ಪುಟ:ಬನಶಂಕರಿ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

...ಮದುವೆ__ಇಟ್ಕೋತಾನೆ. ಆಮೇಲೆ ನಿಟ್ಟುಸಿರು...

  "ಈಗ್ಲೇ ಏನಾದ್ರೂ ಆಗ್ಪಿಟ್ಟಿದ್ಯೋ ಏನೋ!"
   ಸುಂದರಮ್ಮನ ಆ ಮಾತಿನಲ್ಲಿ ಆಗಬಾರದು ಎನ್ನುವ ತನಕ ಇತ್ತು : ಆಗಿದ್ದರೆ ಮುಂದೇನು ಗತಿ-ಎಂಬ ಕಾತರವಿತ್ತು.
  "ಯಾಕೆ ಹಾಗುತೀಯಾ?"
  "ಎಷ್ಟೊಂದು ಸೊರಗಿದಾಳೇಂತ!"
  "ಇದ್ರೂ ಇದ್ದೀತು."
  ಹಾಗಾದರೆ ಈಗಲೇ ಏನೋ ಆಗಿ ಬಿಟ್ಟಿದ್ಯೋ ಏನೊ-ಎಂಥ ಮಾತು!ಅದಮ್ಮು ಯಾರು ಆಡುತ್ತಿದ್ದರು!...ಔಡುಗಟ್ಟಿ ಗೋಡೆಗೊರಗಿದಳು ಅಮ್ಮಿ.
  "ನಿನ್ಮಾಡೋದೊಂದ್ರೆ ಇನ್ನು?"
  "ಏನ್ನಾಡೋಕಾಗುತ್ತೆ? ಅವಳ ಹಣೇಲಿ ಬರೆಂದ್ದೂಂತ ಸುಮ್ಮಿದ್ಬಿಡೋದು."
  "ವ್ಯಥೆಯುಗುತ್ತೇಂದ್ದೆ..."
  "ಇನ್ನೇನೆ ಮಾಡೋದು?"
  "ಯಾರ್‍ಜತೇಲಾದ್ರೂ ಮದುವೆಯೇ ಆಗಿದ್ರೆ ಚೆನ್ನಾಗಿತ್ತು."
  "ಆಗ್ಲಿಲ್ವಲ್ಲಾ. ಎಷ್ಟೊಂದಾಯಿತು ಪ್ರಯತ್ನ ಪಟ್ಟದು..."
  ಮತ್ತೆ ನಿಟ್ಟುಸಿರು,...ದೀರ್ಘ ಕಾಲದ ಮೌನ...
 "ಅಯ್ಯೋಬೇಡಿ."
 "ಇಲ್ವೇ!"
 "ಅಲ್ಲೇ ಮಲಗಿ."
 "ಹೊನಮ್ಮಾ ಹೂಂ."
 ..ಆದಿ ಅಂತ್ಯಗಳಿಲ್ಲದ ಕಾಲ ಮೌನದ ಬಗೆ ಸೇಯುತ್ತಿತ್ತು.
 ಯೋಚಿಸಿ ಮಾತನಾಡಿದ ಹಾಗೆ ರಾಮಶಾಸ್ತ್ರಿ ಹೇಳಿದ:
  "ನಂಗೇದು ತೊರುತ್ತೆ ಗೊತ್ತೆ ? ಆ ಸ್ವಾಮಿ ಕೆಡಿಸಿ ಬೀದಿಗೆ ಕಳಿಸೋದಕ್ಕಿಂತ ಇದ್ದೇ ವಾಸಿ. ಸ್ಥಾನ ಮಾನ ಇರೋ ಮನುಷ್ಯ. ಒಂದೆರಡು ದಿನ್ಸ ಮಾನ್ನಾಡಿದ್ಮೇಲೆ ಜನರೂ ಮರೆತ್ಬಿದ್ತಾರೆ. ಹ್ಯಾಗಾದ್ರೂ ಬದುಕ್ಬೇಕಲ್ಲ ಆಕೆ?"
 "ಬಂಗಾರದಂಥ ಜೀವ, ಆಯ್ಯೋ!"
  ಆ ಹೊಗಳಿಕೆಯ ಮಾತು ಕೇಳಿದ ಅಮ್ಮಿ, ದುಃಖ ತಡೆಯಲಾರದೆ, ಚಾಪೆಯ ಮೆಲೆ ಮತ್ತೆ ಬಿದ್ದುರೊಂದಳು.

ಒಳಿಗಿನಿಂದ ಸುಂದರಮ್ಮನ ಧ್ವನಿ ಗಟ್ಟಿಯಾಗಿಯೇ ಕೇಳಿಸಿತುಂ

     "ಏನೋ ಸಪ್ಪಳವಾಯ್ತೂಂದ್ರೆ... ಆಕೆ ಎಚ್ಚರವಾಗಿದಾಳೋ ಏನೋ."
  "ಗಾಳಿಗೆ ಬೀದೀಲೇನೂ ಸದ್ದಾಗಿರ್‍ಬೇಕು."
  "ಇದ್ದೀತು."
  "ಮಲಕೋ ಇನ್ನು. ಮಗೂಗೆ ಹಾಲು ಕುಡಿಸಿದೆಯೇನು?"
  "ಹೂಂ..."