ಪುಟ:ಬಾಳ ನಿಯಮ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬಾಳ ನಿಯಮ


ಬಾಳ ನಿಯಮ

ಮುದುಕ ಕಾಸ್‍ಕೂಶ್ ಅತಿಯಾಶೆಯಿಂದ ಕಿವಿಗೊಟ್ಟು ಆಲಿಸಿದ ಆತನ ದೃಷ್ಟಿ ಮಬ್ಬಾಗಿ ಬಹಳ ಕಾಲವಾಗಿದ್ದರೂ, ಕಿವಿಗಳು ಇನ್ನೂ ಚುರುಕಾಗಿದ್ದುವು. ನೆರಿಗಟ್ಟ ಸುಕ್ಕಾಗಿದ್ದ ಹಣೆಯ ಹಿಂದೆ ಇದ್ದ ಆತನ ಬುದ್ಧಿಶಕ್ತಿ ಇನ್ನೂ ಸತ್ವಪೂರ್ಣವಾಗಿತ್ತು. ಎಷ್ಟು ಸಣ್ಣ ಸಾದರೂ ಅದರಲ್ಲಿ ನಾಟುತಿತ್ತು; ಆದರೆ ಅದು ಪ್ರಾಪಂಚಿಕ ವಿಷಯಗಳಿಂದ ವಿಮುಖವಾಗಿತ್ತು.

ಅಗೋ, ಅವಳೇ ಸಿತಕಮತೋಹ; ಹಿಡಿಶಾಪಹಾಕುವವಳಂತೆ ಚೀರುತ್ತಾ ನಾಯಿಗಳನ್ನು ಒಂದೇ ಸಮನೆ ಬಡಿಯುತ್ತಾ ಸಜ್ಜುಗೊಳಿಸುತ್ತಿದ್ದಾಳೆ. ಅವಳು ಮುದುಕನ ಮೊಮ್ಮಗಳು. ಹಿಮಪ್ರದೇಶದಲ್ಲಿ ಯಾವ ಸಹಾಯವೂ ಇಲ್ಲದೆ ಹತಾಶನಾಗಿದ್ದ ಅಜ್ಜನ ಬಗ್ಗೆ ಯೋಚಿಸುವುದಕ್ಕೂ ಅವಳಿಗೆ ಸಮಯವಿರಲಿಲ್ಲ. ಶಿಬಿರವನ್ನು ಕೀಳಬೇಕಾಗಿತ್ತು. ಬಹುದೂರದ ಪ್ರಯಾಣಕ್ಕೆ ಕಾಲ ಹೆಚ್ಚಿರಲಿಲ್ಲ. ಮುಂದಿನ ಜೀವನದ ಕಾರ್ಯಕ್ರಮ ಅವಳನ್ನು ಸೆಳೆಯುತ್ತಿತ್ತು. ಅವಳನ್ನು ಆಹ್ವಾನಿಸುತ್ತಿದ್ದುದು ಜೀವನ, ಸಾವಲ್ಲ. ಮುದುಕನಾದರೋ ಸಾವಿನ ಹತ್ತಿರ ಸರಿಯುತ್ತಿದ್ದನು.

ಯೋಚನೆಯಿಂದ ಮುದುಕನಿಗೆ ಫಕ್ಕನೆ ಗಾಬರಿಯಾಯಿತು.ವಾಗಿದ್ದ ಕೈಯನ್ನು ಮುಂದೆ ಚಾಚಿದನು. ನಡುಗುತ್ತಿದ್ದಂತೆಯೇ ಪಕ್ಕದಲ್ಲಿದ್ದ ಸೌದೆಯ ರಾಶಿಯ ಮೇಲೆ ಕೈಯಾಡಿಸಿದನು. ಪಕ್ಕದಲ್ಲಿದ್ದ ಸೌದೆ ಅವನಿಗೆ ಸ್ವಲ್ಪ ಸಮಾಧಾನ ತಂದಿತು. ಮತ್ತೆ ತನ್ನ ಕೈಗಳನ್ನು ಹಳೆಯದಾಗಿದ್ದ ದುಪಟಿಯಲ್ಲಿ ಮುಚ್ಚಿಕೊಂಡು ಆಲಿಸುತ್ತಾ ಕುಳಿತನು.

ನಾಯಕನ ನೆಲೆ ಮುರಿದಂತಾಗಿ, ಮುಂದೆ ಸಾಗಿಸುವ ಏರ್ಪಾಟನ್ನು ಚರ್ಮದ ಚಟಪಟ ಶಬ್ದದಿಂದಲೇ ತಿಳಿಯಬಹುದಾಗಿತ್ತು, ಮುದುಕನ ಮಗನೇ ತಂಡದ ನಾಯಕನು. ಅವನೂ ಬಲಿಷ್ಠ, ನಿಸ್ಸಿಮ ಬೇಟೆಗಾರ, ಹೆಂಗಸರು ಸಾಮಾನು ಸಾಗಿಸಲು ಒದ್ದಾಡುತ್ತಿದ್ದಾಗ, ನಾಯಕನು ಅವರನ್ನು ಚಡಪಡಿಸುತ್ತಿದ್ದ ಕೂಗು ಕೇಳಿಬರುತ್ತಿತ್ತು. ವೃದ್ಧ ಕಾಸ್‌ಕೂಶ್ ಕಿವಿ ನಿಮಿರಿಸಿ ಆಲಿಸಿದನು....ಹೌದು ; ಇದೇ ಕಡೆಯ ಸಲ ಮಗನ ಧ್ವನಿಯನ್ನು ಕೇಳುವುದು. ಆಗಲೇ ಗೀಹ್, ಟಸ್ಕನ್ ಬಂಡಿಗಳು ಹೊರಟವು ! ಮತ್ತೆ ಏಳು, ಎಂಟು, ಒಂಬತ್ತು; ಕೊನೆಯದು ಮಾತ್ರ ಇನ್ನೂ ನಿಂತಿದೆ. ಅಲ್ಲಿ ! ಸಾಮಾನು