ಪುಟ:ಬಾಳ ನಿಯಮ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಬಹುದು!-ಎಂದು ಆ ತೋಳಗಳು ಯೋಚಿಸಿರಬೇಕು. ಮಧ್ಯಾಹ್ನವೆಲ್ಲ ತಿರುಗಾಡಿದ ಮೇಲೆ ಅವನು ಒಂದು ಜಾಗಕ್ಕೆ ಬಂದನು. ಅಲ್ಲಿ ತೋಳಗಳು ಸಾವಿನಾಟ ನಡೆಸಿರಬೇಕು ; ಏಕೆಂದರೆ ಮೂಳೆಗಳು ಚೆಲ್ಲಾ ಪಿಲ್ಲಿಯಾಗಿ ಹರಡಿದ್ದವು. ಆ ಅವಶೇಷಗಳೇ ಒಂದು ಗಂಟೆಯ ಹಿಂದೆ, ಉತ್ಸಾಹದಿಂದ ಚೀರುತ್ತಾ ಓಡಿದ್ದ ಕ್ಯಾರಿಬ್ ಮರಿಯದಾಗಿತ್ತು ! ಮೂಳೆ ಗಳನ್ನೇ ದಿಟ್ಟಿಸಿ ನೋಡಿದನು. ಕಿತ್ತಾಟದ ರಕಜಾಲದಲ್ಲಿ ಓಲಾಡಿದ್ದ ಕೆಲವು ನಸುಗೆಂಪಿನ ಮೂಳೆಗಳಲ್ಲಿ ಇನ್ನೂ ಸಾಯದ ಜೀವಕಣಗಳು ಅಡಗಿದ್ದಂತೆ ಕಂಡಿತು....ಯಾವುದೋ ದಿನದಲ್ಲಿ ತನ್ನ ಗತಿಯೂ ಅಷ್ಟೇ ತಾನೆ! ಬಾಳೆಂದರೆ ಅಷ್ಟೇ ಅಲ್ಲವೇ? ನಿಸ್ಸಾರ ; ಹಾಗೂ ಕ್ಷಣಿಕ, ಜೀವಿಸಬೇಕೆನ್ನುವವರಿಗೆ ಮಾತ್ರ ನರಳಾಟ ಮಾಸಲು, ಮತ್ತು ವೆಂಬ ಮಾಯಾಲೋಕದಲ್ಲಿ ಯಾವ ಗುದ್ದಾಟವೂ ಇಲ್ಲ. ಸಾಯುವುದೆಂದರೆ ಮಲಗಿದಂತೆ ಅಷ್ಟೆ. ಅದೇ ಸಂಪೂರ್ಣ ವಿರಾಮ ಮತ್ತು ವಿಶ್ರಾಂತಿ. ಹಾಗಾದರೆ ತಾನು ಸಾಯುವುದರಲ್ಲೇಕೆ ತೃಪ್ತನಾಗುವುದಿಲ್ಲ? ಆದರೆ ಅವನು ನೀತಿಯ ವ್ಯಾಖ್ಯಾನವನ್ನು ಬಹು ಹೊತ್ತು ಮುಂದು ವರಿಸಲಿಲ್ಲ. ತಕ್ಷಣ ಕಾರ್ಯತತ್ಪರನಾದನು. ಚೌಗು ಪ್ರದೇಶದಲ್ಲಿ ಭದ್ರ ವಾಗಿ ಕುಳಿತನು. ಮೂಳೆಯೊಂದನ್ನು ಬಾಯ ಹತ್ತಿರ ತಂದನು. ಮೂಳೆಯ ಸುತ್ತಲೂ ಅಂಟಿಕೊಂಡಿದ್ದ ನಸುಗೆಂಪಿನ ಜೀವರಸವನ್ನು ಹೀರಿದನು. ಮಾಂಸದ ಸವಿ ಅವನನ್ನು ಹುಚ್ಚನನ್ನಾಗಿ ಮಾಡಿತು. ಸ್ವಲ್ಪ ಪ್ರಮಾಣದಲ್ಲಿದ್ದರೂ, ಆಸೆ ತೋರಿಸಿ ಮರೆಯಾಗುವ ನೆನಪಿನಂತೆ ಆ ಮಾಂಸದ ಚೂರು ದಿಗ್ರಮೆ ಹಿಡಿಸಿತು. ಸವಿಯಟ ಮುಗಿಯಿತು. ಮೂಳೆ ಮಾತ್ರ ಉಳಿಯಿತು. ಅದನ್ನೂ ದವಡೆಯಲ್ಲಿ ಸಿಕ್ಕಿಸಿ ಕಟಕಟನೆ ಕಡಿದನು. ಕೆಲವು ವೇಳೆ ಮೂಳೆ ಚೂರಾಯಿತು. ಮತ್ತೆ ಕೆಲವು ಸಾರಿ ಅವನ ಹಲ್ಲುಗಳೇ ಮುರಿದುಹೋದವು. ಮತ್ತೆ ಮೂಳೆಯನ್ನು ಹೊರತೆಗೆದು ಕಲ್ಲಿನಿಂದ ಜಜ್ಜಿ ಮುದ್ದೆ ಮಾಡಿದನು; ಹಾಗೆಯೇ ಬಾಯಿಗೆ ಹಾಕಿಕೊಳ್ಳಲು ಹಿಂಜರಿಯಲಿಲ್ಲ. ಆತುರದಲ್ಲಿ ಎಷ್ಟೋ ಸಾರಿ ಅವನ ಬೆರಳುಗಳೂ ಜಜ್ಜಿ ಹೋದುವು. ಅವನಿಗೆ ಆಶ್ಚರ್ಯವಾಯಿತು ; ಏಕೆಂದರೆ ತನ್ನ ಕೈ ಉರುಳುತ್ತಿದ್ದ ಬಂಡೆಕಲ್ಲಿಗೆ ಸಿಕ್ಕಿದಾಗ ಇಷ್ಟು ನೋವಾ ಗಿರಲಿಲ್ಲ. ಮಂಜಿನ ಅಥವಾ ಮಳೆಯ ಅತಿರೇಕದ ದಿನಗಳು ಎಷ್ಟೋ ಆಗಿ ಹೋದವು. ಎಲ್ಲಿ ಬೀಡುಮಾಡಿದೆ, ಯಾವಾಗ ಹೊರಟಿ' ಮುಂತಾದ