ಪುಟ:ಬಾಳ ನಿಯಮ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಂಬಾಲಕನಿಗೆ ೧೧೧ ಮಾಡಿದೆ; ಪಾಕಶಾಸ್ತ್ರದ ವಿಶಿಷ್ಟತೆಯನ್ನೆಲ್ಲ ಖರ್ಚು ಮಾಡಿದೆ. ಕುಡಿದವರ ಮನಸ್ಸು ಸಡಿಲಗೊಂಡಿತು. ಆದರೂ ಒಬ್ಬರನ್ನೊಬ್ಬರು ಬೆನ್ನಟ್ಟಿ ಬಂದರು ! ನದಿಯ ತನಕ ಓಡೋಡಿ ಬಂದೆವು. ಜಲಮಾರ್ಗದಲ್ಲೂ ಗುಲ್ಲೆಬ್ಬಿಸುವಂತೆ ಬೇಟೆಯಾಟ ನಡೆಯಿತು. ಅದನ್ನು ನೀವು ನೋಡಿದ್ದರೆ ಚೆನ್ನಾಗಿತ್ತು !....” ಎಂದು ಹೇಳುತ್ತಿರುವಂತೆ ಎಲ್ಲರಲ್ಲೂ ಕೂತೂಹಲ ಕೆರಳಿತು. “ ಆದರೆ ಆ ಇಂಡಿಯನ್ ಹೆಂಗಸು ! . . .” ಎಂದು ಕೇಳಿದನು ಲೂಯಿಸವಾಯ್, ಅವನು ಕೆನಡದವನಾದರೂ ಫ್ರೆಂಚರ ಸಂಪರ್ಕದಿಂದ ಹುಟ್ಟಿದವನು. ಕಿಡ್ ಹೇಳುತ್ತಿದ್ದ ಕಥೆಯಲ್ಲಿ ಅವನು ತುಂಬ ಆಸಕ್ತನಾಗಿದ್ದನು. ಆ ಗಲಭೆಯ ಪ್ರಸಂಗವನ್ನು ಹೋದ ಚಳಿಗಾಲದಲ್ಲಿ ಯಾರೋ ಹೇಳಿದ್ದಂತೆ ಅವನಿಗೆ ಜ್ಞಾಪಕವಿತ್ತು, ಮೇಲ್ ಮೂವ್ ಕಿಡ್ ಎಷ್ಟಾದರೂ ಹುಟ್ಟು ಕಥೆಗಾರ, ಯಾವುದನ್ನೇ ಆಗಲಿ ಸ್ವಾರಸ್ಯವಾಗಿ ನಿರೂಪಿಸುವ ಕಲೆಗಾರಿಕೆ ಅವನಲ್ಲಿತ್ತು. ಸರಿ ; ಉತ್ತರ ಪ್ರದೇಶದ ಲೊಶಿನ್ವಾರನ ಶುದ್ಧ ಪ್ರೇಮದ ಕಥೆಯನ್ನು ಪ್ರಾರಂಭಿಸಿದನು. ಉತ್ತರದ ಒರಟು ಸಾಹಸಿಗಳು ತೀವ್ರಾಸಕ್ತಿಯಿಂದ ಆಲಿಸಿದರು. ಅವರ ಹೃದಯ ತಂತಿ ಮಿಡಿಯಿತು. ದಕ್ಷಿಣದ ಗೀಳು ಹಿಡಿಯಿತು. ಅಲ್ಲಿಯ ಬೆಚ್ಚಗಿನ ಹುಲ್ಲುಗಾವಲು ! ಅಲ್ಲಿ ದೊರೆಯುವಷ್ಟು ಮೋಜು ಇನ್ನೆಲ್ಲಿ ತಾನೇ ಸಿಕ್ಕಿತು ? ಇಲ್ಲಿಯ ಹಾಗೆ ಬರಿಯ ಸಾವಿನ ಛಳಿಯಲ್ಲ. ಏನನ್ನಾದರೂ ಮಾಡಬೇಕೆನ್ನುವವರಿಗೆ ಭರವಸೆಯನ್ನು ನೀಡುವ ಸ್ಥಳವದು . . . ಕಥೆಯ ಓಟ ಸಾಗಿತ್ತು,

  • ಪ್ರಾರಂಭದ ನೀರ್ಗಲ್ಲಿನ ಜಾಡು ಹಿಡಿಯುವುದಕ್ಕಿಂತ ಮುಂಚೆಯೆ, ನಾವು ಯೂಕಾನ್ ನದಿಯ ಮೇಲೇರಿದೆವು. ತಂಡದ ಜನ ಕಾಲು ಗಂಟೆ ಹಿಂದೆಬಿದ್ದರು ; ಅಷ್ಟೆ. ಆದರೆ ಅದೇ ನಮ್ಮನ್ನು ರಕ್ಷಿಸಿತು ; ಏಕೆಂದರೆ ಅವರು ಬರುವ ಹೊತ್ತಿಗೆ ನೀರಿನ ಹೊಡೆತ ಜಾಸ್ತಿಯಾಗಿ, ತಂಡದವರನ್ನು ಹಿಂದಕ್ಕೆ ತಳ್ಳಿ ಬಿಟ್ಟಿತು. ನಾವು ಅವರಿಗೆ ಕಾಣಸಿಗದಂತೆ ಪ್ರಕೃತಿಯೇ ಸಹಾಯ ಮಾಡಿತು. ಮುಂದುವರಿದೆವು. ಕಡೆಗೆ, ನುಲ್ಲು ಕೈಟೊ ಎಂಬ ಇಡೀ ಪಾಳೆಯ ನಮಗಾಗಿ ಕಾದಿತ್ತು ! ಅಲ್ಲೇ ನಾವು ಸಭೆ ಸೇರಿದ್ದು, ಆಗ ಮಂಗಳ ಕಾರ್ಯ ವನ್ನು ನಡೆಸಿದ ಫಾದರ್ ಕ್ಯೂಬೋ ಇಲ್ಲೇ ಇದ್ದಾರೆ ; ಅವರನ್ನೇ ಕೇಳಿ ...” ಎಂದು ಮುಗಿಸಿದನು.

ತನ್ನ ಹೆಸರು ಸೂಚನೆಯಾದ ಬಗ್ಗೆ ಫಾದರ್ ಝಬೋ ಸಂತೋಷ