ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೪ ಬಾಳ ನಿಯಮ ದವಡೆಯೇಟು ತಿಂದ ನಾಯಿಗಳು ಗುರುಗುರು ಎನ್ನು ತಿದ್ದವು. ನೋವನ್ನು ಸಹಿಸಲಾರದೆ ಬೊಗಳುತಿದ್ದವು. ಒಳಗಿದ್ದವರ ಕಿವಿಗಳು ಇಂಥ ಗಲಾಟೆಯನ್ನು ಎಷ್ಟೋ ಬಾರಿ ಕೇಳಿದ್ದವು. ಎಲ್ಲರಿಗಿಂತಲೂ ಸೂಕ್ಷ್ಮಮತಿಯಾದ ಕಿಡ್ ಹೇಳಿದನು: “ಯಾರಯ್ಯಾ ಅವನು ? ಎಷ್ಟಾದರೂ ಹಳೆಯ ಕಾಲದವನು. ತನ್ನ ಮತ್ತು ತನ್ನ ನಾಯಿಗಳ ಯೋಗಕ್ಷೇಮ ಬಿಟ್ಟರೆ ಮತ್ತೇನೂ ತಿಳಿಯದು.” “ನಿಜ: ಯಾವನೋ ಅಪರಿಚಿತ ತನ್ನ ನಾಯಿಗಳಿಗೆ ಮಾತ್ರ ಆಹಾರ ತುರುಕಿ, ನಮ್ಮ ನಾಯಿಗಳನ್ನು ಒದ್ದೋಡಿಸುತ್ತಿರಬೇಕು....” ಎಂದು ಇತರರು ಅಭಿಪ್ರಾಯಪಟ್ಟರು. ಎಲ್ಲರೂ ಕಾದಿದ್ದಂತೆ ಬಾಗಿಲು ಸದ್ದಾಯಿತು. ಸರಕ್ಕನೆ ಬಾಗಿಲು ತಾನಾಗಿಯೆ ತೆರೆಯಿತು. ಅಪರಿಚಿತನಾದ ವ್ಯಕ್ತಿಯೊಬ್ಬ ಒಳಕ್ಕೆ ಪ್ರವೇತಿ ಸಿದನು. ದೀಪಗಳಿಂದ ತುಂಬಿಹೋಗಿದ್ದ ಜಾಗವನ್ನು ನೋಡಿದೊಡನೆಯೆ ಮಂಕುಕವಿದವನಂತೆ, ಕಣಕಾಲ ಬಾಗಿಲ ಬಳಿಯೆ ನಿಂತನು. ಎಲ್ಲರೂ ತನ್ನನ್ನು ಸೂಕ್ಷ್ಮವಾಗಿ ನೋಡಲು ಅವನೇ ಅವಕಾಶಮಾಡಿಕೊಟ್ಟನು. ಕಣ್ಣು ಕೋರೈಸುವಂಥ ವ್ಯಕ್ತಿತ್ವ ಅವನದು. ಅವನು ಧರಿಸಿದ್ದ ಉತ್ತರ ಧ್ರುವದ ತುಪ್ಪುಳು ಚರ್ಮದ ಉಡುಪು ಎಂಥವನನ್ನಾದರೂ ಆಕರ್ಷಿಸುತಿತ್ತು. ಅವನು ಆರು ಅಡಿಗಳನ್ನೂ ಮಾರಿಸಿದ ಲಂಬುವಾಗಿದ್ದನು. ಎತ್ತರಕ್ಕೆ ತಕ್ಕಂತೆ ಭುಜಗಳೂ ಅಗಲವಾಗಿದ್ದವು. ವಿಶಾಲ ವಕಸಳ, ನುಣುಪಾದ ಮುಖ ಚಳಿಯ ಹೊಡೆತದಿಂದ ನಸುಗೆಂಪಾಗಿ ಮಿನುಗುತಿತ್ತು. ಕಣ್ಣಿನ ಹುಬ್ಬ ಹಾಗೂ ಉದ್ದನೆಯ ರೆಪ್ಪೆಗೂದಲು-ಇವುಗಳ ಮೇಲೆ ಮಂಜಿನ ಕಣಗಳು ಕೂತಿದ್ದರಿಂದ ಬೆಳ್ಳಗೆ ಕಾಣಿಸುತಿತ್ತು, ತೋಳನ ಚರ್ಮದಿಂದ ತಯಾರಾದ ಅವನ ಟೊಪ್ಪಿಗೆ ಸ್ವಲ್ಪ ಮೇಲಕ್ಕೆ ಹಾರಿತ್ತು. ರಾತ್ರಿಯ ಕತ್ತಲಲ್ಲಿ ಆಗತಾನೆ ಹೊರಬಂದ ಹಿಮರಾಜನಂತೆ ಕಂಡನು. ನಡುವಿನ ಬೆಲ್ಟಿಗೆ ಎರಡು ದೊಡ್ಡ ದಾದ ರಿವಾಲ್ವರುಗಳನ್ನು ಸಿಕ್ಕಿಸಿದ್ದನು. ಇನ್ನೊಂದು ತುದಿಯಲ್ಲಿ ಬೇಟೆಯ ಚಾಕುವೊಂದು ನೇತಾಡುತಿತ್ತು. ನಾಯಿ ಚಾಟ ಕೈಯಲ್ಲೇ ಇತ್ತು. ಭುಜಕ್ಕೇರಿಸಿದ್ದ ಹೊಗೆ ಬಾರದ ದೊಡ್ಡ ಬಂದೂಕ ಇತ್ತೀಚಿನ ಮಾದರಿಯದು. ಅವನು ಭದ್ರವಾದ ಹೆಜ್ಜೆಯಿಡುತ್ತ ಮುಂದಕ್ಕೆ ಬಂದನು. ನೋಡಿದಾಗ ಬಹಳ ಆಯಾಸಪಟ್ಟವನಂತಿದ್ದನು. ಅಶುಭವನ್ನು ಸೂಚಿಸುವಂಥ ಮೌನ ಆವರಿಸಿತು. ಆದರೆ ಆ ವ್ಯಕ್ತಿಯೇ ತುಂಬುಹೃದಯದಿಂದ, “ನನ್ನ ಸ್ನೇಹಿತರೇ, ಹೇಗಿದ್ದೀರಿ ? ಸ್ವಸ್ಥವೇ ?” ಎಂದನು.