀನೂ ಒಂದ್ದತ್ತು ರಸಬಾಳೆ ಹಣ್ಣೂ ತಗೊಂಡು ಬಾರೋ." ನಿಂದರು.

ಆಳು ಹೊರಟುಹೋದಾಗ,ತಾವಿಬ್ಬರೆ ಉಳಿದೆಣ್ಣಾ ಎನಿಸಿತು ಆಮ್ಮಿಗೆ.

 "ಯಾಕೆ ಥಂಕರಿ ಸಂಕೋಚ?"
 'ಶಂಕರಿ'-ಹೊರ ಹೆಸರು- ತಮಾಷೆಯಾಗಿ ತೋರಿತು. ಆದರೆ ಆ ಹೊಸ ಆಧ್ಯಾಯಕ್ಕೆ ಅದೇ ಮೇಲಾಗಿತ್ತೇನೊ!
 "ನಿಂತ್ಕೊಂಡೇ ಇದೀಯಲ್ಲಾ?"
 "ಅಮ್ಮಿ ಅಲ್ಲೆ ಗೋಡೆಗೊರಗಿ ಕುಳಿತುಕೊಂಡಳು."
 "ಅಡುಗೆ ಮಾಡ್ತೀಯೇನು?"
 ನಾರಾಯಣರಾಯರಿಗಾಗಿಯೂ ತಾನು ಅಡುಗೆ ಮಾಡಬೇಕೆ ಎನೆಂಬುದು ಅಮ್ಮಿಗೆ ಸ್ಪಷ್ತವಾಗಿಲಿಲ್ಲ. ಆಕೆಯ ಯೋಚನೆಯನ್ನು ಊಹಿಸಿಕೊಂಡವರಂತೆ ಅವರೆಂದರು:
 "ನಾನು ಮನೆಗೆ ಹೋಗ್ತೀನಿ ಊಟಕ್ಕೆ. ನಿನಗಾಗಿ ಮಾಡಿಕೋ."
 "ನನಗೇನೂ ಬೇಡಿ, ಹೊರಡೋಕ್ಮುಂಚಿ ಸುಂದರಮ್ಮ ಹೊಟ್ಟೆ ತುಂಬ ತಿನಿಸಿದ್ರು."
 "ಹಾಗಾದ್ರೆ ಒಂದಿಷ್ಟು ಏನಾದ್ರೂ ಫಳಾರ ಮಾಡು ಆಳು ಬಂದ್ಮೇಲೆ ನಾನು ಹೋಗ್ತೀನಿ."
 ಇಂ, ಎನ್ನಬೇಕೆ?-ಎಂಬುದು ಅಮ್ಮಿಗೆ ಸ್ಪಷ್ಟವಾಗಲಿಲ್ಲ.
 "ದೇವಸ್ಥಾನದಲ್ಲಿನ್ನೂ ಕೆಲ್ಸ ಇದೆ. ಲೆಕ್ಕ ಗಿಕ್ಕ ಬರಿಯೋದು...ನಾಳೆ ಪುರಸೊತ್ತು ಮಾಡ್ಕೊಂಡು ಬರ್‍ತೀನಿ."
 ತನ್ನನ್ನೂಬ್ಬಳನ್ನೇ ಆ ರಾತ್ರೆ ಇರಗೊಡಲು ರಾಯರು ನಿರ್ಧರಿಸಿದ್ದನ್ನು ಕಂಡು ಅಮ್ಮಿಗೆ ಸಮಾಧಾನವೆನಿಸಿತು. ಆಕೆ ಕೃತಜ್ಞಳಾದಳು.
 ನಾಳೆಯ ಯೋಚನೆ ಬಂದು ಆಕೆಯೊಂದು ಪ್ರಶ್ನೆ ಕೇಳಿದಳು:
 "ಆಕ್ಕಪಕ್ವೋರು ಯಾರಾದ್ರೂ ಕೇಳಿದ್ರೆ ಏನೋತ ತೇಳ್ಲಿ?"
 "ಏನ್ನೇಳ್ತೀಯ?"
 "ನಂಗ್ತಿಳೀದು."

"ಮೊದಲ್ನೇದಾಗಿ ಯಾರೂ ಕೇಳಕ್ಕೆ ಬರಲ್ಲ. ಎರಡ್ನೇದಾಗಿ, ಕೇಲಿದ್ನೆ,. ನೀನು ನನಗೆ ಸಂಬಂಧ ಅಂತ ಆಂದ್ಬಿಡು."