ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಬಾಳ ನಿಯಮ

ಗಳನ್ನು ತುಂಬುತ್ತಿರುವಾಗ ಬೇಟಿಗಾರರು ಗೊಣಗುತ್ತಿದ್ದಾರೆ. ಆ ಸದ್ದು ತನಗೆ ಕೇಳಿಸುತ್ತಿದೆ. ಮಗುವೊಂದು ಬಿಕ್ಕಿ ಅಳುತ್ತಿದೆ. ತಾಯಿ ಮೆಲುದನಿಯಲ್ಲಿ ಸಮಾಧಾನ ಮಾಡುತ್ತಿದ್ದಾಳೆ. ಅಷ್ಟೇನೂ ದೃಢಕಾಯವಲ್ಲದ. ಪೀಡಿಸುತ್ತಿರುವ ಆ ಚಿಕ್ಕ ಮಗು ಕೂ-ಟೀ ಇರಬೇಕು. ಅದು ಬೇಗನೆ ಸಾಯುವ ಸ್ಥಿತಿಯಲ್ಲಿದೆ. ಸತ್ತರೇನಂತೆ? ಹೆಪ್ಪುಗಟ್ಟದ ಜೌಗುಪ್ರದೇಶದಲ್ಲೇ ಗೋರಿಮಾಡಿ ದೇಹ ತೋಳಗಳಿಗೆ ಸಿಗದಂತೆ ಕಲ್ಲು ಹೇರಬಹುದು. ಅಷ್ಟೇ ಜನ ಮಾಡುವ ಕೆಲಸ. ಆದರೇನಂತೆ? ಕೆಲವು ವರ್ಷಗಳಲ್ಲೇ, ಈಗ ಹೊಟ್ಟೆ ತುಂಬಿರುವನರು ಹಸಿದವರಾಗಿ ಅಲೆಯದೆ ಇರುತ್ತಾರೆಯೇ? ಕಡೆಗಂತೂ ಸದಾ ಹೆಸಿದಿರುವ ಮತ್ತು ಹಸಿವಿನ ಪರಮಾವಧಿಯನ್ನು ಮುಟ್ಟಿರುವ ಮೃತ್ಯು ಕಾದೇ ಇರುತ್ತದೆ.

ಏನಿರಬಹುದು? ಹೌದು; ಜನ ಸ್ಲೆಜ್‌ ಗಾಡಿಗಳನ್ನು ಓಡಿಸುತ್ತಿದ್ದಾರೆ.

ಸಾರಥಿ ಕಡಿವಾಣವನ್ನು ಬಿಗಿದೆಳೆಯುತಿದ್ದಾನೆ.. ಮುಂದೆ ಅಂಥ ಶಬ್ದ ಸೇಳುವ ಸಂಭವ ಇಲ್ಲದುದರಿಂದ, ಮುದುಕ ಗಮನವಿಟ್ಟು ಆಲಿಸಿದನು.... ನಾಯಿಗಳು ಹಲ್ಲು ಕಿರಿಯುತ್ತ ಗುರ್ರೆನ್ನುತಿದ್ದವು. ಮತ್ತೆ ಕುಂಯ್‌ಗುಟ್ಟುವ ಅಳುವಿನ ರಾಗ. ಅವುಗಳಿಗೆ ಕೆಲಸವೆಂದರೆ ಸಂಚಾರನೆಂದರೆ ಅಷ್ಟು ದ್ವೇಷ! ಒಂದೊಂದಾಗಿಯೂ ಸಿಧಾನವಾಗಿಯೂ ಬಂಡಿಗಳು ನಿಶ್ಶಬ್ದ ಪ್ರಪಂಚದೆಡೆ ನಡೆದವು. ತನ್ನ ಜೀವನದಿಂದ ಅವು ಬೇರೆಯಾದವು. ಈಗ ಕೊನೆಯ ಮನೋವೇಧಕ ಘಳಿಗೆಯನ್ನು ಏಕಾಂತದಲ್ಲಿ ಕಳೆಯಬೇಕಾಗಿದೆ. ಇಲ್ಲ; ಪಾದರಕ್ಷೆಯೊಂದು ಮಂಜಿನ ನೆಲನನ್ನು ತುಳಿಯುತ್ತಿದೆ. ಅಲ್ಲವೇ ?...ಮನುಷ್ಯನೊಬ್ಬ ಹತ್ತಿರ ಬಂದು ನಿಂತನು. ಅವನು ನಿಧಾನವಾಗಿ ಮುದುಕನ ತಲೆಯಮೇಲೆ ಕೈಯಿಟ್ಟು ನೇವರಿಸಿದನು....ತನ್ನ ಮಗ ಎಷ್ಟು ಒಳ್ಳೆಯವನಾಗಿದ್ದಾನೆ! ತನಗೆ ತಿಳಿದಂತೆ, ಗುಂಪನ್ನು ಬಿಟ್ಟು ವೃದ್ಧ ತಂದಡೆಗಾಗಿ ನಿಂತ ಮಕ್ಕಳು ವಿರಳ. ತನಗೆ ದೊರೆತಂಥ ಸುಯೋಗ ಹಿಂದಿನವರಿಗಿಲ್ಲ.

ಮುದುಕನ ವಿಚಾರಶಕ್ತಿ ಭೂತಕಾಲದ ನೆನಪನ್ನು ತಂದುಕೊಳ್ಳುತ್ತಿತ್ತು. ಮಗನ ಧ್ವನಿಯನ್ನು ಕೇಳಿ ಮುದುಕ ಎಚ್ಚತ್ತು.

"ನೀನು ಚೆನ್ನಾಗಿದ್ದೀಯಾ?"

"ಹೂಂ; ಚೆನ್ನಾಗಿದ್ದೇನೆ" ಎಂದು ಮುದುಕ ಉತ್ತರಕೊಟ್ಟನು.

"ಕಟ್ಟಿಗೆಯು ನಿನ್ನ ಬಳಿಯಿದೆ. ಬೆಂಕಿ ಚೆನ್ನಾಗಿ ಉರಿಯುತ್ತದೆ. ಮುಂಜಾನೆ ಮಬ್ಬಾಗಿದೆ, ಚಳಿ ಪ್ರಾರಂಭವಾಗಿದೆ. ಸ್ವಲ್ಪ ಹೊತ್ತಿನಲ್ಲೇ ಮಂಜು ಬೀಳುವ ಸಂಭವವುಂಟು....ಹೌದು ; ಈಗಲೂ ಬೀಳುತ್ತಿದೆ."