ಪುಟ:ಬಾಳ ನಿಯಮ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಂಬಾಲಕನಿಗೆ ಅಂಗಿಯ ಒಳಜೋಬಿಗೆ ತುರುಕಿಕೊಂಡನು. ಉಳಿದ ನಾವಿಕರೂ ಕೂಡ ಹಲ್ಲುಕಿರಿದು, ಅದೇ ರೀತಿಯ ಸಂಭಾವನೆಗಳನ್ನು ಕೊಟ್ಟರು. ವಿಜ್ಞಾನಿಗಳು ಹೆಚ್ಚು ಮಾತನಾಡದೆ ಮುಂದಿನ ಕ್ರಮ ಜರುಗಿಸಿದರು. ಅವನನ್ನು ಆ ಜಾಗದಿಂದ ಕದಲಿಸಿ, ಒಬ್ಬಂಟಿಗನಾಗಿ ಓಡಾಡಲು ಏರ್ಪಾಟು ಮಾಡಿದರು. ಆತನ ಗೋಜಿಗೆ ಯಾರೂ ಹೋಗಲಿಲ್ಲ. ಅದೇ ಸಮಯದಲ್ಲಿ ವಿಜ್ಞಾನಿಗಳು ಆತ ಮಲಗುತ್ತಿದ್ದ ಸಣ್ಣ ಜಾಗವನ್ನು ಪರೀಕ್ಷಿಸಿದರು-ಅದರ ಗೋಡೆಯ ಮೇಲೆ ಸಾಲು ಸಾಲಾಗಿ ನಾವೆಯ ಗಟ್ಟಿ ಬಿಸ್ಕತ್ತುಗಳು ಅಂಟಿಕೊಂಡಿದ್ದವು ; ಅವನು ಮಲಗುತ್ತಿದ್ದ ಹಾಸಿಗೆಯ ಚೀಲವೂ ಕೂಡ ಅದರಿಂದಲೇ ತುಂಬಿಕೊಂಡಿತ್ತು ; ಯಾವ ಸಂದು ಮೂಲೆಯನ್ನು ನೋಡಿದರೂ ಅಲ್ಲೆಲ್ಲ ನಾವೆಯ ಬಿಸ್ಕತ್ತುಗಳು ! ಅಷ್ಟಾದರೂ ಅವನು ಹುಚ್ಚ ನಾಗಿರಲಿಲ್ಲ. ಮುಂದೆ ಏನಾದರೂ ಕಾಮ ಒದಗಿದರೆ, ಅದಕ್ಕೆ ತಕ್ಕ ಎಲ್ಲಿ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಂಡಿದ್ದನು ; ಅಷ್ಟೆ ! ಆ ಖಾಯಿಲೆಯಿಂದ ಅವನು ಇಂದಲ್ಲ ನಾಳೆ ಪಾರಾಗುತ್ತಾನೆಂದು ವಿಜ್ಞಾನಿಗಳು ಹೇಳಿದರು.

  • ಅವರು ಹೇಳಿದಂತೆಯೇ ಆಯಿತು ; (ಬೆಡ್ ಫೋರ್ಡ್' ಹಡಗನ್ನು ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿಯಲ್ಲಿ ಲಂಗರು ಹಾಕಿ ನಿಲ್ಲಿಸುವುದಕ್ಕಿಂತ ಮುಂಚೆಯೇ ಅವನು ಹುಷಾರಾದನು.

ಹಿಂಬಾಲಕನಿಗೆ “ ಏನೂ ಬೇಕಿಲ್ಲ, ಬಿಸಾಡಬಹುದು....” “ ಅಲ್ಲ ಮಗು, ಇಲ್ಲಿ ಕೇಳು. ಇದು ಸ್ವಲ್ಪಮಟ್ಟಿಗಾದರೂ ಶಕ್ತಿಯುತ ವಾಗಿಲ್ಲವೇ ? ಬರಿಯ ವಿಸ್ಕಿ ಮತ್ತು ಆಲ್ಗೊಹಾಲ್ ಅಷ್ಟೇನೂ ಒಳ್ಳೆಯದಲ್ಲ ; ಆದರೆ ಬ್ರಾಂದಿ, ದ್ರಾಕ್ಷಾಮದ್ಯದಿಂದ ಬಟ್ಟಿಯಿಳಿಸಿ ತೆಗೆದ ತೀಕ್ಷ್ಯ ಮಧ್ಯ ; ಅದರ ಜೊತೆಗೆ ರುಚಿಕರವಾದ ಮೆಣಸಿನಸಾರು ಮತ್ತು_” “ ಹಾಳಾಗಿ ಹೋಗಲಿ. ಈ ಬೆರಕೆಯ ಪಂಚ್ ಪಾನೀಯವನ್ನು ಮಾಡುವವರಾರು ? ....? ಹೊಗೆಯ ಸುರುಳಿಗಳ ಮಧ್ಯದಲ್ಲಿ ಮೇಲ್‌ ಮ್ಯೂಟ್ ಕಿಡ್ ನಿಂತಿದ್ದನು.