ಪುಟ:ಬನಶಂಕರಿ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯನ್ನು ಗೌರವಿಸಿದವರಲ್ಲ ಸಾಲದುದಕ್ಕೆ ಏಕವಚನ ಸಂಬೋದನೆ, ಅಮ್ಮಿ ಮಾತ್ರ ಅವರು ಇವರು ಎಂದು ಮನ್ನಣೆಕೊಟ್ಟು ಮಾತನಾಡಬೇಕು ಉದ್ದನೆ ಲಂಗೋಟಿಯ ಕೆದರಿದ ಜುಟ್ಟಿನ ಆ ಹುಡುಗರು ಕೀಟಲೆ ಕೊಟ್ಟು ಅಮ್ಮಿ ಅಳುವಂತೆ ಮಾಡಿ ಓಡಿಹೋದರಂತೂ ಅವರನ್ನು ಹಿಡಿಯುವರೇಯಿಲ್ಲ,

    ಮೊದಲು ಮೊಗಸಾಲೆ ಬೆಳಗಿತು ಬಳಿಕ ಬಾಗಿಲ ಹೊರಗಿನ ಸಾಲು ದೀಪ 
    ಕೈಗಳಲ್ಲಿ ಪಟಾಕಿಯ ಸರಮಾಲೆ ಹಿಡಿದು ನಾಣಿ-ರಂಗರು ಅರಚಿದರು;
   "ಬೇಗ!ಹೂಂ ಬೇಗ"
   ಅವರತಂದೆಯ ಸ್ವರ ಮೃದುವಾಗಿ ಆದರೆ ದೃಡವಾಗಿ ಕೇಳಿಸಿತು;
  "ಯಾಕೋ ಗಲಾಟೆ ಸುಮ್ನಿರಬಾರ್ದೇನೊ ಒಂದ್ನಿಮಿಷ"
 ಒಂದು ರೀತಿಯ ಸಂತೋಷ ಅಮ್ಮಿಗೆ, ತಾನು ಅಂಗಳದ ಸಾಲುದೀಪ ಹಚ್ಚಿದ

ಮೇಲಲ್ಲವೇ ಅವರು ಪಟಾಕಿ ಹಾರಿಸಬೇಕು? ತನ್ನ ಹಿರಿಮೆಯನ್ನು ಆ ಹುಡುಗರು ಈಗಲಾದರು ಒಪ್ಪುವರೆಂದು ಅಮ್ಮಿಗೆ ಸಮಾದಾನ

 ಹೊಸ್ತಿಲು ದಾಟಿ ಅಂಗಳಕ್ಕಿಳಿದು ತುಳಸಿಕ್ಕಟ್ಟೆಯ ಬಳಿ ಸಾರಿದಳು ಅಮ್ಮಿ ಕುಲುಕುಲು ನಗುತ್ತಾ
ರಂಗ- ನಾಣಿಯರಿಬ್ಬರಿಗೂ ಈ ಅತ್ತಿಗೆಯನ್ನು ಚೆನ್ನಾಗಿ ಥಳಿಸ ಬೇಕು ಎನ್ನುವಷ್ಟು ಸಿಟ್ಟು ಆದರೆ
ಆಗ ಅವರು ಅಸಹಾಯಕರು ಅಂಗಳದ ಸುತ್ತಲಿನ ಸಾಲುದೀಪಗಳು ಹತ್ತಿ ಕೊಂಡ ಮೇಲೆಯೇ
ಮೊದಲ ಪಟಾಕಿ ಹಾರಬೇಕು.
 ಮನೆಯ ಸೊಸೆ ಬೇಕುಬೇಕೆಂದೇ ನಿದಾನಿಸುತ್ತಾ ಕೆಲೆಸ ಮಾಡಿದಳು ತನ್ನ ಕೈಯಲ್ಲೂ ಪಟಾಕಿ ಚಟ್ ಚಟ್ ಎನ್ನಬೇಂಕೆಂಬ ಆಸೆ ಅವಳಿಗೆ,ಆದರೆ ಅವಳೀಗ ಬರಿದು ಹುಡುಗಿಯಲ್ಲ ಆಕೆ ಪಟಾಕಿ ಕೈಗೆತ್ತಿ ಕೊಂಡರೆ ಅತ್ತೆ ಮಾವ ಏನೆಂದಾರು? ಈಗ ಹುಡುಗರ ಆಟವನ್ನು ನೋಡುತ್ತಾ ಗಂಭೀರವಾಗಿ ನಿಲುವುದೇ ಅವಳಿಗೆ ಭೂಷಣ .
  ಕೊನೆಯ ಹತ್ತು ಹಣತೆಗಳನ್ನು ಹಚ್ಚಿಟ್ಟು ಅಮ್ಮಿ ಮನೆಯೊಳಕ್ಕೆ ಓಡಬೇಕು ಇಲ್ಲದೆ

ಹೋದರೆ ಆ ಮೈದುನಂದಿರು ಪಟಾಕಿ ಹಚ್ಚಿ ತನ್ನ ಮೇಲೆ ಎಸೆಯುವುದು ಖಂಡಿತ,ಕೊನೆಯ ದೀಪವೂ ಬೆಳಗಿದ ಮೇಲೆ ಕೈಯಲ್ಲಿದ್ದ ದೊಡ್ಡ ಹಣತೆಯನ್ನು ಅಮ್ಮಿ ತುಳಸಿ ಕಟ್ಟೆಯ ಮುಂದಿಟ್ಟಳು.

  ಕಿರಿಯವನು-ರಂಗ-ಅತ್ತಿಗೆಯನ್ನು ಅಟ್ಟಿಸಿಕೊಂಡೇ ಬಂದ ಆದರೆ ಅಮ್ಮಿ ಇನ್ನೂ ಸುರಕ್ಶಿತ 
ತಳು ತಂದೆಯ ಸಮ್ಮತಿ ದೊರೆತ ಮೇಲಲ್ಲವೇ  ಹುಡುಗರು ಪಟಾಕಿ ಹಚ್ಚುವುದು?
  ಆದರೆ ಅಮ್ಮಿ ಹೆದರಿಕೊಡವಳಂತೆ ನಟಿಸುತ್ತಾ "ನೋಡಿ ಅತ್ತೆ"ಎಂದು ದೂರುತ್ತಾ ಮನೆ
ಯೊಳಕ್ಕೆ ದಾವಿಸಿದಳು. 
 ಹಿರಿಯವನು -ನಾಣಿ-ಅಂಗೈಯ ಹಿಂಬಾಗದಿಂದ ಸಿಂಬಳ ಒರೆಸುತ್ತಾ ಅಸಹನೆಯ ದ್ವನಿಯಿಂದ ಬಾರಿಬಾರಿಗೂ ಕೇಳಿದ;
" ಅಪ್ಪಯ್ಯ ಹಚ್ಚಲಾ ಅಪ್ಪಯ್ಯ? ಅಪ್ಪಯ್ಯ'
ಮದ್ಯ ವಯಸ್ಸಿನ ಆದಂಪತಿ ಬಾಗಿಲ ಹೊರಬಂದು ನಿಂತರು ಅಮ್ಮಿ ಅತ್ತೆಯ ಸೆರಗು ಹಿಡಿದು
ಹಿಂಬದಿಯಿಂದ ಇಣುಕಿ ಇಣುಕಿ ನೋಡಿದಳು.
   "ಹುಶಾರಿ ರಂಗ ಹುಶಾರಿ ನಾಣಿ ಛಾವಣಿ ಹುಲ್ಲು ಹುಶಾರಿ ಅಂಗಳದ