ಪುಟ:ಬನಶಂಕರಿ.pdf/೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


"ಅಮ್ಮಿ ದೇವರ ಮನೆಗೆಹೋಗಿ ಹಣತೆ ಹಚ್ಚಿಕೊಂಡು ಬಾರೇ "
"ಹೂಂ ಅತ್ತೆ"
ಪ್ರೀತಿಯ ಮಗುವಿಗೆ ಹೇಳಿದ ಹಾಗಿತ್ತು ಅತ್ತೆಯ ಮಾತು, ಸೊಸೆಯೂ ಅಷ್ಟೆ.
ಹೂವಿನಷ್ಟು ಕೋಮಲ ಆ ಮಾರುತ್ತರದ ದ್ವನಿ,
ಮೊಗಸಾಲೆಯಲ್ಲಿ ಮಾವ ಕುಳಿತಿದರು,ಅವರೆದುರಿಂದ ಹಾದು ಹೋಗಿ ಆ ಹಣತೆ
ಯನ್ನೆತ್ತಿಕೊಳ್ಳಬೇಕು, ಹನ್ನೆರಡುಹದಿಮೂರರ ಆಪುಟ್ಟ ಹುಡುಗಿ ಮೈತುಂಬ ಸೆರಗು
ಹೊದ್ದುಕೊಂಡು ವಿನೀತಳಾಗಿ ಮಾವನೆದುರು ನಡೆದು ಬಂದಳು.
ಶಾಂತವಾದ ಸ್ವರದಲ್ಲಿಅವ ರು ಕೇಳಿದರು ;
"ಸಾಲುದೀಪ ಹಚ್ತಿಯೇನಮಣ್ಣಿ"?
"ಹೂಂ ಮಾವಯ್ಯ"
"ಹಾಂ ಹಚ್ಚಿಡಿ ಆಗ್ನಿಂದ ಪಟಾಕಿ ಸುಡೋಕೆ ಹುಡುಗರು ಕಾಯ್ತಾ ಇದಾರೆ".
"ಹೂಂ"...
ಪಟಾಕಿಯ ಪದೋಚ್ಚಾರ ಅಮ್ಮಿ ಲಗುಬಗೆಯಿಂದ ನಡೆಯುವಂತೆ ಮಾಡುವಂತೆ ಮಾಡಿತು.
ಎಣ್ಣೆ ತುಂಬಿದ್ದ ಹಣತೆಯನೆತ್ತಿಕೊಂಡು ಅವಳು ದೇವರ ಮನೆಗೆ ಹೋದಳು, ಹೊಸತಾಗಿ
ಹೊಸೆದ್ದಿದ್ದ ಅರಳೆಯ ಬತ್ತಿ ಸೊಗಸಾಗಿ ಆ ಹಣತೆಯಲ್ಲಿಎಣ್ಣೆಯೊಡನೆ ಬೆರೆತು ಒರಗಿ
ಕೊಂಡಿತು, ಒಂದು ವಾರಕ್ಕೆ ಹಿಂದಯೇ ದೀಪಾವಳಿಯ ಹಬ್ಬಕ್ಕೆಂದು ಅತ್ತೆಯೂ
ಸೊಸೆಯೂ ಜತೆಯಾಗಿ ಕೂತು ಬತ್ತಿ ಹೊಸೆದಿದ್ದರು-ಮೆಲುದನಿಯಲ್ಲಿ ದೇವರನಾಮ
ಹೇಳುತ್ತ.
ಸಿಂಗರಿಸಿದ್ದ ದೇವರೆದುರು ದೀಪ ಉರಿಯುತಿತ್ತು ಅದರಿಂದ ಹಣತೆಗೆ ಬೆಳಕು
ಅಂಟಿಸಿಕೊಡಳು ಅಮ್ಮಿ ಗಾಳಿಗೆ ಆರದಂತೆ ಸೆರಗಿನಿಂದ ಹಣತೆಯಿಂದ ಮರೆಮಾಡಿ.
ಹೆಜ್ಜೆಯಮೇಲೆ ಹೆಜ್ಜೆಯಿಡುತ್ತಾ ಹೊರಬಂದಳು.
ಹೊರಗೆ ಹುಡುಗರಿಬ್ಬರು ಗಲಾಟೆ ಮಾಡುತ್ತಿದ್ದರು.
"ಅಪ್ಪಯ್ಯ ನೊಡಪ್ಪಯ್ಯ ಹೊಡಿತಾನೆ ರಂಗ."
"ನಾನಲ್ಲ ಅಪ್ಪಯ್ಯ ಸುಳ್ಳು ಹೇಳ್ತಾನೆ ಅಣ್ಣ."
ಅಮ್ಮಿಯ ಮೈದುನಂದಿರು ಯಾವಾಗಲೂ ಹಾಗೆಯೇ ಹತ್ತುವರುಷ ಆರು ವರುಷ
ವಯಸ್ಸಿನ ಆ ಹುಡುಗರು ಹೊರಗೆ ಗದ್ದೆಗಳಿಗೋ ತೋಟಕ್ಕೋ ಹೋದರೆ ಮನೆ ಬಿಕೋ
ಎನ್ನುತ್ತಿತ್ತು ಅದು ಸಹಿಸಲಾಗದ ಮೌನ, ಅಮ್ಮಿ ಯಾವಾಗಲೂ ಅವರು ಹಿಂತಿರುಗಿ
ಬರುವುದನ್ನೇ ಇದಿರು ನೋಡುತಿದ್ದಳು ಅತ್ತೆಯೂ ಆಗಾಗ್ಗೆ ಕೇಳುತ್ತಾಯಿದ್ದಳು;"ರಂಗ
ಎಲ್ಲೇ ನಾಣಿಎಲ್ಲೇ ಅಮ್ಮಿ?"
ಆ ಹುಡುಗರೋ ಮಹಾ ತುಂಟರು, ಅತ್ತಿಗೆ ಎಂದು ಒಂದು ದಿನವೂ ಅಮ್ಮಿ