ಪುಟ:ಬಾಳ ನಿಯಮ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿ೦ಬಾಲಕನಿಗೆ ಮೇಲ್ಮೂಟ್ ಕಿಡ್ ತಯಾರಿಸಿದ ಮದ್ಯ ಸಾಮಾನ್ಯವಲ್ಲ. ಅದರ ಪರಿಣಾಮ ಆಗಲೇ ಎದ್ದು ಕಾಣುತಿತ್ತು. ಅಲ್ಲಲ್ಲೇ ಬೀಡುಬಿಟ್ಟ ಪ್ರಯಾಣಿಕರು ಒಂದೇ ಜಾಡಿನಿಂದ ಬೇಸರಗೊಂಡಿದ್ದರು; ಅಂದು ಎಲ್ಲರೂ ಒಂದೆಡೆ ಸೇರಿ | ಮನಸ್ಸಿನ ಭಾರವನ್ನಿಳಿಸಲು ಅವಕಾಶ ಸಿಕ್ಕಿತು. ಸುತ್ತಲೂ ಸ್ನೇಹಪರ ವಾತಾ ವರಣ ಮಿಂಚಿತು. ಹಿಂದೆ ಆಗಿಹೋದ ಎಷ್ಟೋ ಸ್ವಾರಸ್ಯದ ಕಥೆಗಳೂ, ಹಾಡುಗಳೂ ಮತ್ತು ತಮಾಷೆಯ ಪ್ರಸಂಗಗಳೂ ಎಲ್ಲರ ಬಾಯ ಮೇಲೆ ನಲಿ ದಾಡಿದವು. ನಾಕಷ್ಟು ಪ್ರದೇಶಗಳಿಂದ ವಿದೇಶೀಯರೂ ಬಂದಿದ್ದರು. ಅವರು ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಆರೋಗ್ಯ ಭಾಗ್ಯ ಕೋರಿ ಸ್ವಸ್ತಿ ಪಾನಮಾಡಿದರು. “ಹೊಸ ಪ್ರಪಂಚದ ಬಾಲಪ್ರೌಢ ಅ೦ಕಲ್ ಸ್ಯಾಮನಿಗೆ ” ಎಂದು ಅಮೆರಿಕದ ಮಾದರಿ ಪ್ರಜೆಯ ಹೆಸರನ್ನು ಸೂಚಿಸಿ, ಸ್ವಸ್ತಿಪಾನ ಮಾಡಿದವನು ಆಂಗ್ಲೆಯನಾದ ಪ್ರಿನ್ಸ್ ; ಯಾ೦ಕಿಯಾದ ಬೀಟಲ್ಸ್ “ ಇಗೋ ರಾಣಿಯ ಭಾಗ್ಯಕ್ಕೆ ...ದೇವರು ಅವಳನ್ನು ಹರಸಲಿ”ಎಂದು ಕುಡಿದನು. ಹಾಗೆಯೇ ಜರ್ಮನ್ ವರ್ತಕರೂ ಇತರರೂ ತಮ್ಮ ತಮ್ಮ ಬಟ್ಟಲುಗಳನ್ನು ಮುಟ್ಟಿಸಿ ಪರಸ್ಪರ ಆರೋಗ್ಯ ಭಾಗ್ಯ ಕೋರಿದರು. ಆಗ ಮೇಲ್ಮೂಟ್ ಕಿಡ್ ಎದ್ದು ನಿಂತನು. ಕೈಯಲ್ಲಿ ಬಟ್ಟಲು ಹಿಡಿದಿದ್ದನು. ಏನು ಹೇಳುವುದು ? ಜಿಡ ಕಾಗದದಿಂದ ಮುಚ್ಚಲ್ಪಟ್ಟ ಕಿಟಕಿಯ ಕಡೆ ಕಣ್ಣನ್ನು ಹೊರಳಿಸಿದನು; ಮೂರು ಇಂಚುಗಳಷ್ಟು ದಟ್ಟ ವಾದ ನಂಜ) ಅದರ ಮೇಲೆ ಬಿದ್ದಿತ್ತು.. “ಈ ರಾತ್ರಿಯಲ್ಲಿ ನಾವು ತುಳಿದ ದಾರಿಯನು ಹಿಂಬಾಲಿಸಿ ಬರುವ ಮನುಷ್ಯನಿಗೆ ಆರೋಗ್ಯ ವಿರಲಿ ; ಆಹಾರ ಕೆಡದಿರಲಿ ; ನಾಯಿಗಳ ಕಾಲಿಗೆ ಶಕ್ತಿ ಬರಲಿ; ಆತನ ಕಡಿಗಳಲ್ಲಿ ಬೆಂಕಿಯ ಆರದಿರಲಿ....”, ಥಟ್ಟನೆ ಹೊಳೆದ ಈ ಮಾತುಗಳೇ ಅವನ ಸ್ವಸ್ತಿಪಾನದ ಮುನ್ನುಡಿಯಾಯಿತು. ಚಟ ಚಟ ! ಚಟ ಚಟ ! ನಾಯಿ ಚಾಪಟಿಯ ಸದ್ದು ; ಅವರಿಗೆ ಅದೇನೂ ಹೊಸದಲ್ಲ. ಹಾಗೆಯೆ ಮೇಲ್ಮ ಟುಗಳ ಕೆನೆತದ ಕೂಗಾಟವೂ ಕೇಳಿಸಿತು. ಇಕ್ಕಟ್ಟಿನ ಜಾಗವಾದರೂ ಲಕ್ಷಿಸದೆ ಚಕಚಕನೆ ಚಕ್ರ ತಿರುಗಿಸುತ್ತಾ ಸ್ಟೇಜ್ಗಾಡಿಯೊಂದು ಹೊರಟರಬೇಕು ! ಸಂಭಾಷಣೆ ಕಡಿಮೆಯಾಗುತ್ತ ಬಂತು. ಯಾರು ಬರುತ್ತಿರಬಹುದು ಎಂದು ಎಲ್ಲರೂ ಕುತೂಹಲಿಗಳಾದರು.