ಪುಟ:ಬಾಳ ನಿಯಮ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಬೆಚ್ಚಗಾಯಿತು. ಇದೊಂದು ಒಳ್ಳೆಯ ದಿನವಿರಬೇಕು ; ತಾನಿರುವ ಸ್ಥಳ ಯಾವುದು, ಮುಂದೆ ಹೇಗೆ ಹೋಗಬೇಕು, ಇತ್ಯಾದಿ ವಿಷಯಗಳನ್ನು ನಿರ್ಧರಿ ಸಲು ಇವತ್ತು ಸಾಧ್ಯವಾಗಬಹುದು ಎಂದು ಯೋಚಿಸಿದನು. ಕಷ್ಟ ಪಡುತ್ತಾ ಪಕ್ಕಕ್ಕೆ ಹೊರಳಿಕೊಂಡನು. ಕೆಳಗೆ ಮಂದಗಾಮಿ ನದಿಯೊಂದು ಹರಿಯು ತಿತ್ತು ; ಸಾಕಷ್ಟು ದೊಡ್ಡದಾಗಿಯೂ ಇತ್ತು. ಅವನ ಕಣ್ಣಿಗೆ ಅದು ತೀರ ಅಪರಿಚಿತವಾಗಿ ಕಂಡಿತು. ಜೊತೆಗೆ ಆಶ್ಚರ್ಯವೂ ಆಯಿತು. ನೋಡೇ ಬಿಡೋಣವೆಂದು ನದಿಯನ್ನೇ ಹಿಂಬಾಲಿಸಿದನು. ನದಿಯ ಮಾರ್ಗ ಪಸರಿ ಸುತ್ತಾ ಬೆಟ್ಟಗಳನ್ನು ಬಳಸಿತ್ತು. ಆ• ಬೆಟ್ಟದಷ್ಟು ನಿರ್ವಣ್ರವೂ ಅನಾವೃತವೂ ಕೆಳಮಟ್ಟದ್ರೂ ಆದ ಮತ್ತೊಂದು ಬೆಟ್ಟವನ್ನು ಅವನು ಹಿಂದೆಂದೂ ನೋಡಿರ ಲಿಲ್ಲ. ನಿಧಾನವಾಗಿಯೂ ಜಾಗರೂಕನಾಗಿಯೂ ಹಿಂಬಾಲಿಸಿದನು. ಹೆಚ್ಚು ಉದ್ರೇಕಗೊಳ್ಳದೆ ಸಾಮಾನ್ಯ ಆಸಕ್ತಿಯನ್ನು ವಹಿಸಿದ್ದನು. ಕಡೆಗೆ ಆ ನದಿ, ಹೊಳೆಯುತಿದ್ದ ಸಮುದ್ರವೊಂದಕ್ಕೆ ಹೋಗಿ ಸೇರಿತು. ಸಮುದ್ರ ! ಅವನು ಇನ್ನೂ ಅನುದಿಕನಾಗಿದ್ದನು. ತುಂಬಾ ಅಸ್ವಾಭಾವಿಕವಾಗಿದೆ ಎಂದು ಯೋಚಿಸಿದನು. ಇದೇನು ಮರೀಚಿಕೆಯೋ ಅಥವಾ ತನ್ನ ಮನೋವಿಕಾರವೋ ? ನಿಜ; ಕೀಲು ತಪ್ಪಿದ ಮನಸ್ಸಿನ ಉಪಾಯವೇ ಇರಬೇಕು:-ಎಂದು ತನ್ನಲ್ಲೇ ಎಣಿಕೆಹಾಕಿದನು....ಅಗೋ ಹಡಗು ! ಥಳಥಳಿಸುತ್ತಿರುವ ಸಮುದ್ರದ ಮಧ್ಯೆ ಲಂಗರು ಹಾಕಿದ ಸ್ಥಿತಿಯಲ್ಲಿ ನಿಂತಿದೆ! ಈಗ ಸಿದ್ಧವಾಯಿತು ; ನಿಜವಾಗಿಯೂ ಇದು ಸಮುದ್ರವೇ ಹೌದು....ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ತೆಗೆದನು. ಅಂತೂ ತನ್ನೆದುರಿನ ಸಮುದ್ರ ದೃಶ್ಯ ಆಶ್ಚರ್ಯಜನಕವೇ ಅಗಿದೆ. ಬಂಜರು ಭೂಮಿಯ ಹೃದಯದಲ್ಲಿ ಸಮುದ್ರವೆಲ್ಲಿ ? ಹಡಗೆಲ್ಲಿ ? ತೀರ ಅಸಂಭವ ಎಂದು ತಿಳಿದಿ ದ್ದನು. ಹಿಂದೆ ಬರಿದಾದ ಬಂದೂಕಿನಲ್ಲಿ ಸಿಡಿಮದ್ದನ್ನು ಹುಡುಕಿದಂತೆ, ಈ ಪ್ರಸಂಗದಲ್ಲೂ ಭ್ರಾಂತಿಯಿಂದ ವರ್ತಿಸಿದ್ದಾಯಿತು. * ಗಾಳಿಯನ್ನು ಎಳೆದಾಡುವಂಥ 'ಫ್, Aಫ್' ಎಂಬ ಸದ್ದು ಅವನಿಗೆ ಕೇಳಿಸಿತು. ಅದೂ ತನ್ನ ಹಿಂದೆಯೇ ! ಯಾರದೋ ಉಸಿರು ಅರ್ಧದಲ್ಲೇ ನಿಂತಿರಬೇಕು ; ಇಲ್ಲವೇ ಕೆಮ್ಮಿರಬಹುದು. ಅತಿ ದೌರ್ಬಲ್ಯದಿಂದ ಅವನ ದೇಹ ಬಳುಕಲು ಸಾಧ್ಯವಿಲ್ಲದಿದ್ದರೂ, ಮೆಲ್ಲಗೆ ಮತ್ತೊಂದು ಪಕ್ಕಕ್ಕೆ ಹೊರಳಿ ದನು. ಹತ್ತಿರವೇನೂ ಕಾಣಿಸಲಿಲ್ಲ. ಆದರೂ ತಾಳ್ಮೆಯಿಂದ ಕಾಯ್ದನು. ಪುನಃ `ಫ್, ಸ್ಪಿಫ್' ಎಂದು ಕೆನ್ನುವ ಶಬ್ದ ಕೇಳಬಂತು. ಇಪ್ಪತ್ತು ಅಡಿ ಗಳಷ್ಟು ದೂರವೂ ಇಲ್ಲ ; ಅಲ್ಲೇ ಮೊನಚಾದ ಎರಡು ಬಂಡೆಗಳಿದ್ದುವು ; ಅದರ