ಪುಟ:ಬಾಳ ನಿಯಮ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

ಬಾಳ ನಿಯಮ


"ನಿಜ ; ಈಗಲೂ ಮಂಜು ಬೀಳುತ್ತಿದೆ" ಎಂದು ಕಾಸ್ಕೂಶ್.

ಮಗ ಹೇಳಿದನು-"ಗುಂಪು ಆತುರದಿಂದ ಹೊರಟಿತು. ಅವರ ಸಾಮಾನಿನ ಹೊರೆ ವಿಪರೀತವಾಗಿದೆ. ಎಲ್ಲರೂ ಹಸಿವಿನಿಂದ ಕಂಗೆಟ್ಟಿದ್ದಾರೆ. ದಾರಿ ಬಹಳ ದೂರವಾದುದರಿಂದ ಅವರು ವೇಗವಾಗಿ ನಡೆಯುತ್ತಿದ್ದಾರೆ. ನಾನು ಈಗ ಹೊರಡುತ್ತೇನೆ. ಬರಲೇ ?"

"ಒಳ್ಳೆಯದು ; ನನ್ನ ಸ್ಥಿತಿಯಂತೂ ಗೊತ್ತಿದೆ. ಕಡೆಯ ವರ್ಷದ ಹಣ್ಣೆಲೆ ಯಂತೆ ಕೊಂಬೆಗೆ ಸ್ವಲ್ಪದರಲ್ಲಿ ಅಂಟಿಕೊಂಡಿದ್ದೇನೆ. ಮೊವಲ ಉಸಿರಿನ ಗಾಳಿಗೇ ಬೀಳುವವನಿದ್ದೇನೆ. ನನ್ನ ಧನಿಯೋ ಮುದುಕಿಯ ಧ್ವನಿಯಂತಿದೆ. ಕಣ್ಣುಗಳಿಗೆ ದಾರಿಯು ಕಾಣದಾಗಿದೆ. ಕಾಲುಗಳು ಭಾರದಿಂದ ಕುಸಿಯು ತಿವೆ. ನಾನು ಬಹಳ ಬಳಲಿದ್ದೇನೆ. ಒಳ್ಳೇದು ಹೋಗಿ ಬಾ."

ಮುದುಕ ತೃಪ್ತಿಯಿಂದ ತಲೆತಗ್ಗಿಸಿ ಕುಳಿತನು. ಹಿಮದ ದಾರಿಯಲ್ಲಿ ಹೆಜ್ಜೆಯ ಸಪ್ಪಳ ಕ್ರಮೇಣ ದೂರ ದೂರವಾಗಿ ಕೇಳಿಸಿತು. ಇನ್ನು ತನ್ನ ಮಗ ನನ್ನು ಕರೆಯಲು ಅಸಾಧ್ಯವೆಂದು ತಿಳಿಯುವ ತನಕ ಕಾಸ್‌ ಕೂಶ್ ಹಾಗೆಯೆ ತಲೆತ ಗ್ಗಿಸಿದ್ದನು. ಆಮೇಲೆ ಅತ್ಯಾತುರದಿಂದ ಕಟ್ಟಿಗೆಯ ಕಡೆ ಕೈ ಚಾಚಿದನು. ಆ ಕಟ್ಟಿಗೆಯ ಹೊರೆಯೊಂದೇ ತನಗೂ, ತನಗಾಗಿ ಬಾಯಿತೆರೆದು ಕುಳಿತಿರುವ ನಿತ್ಯ ತೆಗೂ ಮಧ್ಯೆ ನಿಂತಹಾಗಿತ್ತು....ಹೌದು ; ತನ್ನ ಜೀವನವು ಒಂದು ಹಿಡಿ ಕಟ್ಟಿಗೆಯ ಪ್ರಮಾಣಕ್ಕೆ ಸರಿಹೊಂದುತ್ತದೆ. ಬೆಂಕಿ ಒಂದೊಂದು ತುಂಡು ಗಳನ್ನು ಆವರಿಸುತ್ತ ಬರುವಂತೆ ನಾವು ಕೂಡ ತನ್ನನ್ನು ನಿಧಾನವಾಗಿ ಅಪ್ಪಳಿ ಸುತ್ತದೆ. ಕೊನೆಯ ತುಂಡು ಉರಿದು ಬೂದಿಯಾದಾಗ, ಹಿಮು ನುಗ್ಗುತ್ತದೆ, ಅಲ್ಲಿಗೆ ಜೀವನದ ಅಂತ್ಯ, ಸಾವಿನ ಜಯ. ಅಂದರೆ ಮೊದಲು ತನ್ನ ಕಾಲು, ಆಮೇಲೆ ಕೈಗಳು ; ಒಂದು ಕಡೆಯಿಂದ ಜಡತ್ವ ಚೇತನವನ್ನು ನುಂಗುತ್ತಾ ದೇಹಾದ್ಯಂತ ಪಸರಿಸುತ್ತದೆ. ತಲೆ ಮೊಣಕಾಲ ಮೇಲೆ ಬಿದ್ದಾಗ ಸಂಪೂರ್ಣ ವಿರಾಮ, ಪ್ರತಿಯೊಬ್ಬರೂ ಸಾಯಲೇಬೇಕಿರುವಾಗ ಇದಕ್ಕಿಂತಲೂ ಸುಲಭ ಸಾಧ್ಯ ಯಾವುದಿದೆ ?

ಅವನೇನೂ ಗೊಣಗುಟ್ಟಲಿಲ್ಲ. ಬಾಳ ನಿಯಮಕ್ಕೆ ತಲೆಬಾಗಲೇ ಬೇಕಲ್ಲವೇ! ಪ್ರಕೃತಿಯ ಮಡಿಲಲ್ಲಿ ಹುಟ್ಟಿ, ಪ್ರಕೃತಿಗಾಗಿಯೆ ಬೆಳೆದವನಿಗೆ ಅದರ ನಿಯಮ ಹೊಸದಲ್ಲ. ಆ ನಿಸರ್ಗ ನಿಯಮ ಎಲ್ಲಕ್ಕೂ ಅನ್ವಯವಾಗುವುದು. ಅದು ವ್ಯಕ್ತಿಯ ಹಿತವನ್ನು ಗಮನಿಸುವುದಿಲ್ಲ. ವ್ಯಕ್ತಿ ಒಂದು ಸಲಕರಣೆ ಮಾತ್ರ. ಅದರ ಆಸಕ್ತಿಯಿರುವುದು ಸಮಷ್ಟಿಯಲ್ಲಿ ; ಅಂದರೆ