ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೨ ಬಾಳ ನಿಯಮ ಪಟ್ಟನು. ಅವನು ರೋಮನ್ ಕ್ಯಾಥೋಲಿಕ್ ಮಂಡಲಿಗೆ ಸೇರಿದ ಹಿರಿಯ ನಾಗಿದ್ದನು. ತುಟಿಯ ಮೇಲಿದ್ದ ಹೊಗೆಸೊಪ್ಪಿನ ಪೈಪನ್ನು ಹೊರತೆಗೆದನು. ಹಿರಿತನದ ಹೆಚ್ಚಳದಿಂದ ಮುಗುಳು ನಗೆ ಬೀರಿದನು. ಆಗ ಕ್ಯಾಥೋಲಿಕ್, ಪ್ರಾಟಸ್ಟೆಂಟ್ ಮುಂತಾದ ಭೇದವಿಲ್ಲದೆ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು.

  • ಪ್ರಣಯ ಸಾಹಸ ಕಥೆಯನ್ನು ಕೇಳುತ್ತಿದ್ದ ಹಾಗೆಯೆ ಫಕ್ಕನೆ ಕುಣಿದಾತ ಲೂಯಿಸವಾಯ್, ಇದ್ದಕ್ಕಿದ್ದಂತೆ ಅವನ ಬಾಯಲ್ಲಿ ನೀರೂರಿತು !.... “ ದೇವರಾಣೆಯಿಟ್ಟು ಹೇಳುತ್ತೇನೆ. ಅವಳು ಸಣ್ಣ ಆಕಾರದ ಕೋಮಲ ಹೆಂಗಸಿರಬೇಕು. ಆದ್ದರಿಂದಲೇ ಮೇಸನ್ ಧೈರ್ಯವಹಿಸಿದನು !”

ಮದ್ಯ ಸಿದ್ಧವಾಯಿತು. ಟನ್ನು ಬಟ್ಟಲುಗಳಲ್ಲಿ ಪಂಚ್ ಪಾನೀಯ ವನ್ನು ಹಂಚಲಾಯಿತು. ತಣಿಸಲಾಗದವನೆಂದು ಹೆಸರು ಪಡೆದ ಬೀಟಲ್ಸ್, ಮದ್ಯದಲ್ಲೇ ಮುಳುಗಿಹೋದನು. ಅವನ ಸ್ಫೂರ್ತಿಯಂತೂ ಹೇಳತೀರದು. ತಕ್ಷಣ ಕೈ ಕಾಲು ಕುಣಿಸುತ್ತಾ ತನಗೆ ಅತ್ಯಂತ ಪ್ರಿಯವಾದ ಕುಡುಕರ ಹಾಡನ್ನು ಹಾಡಿದನು : ಸಾಸಪ್ರಸ್ ನವರಸ ನೋಡಿ ಸಾಸಪ್ರಸ್ ಮದ್ಯರಸ | ಕುಡಿಯುವನು ಹಿರಿಯನಹ ಹೆನ್ರಿವಾರ್ಡ್ ಬೀಚರನು || ಕುಡಿಯುವರು ರವಿವಾರ ದುಡಿವ ಅಧ್ಯಾಪಕರು || ಅಣೆಮಾಡುವೆ ಕೇಳಿ ತಿನ್ನಲಾಗದ ಹಣ್ಣ ರಸವಿದಲ್ಲ ಓಯ್ ! ತಿನ್ನಲಾಗದ ಹಣ್ಣ ರಸವಿದಲ್ಲ || ಆಣೆಮಾಡುವೆ ಕೇಳಿ ಸಾಸಪ್ರನ್ ಮದ್ಯರಸ | ಜಗದ ಫಲರಸದಂತೆ ಸುಖದ ಹವ್ಯಾಸ ....... ಎಲ್ಲರೂ ಬ್ಯಾಕಸ್ ದೇವತೆಯ ಭಕ್ತರಾಗಿ ಒಕ್ಕೊರಲಿನಿಂದ ಹಾಡಿನ ಹಿಮ್ಮೇಳಕ್ಕೆ ಸೇರಿದರು :

  • ಸಾಸನ್ ಮದ್ಯ ರಸ ನೋಡಿ ಸಾಸಪ್ರಸ್ ಮದ್ರಸ | ತಿನ್ನಲಾಗದ ಹಣ್ಣ ರಸವಿದು || ಆಣೆಮಾಡುವೆ ಕೇಳಿ ಸಾಸಪ್ರಸ್ ಮದ್ಯರಸ || ಜಗದ ಫಲರಸದಂತೆ ಸುಖದ ಹವ್ಯಾಸ.... ||”