ಪುಟ:ಬಾಳ ನಿಯಮ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

+೧೦೮ ಬಾಳ ನಿಯಮ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡನು. ಊಟದ ಸಮಯದಲ್ಲಿ ವಿಜ್ಞಾನಿಗಳ ಮತ್ತು ಹಡಗಿನ ಅಧಿಕಾರಿಗಳ ಪಕ್ಕದಲ್ಲೇ ಕುಳಿತನು. ಆಹಾರ ಪದಾರ್ಥಗಳು ಯಥೇಚ್ಛವಾಗಿದ್ದವು. ಆ ದೃಶ್ಯವನ್ನು ನೋಡಿದೊಡನೆಯೆ ಅವನ ಮನಸ್ಸಿನಲ್ಲಿ ಸುಖದುಃಖ ಮಿಶ್ರಿತ ಭಾವನೆಗಳು ಮೇಲೇರಿ ಬಂದವು. ಇತರರು ಬಾಯಿಗೆ ಹಾಕಿಕೊಳ್ಳುತಿದ್ದ ಪ್ರತಿಯೊಂದು ತುತ್ತನ್ನೂ ಕುತೂಹಲ ದಿಂದ ಗಮನಿಸಿದನು. ' ಅಯ್ಯೋ, ಮುಗಿದುಹೋಯಿತೇ ' ಎಂದು ವಿಪರೀತ ದುಃಖವನ್ನು ಕಣ್ಣುಗಳ ಮೂಲಕ ಸೂಚಿಸಿದನು. ಅವನ ಬುದ್ದಿಯೇನೂ ಕೆಟ್ಟಿರಲಿಲ್ಲ; ಆದರೂ ಆ ವ್ಯಕ್ತಿಗಳನ್ನು ಊಟದ ಸಮಯದಲ್ಲಿ ಮಾತ್ರ ದ್ವೇಷಿಸುತ್ತಿದ್ದನು. ಈ ಆಹಾರ ಎಲ್ಲಿಯ ವರೆಗೆ ಸಾಕಾಗಬಹುದು? ಎಂಬ ಹೆದರಿಕೆ ಅವನನ್ನು ಪೀಡಿಸುತಿತ್ತು. ಆಹಾರ ಶೇಖರಣೆಯ ಬಗ್ಗೆ ಅಡಿಗೆಯವನನ್ನೂ, ಪರಿಚಾರಕ ನನ್ನೂ ಮತ್ತು ಕ್ಯಾಪ್ಟನ್ ಮಹಾಶಯನನ್ನೂ ವಿಚಾರಿಸಿದನು.. ಏನೂ ತೊಂದರೆಯಿಲ್ಲವೆಂದು ಅವರೆಲ್ಲರೂ ಅವನಿಗೆ ಭರವಸೆಯಿತ್ತರು. ಆದರೆ ಅವನು ಆ ಮಾತುಗಳನ್ನು ನಂಬಲಿಲ್ಲ. ಹಡಗಿನ ಉಗ್ರಾಣವನ್ನು ತಾನೇ ಉಪಾಯ ದಿಂದ ಇಣುಕಿ ನೋಡಿದನು. ಮನುಷ್ಯ ದಿನೇ ದಿನೇ ದಪ್ಪನಾಗುತ್ತ ಬಂದನು ! ಎಲ್ಲರ ಗಮನವೂ ಆ ಕಡೆ ಸೆಳೆಯಿತು. ವಿಜ್ಞಾನಿಗಳು ತಲೆ ಕೆರೆಯುತ್ತಾ ಏನೇನೊ ಊಹೆ ಮಾಡಿ ದರು ; ಮನುಷ್ಯನಿಗೆ ಹಾಕುವ ಆಹಾರವನ್ನು ಕಡಿಮೆ ಮಾಡಿದರು. ಆದರೆ ಅವನ ಸುತ್ತಳತೆ ಹೆಚ್ಚುತ್ತಲೇ ಇತ್ತು! ಎದೆಯ ಭಾಗ ಅಂಗಿಯನ್ನು ಉಬ್ಬಿಸುತಿತ್ತು ! * ನಾವಿಕರು ಹಲ್ಲುಕಿರಿದರು. ಅವರಿಗೆ ಗೊತ್ತಿರಬೇಕು.... ವಿಜ್ಞಾನಿಗಳು ಮನುಷ್ಯನ ಮೇಲೆ ಕಾವಲಿದ್ದು ಪರೀಕ್ಷಿಸಿದರು-ಬೆಳಗಿನ ಊಟವಾಗುವುದೇ ತಡ, ಅವನು ಒಂದು ಕಡೆ ನಿಲ್ಲುತ್ತಿರಲಿಲ್ಲ. ಅವಲಕ್ಷಣ ವಾಗಿ ಬಗ್ಗಿಕೊಂಡು ಮುಂದೆ ಮುಂದೆ ನಡೆಯುತ್ತಿದ್ದನು....ಒಮ್ಮೆ ತಿರುಕನಂತೆ ಅಂಗೈ ಚಾಚುತ್ತಾ ನಾವಿಕನನ್ನು ಕರೆದು ಮಾತನಾಡಿಸಿದನು. ಅದೇನು ಆಕರ್ಷ ಣೆಯೋ ಅಪಕರ್ಷಣೆಯೋ ತಿಳಿಯದು. ಅಂತೂ ನಾವಿಕ ನಗುತ್ತಾ ಹಲ್ಲುಕಿರಿದು, ಸಮುದ್ರ ರೊಟ್ಟಿಯ ಚೂರೊಂದನ್ನು ಅವನ ಕಡೆ ಎಸೆದನು. ಮನುಷ್ಯ ಥಟ್ಟನೆ ಅದನ್ನು ಅತ್ಯಾಶೆಯಿಂದ ಹಿಡಿದುಕೊಂಡನು. ಜಿಪುಣಾಗ್ರೇಸರನು ಬಂಗಾರದ ನಾಣ್ಯವನ್ನು ಹೇಗೆ ನೋಡುತ್ತಾನೆ ಹಾಗೆ, ಆ ರೊಟ್ಟಿಯ ಚೂರನ್ನು ಪರೀಕ್ಷಿಸಿ