ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ

ವಿಷಯಗಳು ಅವನಿಗೆ ಒಂದೂ ತಿಳಿಯದು. ರಾತ್ರಿ ಹಗಲು ಒಂದೇ ಸಮನೆ ಪ್ರಯಾಣ ಮಾಡುತ್ತಿದ್ದನು. ಕೆಳಕ್ಕೆ ಬಿದ್ದಾಗ, ಆ ಜಾಗದಲ್ಲೇ ವಿಶ್ರಾಂತಿ ಪಡೆದು ಮುಂದುವರಿಯುತ್ತಿದ್ದನು. ಬಾಳ ಬತ್ತಿ ಮೃತ್ಯುವಿನ ಹೊಡೆತಕ್ಕೆ ಸಿಕ್ಕಿ ಮಂಕಾಗಿ ಉರಿಯುತಿದ್ದಾಗ, ಏನು ಮಾಡಿಯಾನು? ಆದರೂ ಅಂಥ ಸಂದರ್ಭ ದಲ್ಲಿ ತೆವಳುತ್ತಾ ಹೋಗುತಿದ್ದನು. ಅಂತೂ ಅವನೀಗ ಮನುಷ್ಯನಾಗಿ ಕೆಲಸ ಮಾಡುತ್ತಿರಲಿಲ್ಲ! ಸಾಯಲು ಇಚ್ಛೆಯಿಲ್ಲದ ಒಳಗಿನ ಜೀವ ಅವನನ್ನು ಮುಂದೆ ಮುಂದೆ ನೂಕುತಿತ್ತು ! ಅವನೇನೂ ಕಷ್ಟ ಪಡಲಿಲ್ಲ! ನರಗಳು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದವು. ಮನಸ್ಸು ದೇಹದಿಂದ ದೂರವಾಗಿ ಸ್ವಾರಸ್ಯವಾದ ಕನಸನ್ನು ಕಾಣುತಿತ್ತು ; ಅಲ್ಲಿ ಒಂದರ ಮೇಲೊಂದು ವಿಜಾತೀಯ ದೃಶ್ಯ ಪರಂಪರೆಯಿತ್ತು. ಅಂತೂ ಕ್ಯಾರಿಬೌ ಮರಿಯ ಎಲುಬುಗಳನ್ನು ಕುಟ್ಟಿ ತಿಂದದ್ದಾಯಿತು ; ಹೊರಗಿನ ಮಾಂಸ ನಾರವನ್ನು ಹೀರಿದ್ದೂ ಆಯಿತು. ಅಷ್ಟಕ್ಕೇ ಮುಗಿಯಲಿಲ್ಲ; ಇನ್ನೂ ಉಳಿದಿತ್ತು. ಆ ಭಾಗವನ್ನೆಲ್ಲ ಒಂದೆಡೆ ಸೇರಿಸಿ ಕುಟ್ಟಿ ತನ್ನ ಜೊತೆ ಯಲ್ಲೇ ತೆಗೆದುಕೊಂಡು ಹೊರಟನು. ಮತ್ಯಾವ ಬೆಟ್ಟವನ್ನೂ ದಾಟಲಿಲ್ಲ. ಮರುಯೋಚನೆಯಿಲ್ಲದೆ, ದೊಡ್ಡ ಪ್ರವಾಹವನ್ನು ಯಾಂತ್ರಿಕವಾಗಿ ಹಿಂಬಾಲಿ ಸುತಿದ್ದನು ; ಹೆಚ್ಚು ಆಳವಿಲ್ಲದೆ ಅಗಲವಾಗಿದ್ದ ಕಣಿವೆಯಲ್ಲಿ ನೀರು ಹರಿಯು ತಿತ, ಪ್ರವಾಹವಾಗಲಿ ಕಣಿವೆಯಾಗಲಿ ಅವನ ಕಣ್ಣಿಗೆ ಬೀಳಲಿಲ್ಲ. ಎಲ್ಲವೂ ಸ್ವಪ್ನದರ್ಶನದಂತಿತ್ತು. ದೇಹ, ಆತ್ಮ ಎರಡೂ ಪಕ್ಕ ಪಕ್ಕದಲ್ಲಿ ತೆವಳಿಕೊಂಡು ನಡೆಯುತ್ತಿದ್ದವು ; ಅವೆರಡನ್ನೂ ಕಟ್ಟಿದ್ದ ದಾರ ಒಂದೇ ಏಟಿಗೆ ಕಳಚಿಬೀಳು ವಷ್ಟು ಮೃದುವಾಗಿತ್ತು. ಅಂದ ಮೇಲೆ ದೇಹ ಬೇರೆ, ಆತ್ಮ ಬೇರೆ-ಎನ್ನು ವುದೇ ಸರಿ. ಅಂದು ಸೂರ್ಯನ ಬೆಳಕು ಜೋರಾಗಿತ್ತು ; ಹಿಂದಿನೆರಡು ದಿನಗಳು ಬೇಸರ ಹಿಡಿಸಿದ ಮಳೆ ಗಾಳಿಯ ಫಲವಿರಬೇಕು. ನಾಯಕನಿಗೆ ಮಾತ್ರ ಏನೂ ಹೊಳೆಯಲಿಲ್ಲ. ಮಂಜು ಮಳೆ ಗಾಳಿ ಎಂದೋ ಇದ್ದಂತೆ ಅವನಿಗನ್ನಿ ಸಿತು. ಅಸ್ಪಷ್ಟ ನೆನಪು ಮಾತ್ರ ಉಳಿದಿತ್ತು. ಅದು ಹೋಗಲಿ ಎಂದರೆ, ಅದರಿಂದ ಪೀಡಿತನಾದ ವಿಷಯವಂತೂ ಕೊಂಚವೂ ತಿಳಿಯದು. ಅವನಿಗೆ ಎರಡು ದಿನವೂ ಒಂದೇ ; ಎರಡು ವಾರವೂ ಒಂದೇ. ಸ್ವಲ್ಪ ಹೊತ್ತು ಚಲಿಸದೆ ಹಾಗೆಯೆ ಬಿದ್ದು ಕೊಂಡಿದ್ದನು. ಸೂರ್ಯ ರಶ್ಮಿಯ ಹೊಡೆತ ಉಲ್ಲಾಸಕರವಾಗಿತ್ತು. ದುರವಸ್ಥೆಯಲ್ಲಿದ್ದ ಅವನ ಶರೀರ