ಪುಟ:ಬನಶಂಕರಿ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೧೩

ದರು ಬಿಡುವಿನ ಅವದಿಯೆಲ್ಲಾ ಭಾರತವಾಚನಕ್ಕೆ ಮೀಸಲಾಗುತಿತ್ತು.ಅಷ್ಟಿದ್ದರೂ ಮಗನ ನೆನಪಾದಾಗ ಅಂತರ್ಮುಖಿಯಾದ ಅವರು ಹೇಳುತಿದ್ದರು;
   "ವಿಷಮ ಜ್ವರ ಯಾವಾಗ್ಲೂ ಅಷ್ಟೇ ಲಕ್ಷ್ಮಿಆರೈಕೆ ಮುಖ್ಯ, ಸ್ವಲ್ಪ ಹೆಚ್ಚು ಕಡಿಮೆಯಾದ್ರು

ಪ್ರಾಣಕ್ಕೆ ಸಂಚಕಾರ ಮೊದಲೇ ಮನೆ ಅಡಿಗೆಯಿಲ್ಲದೆ ನಿತ್ರಾಣನಾಗಿದ್ದ ಹುಡುಗ ಅಂತೂ ಆಗೋಯ್ತಲ್ಲ..ಹೂಂ.."

   ಅಂಚೆಯವನು ಈಗಲೂ ವಾರಕೆರಡು ಬಾರಿ ಚಿಕ್ಕಮಗಳೂರಿಹೋಗಿ ಬರುತಿದ್ದ ಹಿಂದೆಯಾದರೆ ಅಮ್ಮಿಯ ಗಂಡನಿಂದ ಆತ ಕೈಕಾಗದಗಳನ್ನು ತರುತಿದ್ದ. ಈಗ ಕೈಕಾಗದಗಳು
ಇಲ್ಲ ಟಪಾಲು ಮುದ್ರೆ ಹೊತ್ತ ಕಾಗದಾನೂ ಇಲ್ಲ, ಆದರೂ ಆತ ಬರುವ ವೇಳೆ ಈಗಲೂ  ಅಮ್ಮಿಯ ದೃಷ್ಟಿ ಬೆಟ್ಟಗಳ ಇಳಿಜಾರಿನತ್ತ ಕಾಡುಹಾದಿ ಕಾಲು ಹಾದಿಗಳತ್ತ ಹರಿಯುತಿತ್ತು ಆದರೆ ಇದೀಗ ಅರ್ತವಿಲ್ಲದ ನೋಟ.
   ಒಮ್ಮೊಮ್ಮೆ ಅಮ್ಮಿಗೆ ಬಾಸವಾಗುತಿತ್ತು! ಈಗ ನಡೆದಿರುವುದೆಲ್ಲಾ ಕನಸಲ್ಲವೇ?ಕೆಟ್ಟ ಕನಸಲ್ಲವೇ?
   ಆದರೆ ದಿನಗಳುರುಳಿದಂತೆ ಕ್ರೂರ ನಿಜಸ್ತಿತಿ ಅವಳ ಹೃದಯದ ನೋವನ್ನು ಹೆಚ್ಚಿಸುತಿತ್ತು.
            ೦                      ೦                      ೦
      ಜೀವನಹಳ್ಳಿಯಲ್ಲಿ ಹುಟ್ಟಿಬೆಳೆದ ಅಮ್ಮಿಗೆ ಹನ್ನೊಂದು ವಯಸ್ಸಿನಲಿ ವಿವಾಹ ವಾಯಿತು ಅಜ್ಜಿ ಸಾಕಿದ
ಮಗಳು ಅಮ್ಮಿ, ಒಂದೊಂದು ವರ್ಷ ಒಬ್ಬೊಬ್ಬ ಮಗನಬಳಿ ಯಿರುತಿದ್ದ  ಮಹಾತಾಯಿ, ಆ ವರ್ಷ ಜೀವನ
ಹಳ್ಳಿಯ ಹಿರಿಯ ಮಗನ ಬಳಿಯಿದ್ದಳು ಅದು ಅವಳ ಪಾಲಿಗೆ ಅತ್ಯಂತ ಕ್ರೂರವಾದವರ್ಷ. ತಾನು  ಹೆತ್ತು ಹೊತ್ತಿದ ಮೊದಲ ಗಂಡು ಮಗು ಕಣ್ಣು ಮುಚ್ಚಿದ್ದನ್ನು ಆ ವೃದ್ದೆ ಕಂಡಳು "ಮೊದಲು ನನ್ನನ್ನು ಒಯ್ಬಾದ್ರಿ
ತ್ತೇನೋ ನಿರ್ದಯ" ಎಂದು ದೇವರನ್ನು ನಿಂದಿಸಿದಳು, ಆಗ ಅಜ್ಜಿಯ ಸೊಸೆ ಗರ್ಬಿಣಿ ಅಮ್ಮಿ ಆ ಬಸಿರಿನ
ಲ್ಲಿದ್ದಳು ಅಜ್ಜಿ ನಾಲ್ಕು ವರ್ಷದ ಮೊಮ್ಮಗ ರಾಮಕ್ರುಷ್ಣನನ್ನು ನೋಡಿಕೊಂಡಳು ಗರ್ಬಿಣಿ ಸೊಸೆಯ ಆರೈಕೆ ಮಾಡಿದಳು... ಹಾಗೇ ಅಮ್ಮಿಯ ತಾಯಿಯ ಮರಣ..."ಇದನ್ನೆಲ್ಲಾ ನೊಡ್ತಾ ಬದುಕಿದ್ದೀನಲ್ಲಾ ನನ್ನ ಕಣ್ಣು ಇಂಗಿ ಹೋಗ ಬಾರದೇ?" ಎಂದು ಆ ಮುದುಕಿ ಗೋಳಾಡಿದುಂಟು. ಆದರೆ ಕೆಂಪು ಸೀರೆಯ ಸೆರಗಿನಿಂದ ಕ
ಣ್ಣೊರೆಸಿಕೊಂಡು ಆಕೆ ಆ ಹೆಣ್ಣು ಕೂಸನ್ನೂ ಅ ಎಳೆಯ ಮೊಮ್ಮಗನನ್ನೂ ಸಾಕಿದಳು..ಹಾಗೆ ಆರು ವರ್ಷ
ಗಳ ಪಾಲನೆ ಪೋಷಣೆ.
    ಕೊನೆಗೆ ಇನ್ನೊಬ್ಬ ಮಗನಿಂದ ಕರೆ ಬಂತೆಂದು ಆ ಅಜ್ಜಿ ಹೊರಟು ಹೋದಳು. ಇಬ್ಬರೇ ಆಗಿ ಉಳಿದ ಅಣ್ಣ ತಂಗಿ ಊರ ಕೆಲವರ ನೆರವಿನಿಂದ ಬಾಳ್ವೆ ನಡೆಸಿದ ರೀತಿ ಬಲು ವಿಚಿತ್ರ ವಾದುದು, ಅವರ ಪುಟ್ಟ ಮನೆ
ಯ ಸುತ್ತಲೂ ಅವರದಾದ ಒಂದಷ್ಟು ಹೊಲವಿತ್ತು 'ಸಣ್ಣದನಿ' ರಾಮಕ್ರಷ್ಣನ ಹೊಲದಲ್ಲಿ ಹೊಲೆಯರು 
ಭತ್ತದಸಸಿಗಳನ್ನು ನೆಟ್ಟು ಬೆಳೆಸಿದರು, ಹಣ್ಣುದುರಿಸಿತು ಮಾವು,  ಹಲಸು ಪಲ ಕೊಟ್ಟಿತು. ಹಾಗೆ ಅಣ್ಣ ತಂಗಿ
ಬೆಳೆದು ದೊಡ್ಡವರಾದರು 
   ಅಮ್ಮಿ ಹನ್ನೊಂದು ವರ್ಷದವಳಾದಾಗ.ಅವಳ ಜೀವನದ ಒಂದು ಅದ್ಯಾಯ